ಬಹು ಕೋಟಿ ವೆಚ್ಚದ ಸಾಹೋ ಫ್ರೆಂಚ್ ಸಿನಿಮಾದ ನಕಲು? ಯಾವ ಸಿನಿಮಾ ಗೊತ್ತಾ?

Team Udayavani, Sep 3, 2019, 1:25 PM IST

“ಸಾಹೋ” ಟಾಲಿವುಡ್ ಸೇರಿದಂತೆ ಬಹಭಾಷೆಯಲ್ಲಿ ತೆರೆ ಕಂಡ ಬಿಗ್ ಬಜೆಟ್ ಸಿನಿಮಾ ಬಿಡುಗಡೆಯಾದ ದಿನದಿಂದ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಸಾಹೋ ಚಿತ್ರ ತಂಡದ ಮೇಲೆ ಫ್ರೆಂಚ್ ನಿರ್ದೇಶಕರೊಬ್ಬರು ಚಿತ್ರವನ್ನು ನಕಲಿಸಲಾಗಿದೆ ಎನ್ನುವ ಆರೋಪವನ್ನು ಮಾಡಿದ್ದಾರೆ.

ಜೆರೋಮ್ ಸಾಲೆ ಎಂಬ ಫ್ರೆಂಚ್ ಚಲನಚಿತ್ರ ನಿರ್ಮಾಣಕಾರ ಸಾಹೋ ಎನ್ನುವ ಭಾರತೀಯ ಚಿತ್ರವನ್ನು ತನ್ನ “ಲಾರ್ಗೊ ವಿಂಚ್” ಚಿತ್ರದಿಂದ ನಕಲು ಮಾಡಿ ನಿರ್ಮಿಸಿದ್ದಾರೆ ಅನ್ನುವ ಅರೋಪವನ್ನು ಟ್ವೀಟ್ ಮೂಲಕ  ಮಾಡಿದ್ದಾರೆ. ಲಾರ್ಗೊ ವಿಂಚ್  ಎನ್ನುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 2008 ರಲ್ಲಿ ತೆರೆಕಂಡಿತ್ತು. ಚಿತ್ರದ ಕಥೆ ಬೆಲ್ಜಿಯಂನ ಕಾಮಿಕ್ ಪುಸ್ತಕ ಲಾರ್ಗೊ ವಿಂಚ್ ಅನ್ನು ಆಧರಿಸಿದೆ. ಚಿತ್ರದಲ್ಲಿ ಟೋಮರ್ ಸಿಸ್ಲೆ ಮತ್ತು ಕ್ರಿಸ್ಟಿನ್ ಸ್ಕಾಟ್ ಥಾಮಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಜೆರೋಮ್ ಸಾಲೆ ಮಾಡಿರುವ ಆರೋಪಕ್ಕೆ ಸಾಹೋ ಚಿತ್ರತಂಡ ಪ್ರತಿಕ್ರಿಯೆ ಇನ್ನಷ್ಟೇ ನೀಡಬೇಕಿದೆ. ಸದ್ಯ ಸಾಹೋ ಪ್ರೇಕ್ಷಕರಿಗೆ ತುಸು ನಿರಾಸೆಗೊಳಿಸಿದ್ರು  ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ