ತುಂಬಾ ದುಬಾರಿ ‘‘ರಾಧೆ ಶ್ಯಾಮ್’… ಪ್ರಭಾಸ್ ಕಾಸ್ಟ್ಯೂಮ್ ಗೆ ಎಷ್ಟು ಕೋಟಿ ಗೊತ್ತಾ ?
Team Udayavani, Feb 15, 2021, 2:15 PM IST
ಪ್ರೇಮಿಗಳ ದಿನಕ್ಕೆ ಟೀಸರ್ ಬಿಡುಗಡೆ ಮಾಡಿ ಸಿನಿ ರಸಿಕರ ಹೃದಯ ಕದ್ದ ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್
’ ಚಿತ್ರದ ಕುರಿತು ಇದೀಗ ಮತ್ತೊಂದು ಕುತೂಹಲಕಾರಿ ವಿಷಯ ಟಾಕ್ ಆಫ್ ದಿ ಟೌನ್ ಆಗಿದೆ.
ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ರಾಧೆ ಶ್ಯಾಮ್ ಸಿನಿಮಾದ ಬಜೆಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ಈ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ವೇಷಭೂಷಣಕ್ಕೆ ಚಿತ್ರತಂಡ ವ್ಯಯಿಸುತ್ತಿರುವ ಮೊತ್ತ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹೌದು, ಹೇಳಿ ಕೇಳಿ ಇದು ಬಿಗ್ ಬಜೆಟ್ ಸಿನಿಮಾ. ಅದರಲ್ಲೂ ಪ್ರಭಾಸ್ ಅವರಂತ ಸ್ಟಾರ್ ನಟ ಅಭಿನಯಿಸುತ್ತಿರುವ ಚಿತ್ರ. ಅಂದ್ಮೇಲೆ ಸಿನಿಮಾದ ಬಜೆಟ್ ಕೂಡ ಸ್ವಲ್ಪ ಜಾಸ್ತಿನೆ ಇದೆ. ಸದ್ಯ ರಿವೀಲ್ ಆಗಿರುವ ಮಾಹಿತಿ ಪ್ರಕಾರ ಈ ಚಿತ್ರದಲ್ಲಿ ಪ್ರಭಾಸ್ ತೊಡಲಿರುವ ಉಡುಗೆಗಳಿಗೆ ಬರೋಬ್ಬರಿ 6 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರಂತೆ.
ನಟ ಪ್ರಭಾಸ್ ಚಿತ್ರದುದ್ದಕ್ಕೂ ವಿಶೇಷವಾಗಿ ಸಿದ್ಧಪಡಿಸಲಾಗುವ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಕಾಸ್ಟ್ಯೂಮ್ ತಯಾರಿ ಕೆಲಸ ಕೂಡ ಶುರುವಾಗಿದೆಯಂತೆ.
ಇನ್ನು ರಾಧಾ ಕೃಷ್ಣ ಕುಮಾರ ನಿರ್ದೇಶನದ ‘ರಾಧೆ ಶ್ಯಾಮ್’ ಚಿತ್ರವನ್ನು ಗುಲ್ಸ್ಯಾನ್ ಕುಮಾರ ಹಾಗೂ ಟಿ-ಸಿರಿಸ್ ನಿರ್ಮಾಣ ಮಾಡುತ್ತಿದೆ. ಪ್ರಭಾಸ್ ಅವರ ಜತೆ ನಟಿ ಪೂಜಾ ಭಟ್ ತೆರೆ ಮೇಲೆ ರೊಮ್ಯಾನ್ಸ್ ಮಾಡಲಿದ್ದಾರೆ. ಇದೇ ಜುಲೈ 30 ಕ್ಕೆ ಕನ್ನಡ, ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಯಲ್ಲಿ ರಾಧೆ ಶ್ಯಾಮ್ ಬಿಡುಗಡೆಯಾಗಲಿದೆ. ನಿನ್ನೆಯಷ್ಟೆ ರಿಲೀಸ್ ಆದ ಚಿತ್ರದ ಟೀಸರ್ ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 55 ಲಕ್ಷ ವೀಕ್ಷಣೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Sandalwood: ಗಾಡ್ ಪ್ರಾಮಿಸ್ಗೆ ಸ್ಕ್ರಿಪ್ಟ್ ಪೂಜೆ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್ ನಿರೀಕ್ಷೆ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ