ಜರ್ಮನಿ ಮೂಲದ ಯುವತಿಗೆ ನಟ ಆರ್ಯ ವಂಚನೆ ?
Team Udayavani, Jul 29, 2021, 8:30 PM IST
ಚೆನ್ನೈ : ತಮಿಳು ನಟ ಆರ್ಯ ವಿರುದ್ಧ ವಂಚನೆಯ ಆರೋಪವೊಂದು ಕೇಳಿ ಬಂದಿದೆ. ಮದುವೆಯಾಗಿ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಜರ್ಮನ್ ಮೂಲದ ಯುವತಿಯೋರ್ವಳು ಆರ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.
ಜರ್ಮನಿ ಮೂಲದ ವಿದ್ಜಾ ಹೆಸರಿನ ಯುವತಿ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಆರ್ಯ 70 ಲಕ್ಷ ರೂಪಾಯಿ ತೆಗೆದುಕೊಂಡು ಮದುವೆಯಾಗುವುದಾಗಿ ನಂಬಿಸಿದ್ದರಂತೆ. ಆರ್ಯ ಹಾಗೂ ತಮ್ಮ ನಡುವೆ ನಡೆದ ಚಾಟ್ನ ಸ್ಕ್ರೀನ್ ಶಾಟ್ಗಳನ್ನು ವಿದ್ಜಾ ಪೊಲೀಸರ ಜತೆ ಹಂಚಿಕೊಂಡಿದ್ದಾರೆ.
ಜರ್ಮನಿ ಮೂಲದ ವಕೀಲರ ಸಹಾಯದಿಂದ ಯುವತಿ ದೂರು ದಾಖಲು ಮಾಡಿದ್ದಾರೆ. ಇದು ಕೋರ್ಟ್ ಮೆಟ್ಟಿಲು ಕೂಡ ಏರಿದ್ದು, ನ್ಯಾಯಾಧೀಶರು ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಇತ್ತೀಚಿಗಷ್ಟೆ ಆರ್ಯ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ತಾವು ಪ್ರೀತಿಸಿ ಮದುವೆಯಾಗಿರುವ ಸೆಯ್ಯಸಾ ಸೆಹಗಲ್ ಜೊತೆ ಮೊದಲ ಮಗು ಪಡೆದಿದ್ದಾರೆ. ಇಂತಹ ಖುಷಿ ಸಂದರ್ಭದಲ್ಲಿಯೇ ಅವರ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿರುವುದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್