12 ಗಂಟೆ ಅವಧಿ… ಆತ್ಮಹತ್ಯೆಗೂ ಕೆಲವು ಗಂಟೆ ಮುನ್ನ ಸುಶಾಂತ್ ಮಾಡಿದ್ದು “ಆ” 4 ಮೊಬೈಲ್ ಕರೆ!

10.25ಕ್ಕೆ ಅಡುಗೆಯಾತ ನೀರಜ್ ಸುಶಾಂತ್ ಬೆಡ್ ರೂಂ ಬಾಗಿಲನ್ನು ಬಡಿದು ಏನು ಊಟ ತಯಾರು ಮಾಡಲಿ ಎಂದು ಕೇಳಿದ್ದ

Team Udayavani, Jun 15, 2020, 4:40 PM IST

12 ಗಂಟೆ ಅವಧಿ… ಆತ್ಮಹತ್ಯೆಗೂ ಕೆಲವು ಗಂಟೆ ಮುನ್ನ ಸುಶಾಂತ್ ಮಾಡಿದ್ದು “ಆ” 4 ಮೊಬೈಲ್ ಕರೆ

ಮುಂಬೈ:ಬಾಲಿವುಡ್ ಯುವ ಪ್ರತಿಭಾವಂತ ನಟ ಸುಶಾಂತ್ (34ವರ್ಷ)  ಆತ್ಮಹತ್ಯೆ ಘಟನೆ ಬಗ್ಗೆ ಇಡೀ ಬಾಲಿವುಡ್ ಶಾಕ್ ಗೆ ಒಳಗಾಗಿದೆ…ಮತ್ತೊಂದೆಡೆ ಸುಶಾಂತ್ ಆತ್ಮಹತ್ಯೆಗೆ ಶರಣಾಗುವ ಕೆಲವೆ ಗಂಟೆಗಳ ಮೊದಲು ಮಾಡಿರುವ ನಾಲ್ಕು ಫೋನ್ ಕರೆಗಳ ಬಗ್ಗೆ ಮುಂಬೈ ಪೊಲೀಸರು ಇದೀಗ ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

ಸುಶಾಂತ್ ಸಿಂಗ್ ರಜಪೂತ್ (ಮುಂಜಾನೆ) 1.47ನಿಮಿಷಕ್ಕೆ ಮೊದಲು ಕರೆ ಮಾಡಿದ್ದು ಪ್ರೀತಿಯ ಗೆಳತಿ ರಿಯಾ ಚಕ್ರವರ್ತಿಗೆ, ಆದರೆ ಆಕೆ ಕರೆಯನ್ನು ಸ್ವೀಕರಿಸಿರಲಿಲ್ಲವಾಗಿತ್ತು. ಕೆಲವೇ ಕ್ಷಣಗಳಲ್ಲಿ ಸುಶಾಂತ್ ಆತ್ಮೀಯ ಗೆಳೆಯ ಮಹೇಶ್ ಶೆಟ್ಟಿಗೆ ಕರೆ ಮಾಡಿದ್ದರು..ಆ ಕರೆಯನ್ನೂ ಮಹೇಶ್ ಸ್ವೀಕರಿಸಿರಲಿಲ್ಲವಾಗಿತ್ತು.

ಭಾನುವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗುವ ಮೊದಲು ಮಹೇಶ್ ಮಿಸ್ ಕಾಲ್ ಗಮನಿಸಿ, ಸುಶಾಂತ್ ಗೆ ಕರೆ ಮಾಡಿದ್ದರು. ಆದರೆ ಈ ವೇಳೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲವಾಗಿತ್ತು. ಬಳಿಕ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಸುಶಾಂತ್ ಬೆಳಗ್ಗೆ 9.30ಕ್ಕೆ ಮತ್ತೆ ಮಹೇಶ್ ಗೆ ಕರೆ ಮಾಡಲು ಪ್ರಯತ್ನಿಸಿದಾಗ ಅದು ವಿಫಲವಾಗಿತ್ತು ಎಂದು ವರದಿ ವಿವರಿಸಿದೆ.

ತನಿಖೆಯ ಪ್ರಕಾರ, ಸುಶಾಂತ್ ಬ್ರೇಕ್ ಫಾಸ್ಟ್ ಗೂ ಮುನ್ನ ಒಂದು ಗ್ಲಾಸ್ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದಿದ್ದರು. 10.25ಕ್ಕೆ ಅಡುಗೆಯಾತ ನೀರಜ್ ಸುಶಾಂತ್ ಬೆಡ್ ರೂಂ ಬಾಗಿಲನ್ನು ಬಡಿದು ಏನು ಊಟ ತಯಾರು ಮಾಡಲಿ ಎಂದು ಕೇಳಿರುವುದಾಗಿ ವರದಿ ತಿಳಿಸಿದೆ.

ಸುಶಾಂತ್ ಗೆಳೆಯ ಕೂಡಾ ಈ ಸಂದರ್ಭದಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಇದ್ದಿದ್ದ. ಆತ 11ಗಂಟೆಗೆ ಎದ್ದು ಸುಶಾಂತ್ ಬಗ್ಗೆ ಅಡುಗೆಯವನ ಬಳಿ ವಿಚಾರಿಸಿದ್ದನಂತೆ. ಸ್ವಲ್ಪ ಸಮಯದ ನಂತರ ಆತ ಸುಶಾಂತ್ ಕೋಣೆಯ ಬಾಗಿಲನ್ನು ಬಡಿದಿದ್ದ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲವಾಗಿತ್ತು. ಆತನ ಮೊಬೈಲ್ ಗೆ ಕರೆ ಮಾಡಿದಾಗ ರಿಂಗ್ ಆಗುತ್ತಿದ್ದ ಶಬ್ದ ಹೊರಗೆ ಕೇಳಿಸುತ್ತಿತ್ತು. ಈ ವಿಷಯವನ್ನು ಸಹೋದರಿ ರಿತುಗೆ ಮಾಹಿತಿ ನೀಡಿದ್ದ ಎಂದು ವರದಿ ಹೇಳಿದೆ.

ಬಳಿಕ ರಿತು ಕೂಡಾ ಸುಶಾಂತ್ ಅಪಾರ್ಟ್ ಮೆಂಟ್ ಗೆ ಆಗಮಿಸಿದ್ದಳು. ಅಷ್ಟೇ ಅಲ್ಲ ಬೆಡ್ ರೂಂ ಬಾಗಿಲು ತೆಗೆಯಲು ಕೀ ಮೇಕರ್ ಗೆ ಕರೆ ಮಾಡಿ ತಿಳಿಸಿದ್ದರು. ಏತನ್ಮಧ್ಯೆ ಘಟನೆ ಬಗ್ಗೆ ರಿತು ಪತಿಗೆ ವಿಷಯವನ್ನು ಹೇಳಿದ್ದರು. ಅವರು ಹರ್ಯಾಣ ಸರ್ಕಾರದ ಅಧಿಕಾರಿಯಾಗಿದ್ದರು, ಅವರು ಕೂಡಲೇ ಮುಂಬೈ ಪೊಲೀಸ್ ಕಮಿಷನರ್ ಪರಂ ಬೀರ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ಮಧ್ಯಾಹ್ನ 12.25ಕ್ಕೆ ಬೆಡ್ ರೂಂ ತೆರೆದಾಗ ಸುಶಾಂತ್ ನೇಣಿಗೆ ಶರಣಾಗಿರುವುದು ಕಂಡು ಬಂದಿತ್ತು. ವೈದ್ಯರು ಬಂದು ಪರೀಕ್ಷಿಸಿದ್ದರು ಆದರೆ ಸುಶಾಂತ್ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ತಂದೆ ಕೆಕೆ ಸಿಂಗ್ ಹಾಗೂ ನಾಲ್ವರು ಸಹೋದರಿಯರನ್ನು ಸುಶಾಂತ್ ಅಗಲಿದ್ದಾರೆ. 2002ರಲ್ಲಿ ತಾಯಿ ನಿಧನರಾಗಿದ್ದರು. ಕಳೆದ ಕೆಲವು ತಿಂಗಳಿನಿಂದ ಸುಶಾಂತ್ ಮಾನಸಿಕ ಒತ್ತಡಕ್ಕೊಳಗಾಗಿರುವುದಾಗಿ ವರದಿ ವಿವರಿಸಿದೆ.

ಟಾಪ್ ನ್ಯೂಸ್

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರು

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರು

ಆಗಸದೆತ್ತರಕೆ ಬೆಳೆದ ಮಣಿಪಾಲದ ಬಳ್ಳಿ

ಆಗಸದೆತ್ತರಕೆ ಬೆಳೆದ ಮಣಿಪಾಲದ ಬಳ್ಳಿ

ಅಸಾಧಾರಣ ಅಪ್ರಮೇಯ; ಅಧೀನರ ವ್ಯಕ್ತಿತ್ವ ಅಳೆದು ಬೆಳೆಸುತ್ತಿದ್ದವರು

ಅಸಾಧಾರಣ ಅಪ್ರಮೇಯ; ಅಧೀನರ ವ್ಯಕ್ತಿತ್ವ ಅಳೆದು ಬೆಳೆಸುತ್ತಿದ್ದವರು

ಇಂದಿನ ಶಿಕ್ಷಣ, ವಸತಿ ಸಾಲದ ಜನಪ್ರಿಯತೆಗೆ ಅಂದೇ ಮುನ್ನುಡಿ

ಇಂದಿನ ಶಿಕ್ಷಣ, ವಸತಿ ಸಾಲದ ಜನಪ್ರಿಯತೆಗೆ ಅಂದೇ ಮುನ್ನುಡಿ

ಲಸಿಕಾ ಅಭಿಯಾನ: ವರ್ಷದಲ್ಲಿ ಚರಿತ್ರಾರ್ಹ ಸಾಧನೆ

ಲಸಿಕಾ ಅಭಿಯಾನ: ವರ್ಷದಲ್ಲಿ ಚರಿತ್ರಾರ್ಹ ಸಾಧನೆ

ನೇತಾಜಿ ಸ್ತಬ್ಧಚಿತ್ರವೂ ಕೇಂದ್ರದಿಂದ ತಿರಸ್ಕೃತ: ಮಮತಾ ಬ್ಯಾನರ್ಜಿ ಕಿಡಿ

ನೇತಾಜಿ ಸ್ತಬ್ಧಚಿತ್ರವೂ ಕೇಂದ್ರದಿಂದ ತಿರಸ್ಕೃತ: ಮಮತಾ ಬ್ಯಾನರ್ಜಿ ಕಿಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dadqeq

ಚಿರಂಜೀವಿಯ ಬಹುನಿರೀಕ್ಷಿತ ‘ಆಚಾರ್ಯ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

lata-mangeshkar

ಇನ್ನೂ ಐಸಿಯುನಲ್ಲಿದ್ದಾರೆ ಲತಾ ಮಂಗೇಶ್ಕರ್: ಆರೋಗ್ಯ ಮಾಹಿತಿ ನೀಡಿದ ವೈದ್ಯರು

Dhanush

ಡಿಸ್ನಿ+ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ ಧನುಶ್ ಮುಂದಿನ ಚಿತ್ರ

ಚಿರಂಜೀವಿ-ರಾಮ್ ಚರಣ್ ಅಭಿನಯದ ‘ಆಚಾರ್ಯ’ ಬಿಡುಗಡೆ ಮುಂದೂಡಿಕೆ

ಚಿರಂಜೀವಿ-ರಾಮ್ ಚರಣ್ ಅಭಿನಯದ ‘ಆಚಾರ್ಯ’ ಬಿಡುಗಡೆ ಮುಂದೂಡಿಕೆ

ಅಲ್ಲು ಅರ್ಜುನ್‌ಗೀಗ ಒಂದೂವರೆ ಕೋಟಿ ಫಾಲೋವರ್ಸ್‌!

ಅಲ್ಲು ಅರ್ಜುನ್‌ಗೀಗ ಒಂದೂವರೆ ಕೋಟಿ ಫಾಲೋವರ್ಸ್‌!

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರು

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರು

ಆಗಸದೆತ್ತರಕೆ ಬೆಳೆದ ಮಣಿಪಾಲದ ಬಳ್ಳಿ

ಆಗಸದೆತ್ತರಕೆ ಬೆಳೆದ ಮಣಿಪಾಲದ ಬಳ್ಳಿ

ಅಸಾಧಾರಣ ಅಪ್ರಮೇಯ; ಅಧೀನರ ವ್ಯಕ್ತಿತ್ವ ಅಳೆದು ಬೆಳೆಸುತ್ತಿದ್ದವರು

ಅಸಾಧಾರಣ ಅಪ್ರಮೇಯ; ಅಧೀನರ ವ್ಯಕ್ತಿತ್ವ ಅಳೆದು ಬೆಳೆಸುತ್ತಿದ್ದವರು

ಇಂದಿನ ಶಿಕ್ಷಣ, ವಸತಿ ಸಾಲದ ಜನಪ್ರಿಯತೆಗೆ ಅಂದೇ ಮುನ್ನುಡಿ

ಇಂದಿನ ಶಿಕ್ಷಣ, ವಸತಿ ಸಾಲದ ಜನಪ್ರಿಯತೆಗೆ ಅಂದೇ ಮುನ್ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.