65ನೇ ಅಮೆಜಾನ್ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ; ಖುರಾನಾ,ಅಲಿಯಾ, ತಾಪ್ಸಿಗೆ ಪ್ರಶಸ್ತಿ ಕಿರೀಟ

Team Udayavani, Feb 17, 2020, 6:29 PM IST

ಅಸ್ಸಾಂ: 65ನೇ ಅಮೆಜಾನ್ ಫಿಲ್ಮ್ ಫೇರ್ ಪ್ರಶಸ್ತಿ 2020 ಗುವಾಹಟಿಯ ಇಂದಿರಾಗಾಂಧಿ ಅಥ್ಲೇಟಿಕ್ ಸ್ಟೇಡಿಯಂನಲ್ಲಿ ನಡೆಯಿತು. ಬಾಲಿವುಡ್ ನ ಅಲಿಯಾ ಭಟ್, ವರುಣ್ ಧವನ್, ತಾಪ್ಸಿ ಪನ್ನು, ಮಾಧುರಿ ದೀಕ್ಷಿತ್ ಮುಂತಾದವರು ರೆಡ್ ಕಾರ್ಪೆಟ್ನ ಮೇಲೆ ತಮ್ಮ ಮೋಡಿ ಮಾಡಿದರು.

ಪ್ರೇಕ್ಷಕರು ತಮ್ಮ ನೆಚ್ಚಿನ ಬಾಲಿವುಡ್ ಸ್ಟಾರ್ ಗಳ  ಅದ್ಭುತ ಪ್ರದರ್ಶನ ಕಣ್ತುಂಬಿಸಿಕೊಂಡರು. ಇನ್ನು ಎಲ್ಲಾ ಶೋಮೆನ್ ಗಳಿಗೆ ವಿಶೇಷ ಗೌರವ ಸಲ್ಲಿಸಲು ಆಯುಷ್ಮಾನ್ ಖುರಾನಾ ಅವರು ರೆಟ್ರೋ ಮತ್ತು ಬಾಲಿವುಡ್ ನ ಇತ್ತೀಚಿನ ಬೀಟ್ ಗಳಾದ ಜೀನಾ ಯಹಾ, ಏ ದಿಲ್ ನಾ ಹೋತಾ ಬೆಚಾರಾ, ಯಾಹೋ ಯಾಹೋ ಬಾಬು ಮೋಶೈ ಮುಂತಾದವುಗಳ ಪ್ರದರ್ಶನ ನೀಡಿದರು.

ಇನ್ನು ಮಾಧುರಿ ದೀಕ್ಷಿತ್ ನಮ್ಮ ದೇಶದ ಸುವರ್ಣ ಕಂಠಗಳ ಹಾಡುಗಳಾದ ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ (ಲತಾ ಮಂಗೇಶ್ಕರ್), ಇನ್ ಅಂಖೋ(ಆಶಾ ಬೋಸ್ಲೆ), ಚೋಲಿ ಕೆ ಪಿಚೆ ಕ್ಯಾ ಹೇ (ಅಲ್ಕಾ ಯಾಗ್ನಿಕ್) ಇತರೆ ಹಾಡುಗಳ ಮೇಲೆ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

ಕಾವಾನ್ ಕಾವಾನ್, ಮಾ ತುಜೆ ಸಲಾಂ, ವಂದೇ ಮಾತರಂ ಮತ್ತು ಸುನೋ ಗೌರ್ ಸೆ ದುನಿಯಾ ವಾಲೊ ಮುಂತಾದ ಹಾಡುಗಳಲ್ಲಿ ವರುಣ್ ಧವನ್ ಅವರು ತಮ್ಮ ಆ್ಯಕ್ಷನ್ –ಪ್ಯಾಕ್ ಪ್ರದರ್ಶನ ನೀಡಿದರು.

ಇತ್ತೀಚಿನ ಹಾರ್ಟ್ ಥ್ರೋಬ್ ಕಾರ್ತಿಕ್ ಆರ್ಯನ್ ಫಿಲ್ಮ್ ಫೇರ್ ವೇದಿಕೆಯಲ್ಲಿ ಒನ್ ಟು ಕಾ ಫೋರ್, ಕಾಲಿ ಕಾಲಿ ಆಂಖೈನ್, ಚೈಯ್ಯ ಚೈಯ್ಯ, ಓ ಓಹೋ ಜಾನೇ ಜಾನಾ, ಹಾನ್ ಮೈನ್ ಗಲತ್, ಆಹೋ ಆಹೋ ಹಾಡುಗಳ ಅದ್ಭುತ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಮೋಡಿ ಮಾಡಿದರು.

ಫಿಲ್ಮ್ ಫೇರ್ ಆರ್.ಡಿ ಬರ್ಮನ್ ಪ್ರಶಸ್ತಿ ಆವೃತ್ತಿಯೊಂದಿಗೆ 25 ವರ್ಷಗಳನ್ನು ಪೂರೈಸಿದೆ. ಮತ್ತು ಈ ಸಂದರ್ಭದಲ್ಲಿ ಆ ದೇಖೆ ಝಾರ, ಚಾಂದ ಮೇರಾ ದಿ, ಮೆಹಬೂಬಾ ಮೆಹಬೂಬ, ದುನಿಯಾ ಮೇ ಲೋಗೋ ಕೋ ಹಾಗೂ ಯಮ್ಮ ಯಮ್ಮ ಕ್ಲಾಸಿಕ್ ಹಾಡುಗಳ ಮೂಲಕ ಪ್ರೇಕ್ಷಕರನ್ನು ಕೂಡ ಕುಣಿಯುವಂತೆ ಮಾಡಿದರು ಅಧ್ಬುತ ಮನರಂಜನೆಗಾರ ರಣವೀರ್ ಸಿಂಗ್ .

ಇನ್ನು ಬಹುಮುಖ ಪ್ರತಿಭೆ ವಿಕ್ಕಿ ಕೌಶಲ್ 65ನೇ ಫಿಲ್ಮ್ ಫೇರ್ ಪ್ರಶಸ್ತಿ ಸಂದರ್ಭದಲ್ಲಿ ಪಾಪಾ ಕೇಹ್ತೆ ಹೈ ಬಡಾ ನಾಮ್ ಕರೇಗಾ, ರುಕ್ ಜಾ ಓ ದಿಲ್ ದಿವಾನೆ, ಕೋಹಿ ಮಿಲ್ ಗಯಾ, ಸೆನೋರಿಟಾ ಮತ್ತು ಮಲ್ಹಾರಿ ಮುಂತಾದ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಇನ್ನು ಕಾರ್ಯಕ್ರಮದ ಮುಕ್ತಾಯದ ಸಮಯದಲ್ಲಿ ಅಕ್ಷಯ್ ಕುಮಾರ್ ಅವರು ತೇರಿ ಮಿಟ್ಟಿ ಶೈತಾನ್ ಕಾ ಸಾಲಾ, ಲಾಲ ಗಾಗ್ರಾ ಮತ್ತು ಸೌದಾ ಖರಾ ಖರಾ ಮುಂತಾದ ಹಾಡುಗಳಿಗೆ ಅದ್ಭುತವಾದ ಪ್ರದರ್ಶನ ನೀಡಿದರು. ಗ್ಲ್ಯಾಮರ್ ನ ರಾಜಾ ಕರಣ್ ಜೋಹರ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಅಧ್ಬುತವಾದ ನಿರೂಪಣೆಯಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದರು. ಸಾಂಪ್ರದಾಯಿಕ ಅಸ್ಸಾಮೀಸ್ ಜಾನಪದ ನೃತ್ಯದ ವಿಶೇಷ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಗಲ್ಲಿ ಬಾಯ್ ಚಿತ್ರಕ್ಕಾಗಿ ಜೋಯಾ ಅಖ್ತರ್  ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಅಲ್ಲದೇ ಈ ಸಿನಿಮಾ ಬರೋಬ್ಬರಿ 13 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಯುಷ್ಮಾನ್ ಖುರಾನಾ ಮತ್ತು ಭೂಮಿ ಪಡ್ನೇಕರ್, ತಾಪ್ಸಿ ಪನ್ನು ಅವರು ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ (ಪುರುಷ) ಮತ್ತು ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

65ನೇ ಅಮೆಜಾನ್ ಫಿಲ್ಮ್ ಫೇರ್ ಪ್ರಶಸ್ತಿಗಳ  ಅದ್ಧೂರಿ ಸಮಾರಂಭವು ಕಾರ್ಯಕ್ರಮ ಫೆಬ್ರವರಿ 22ರಂದು ಸಂಜೆ 7.30ಕ್ಕೆ ಕಲರ್ಸ್ ಸಿನಿಫ್ಲೆಕ್ಸ್ ನಲ್ಲಿ ಪ್ರಸಾರವಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ