ಫಿರ್‌ ಹೇರಾ ಫೆರಿ ಖ್ಯಾತಿಯ ನಿರ್ದೇಶಕ ನೀರಜ್‌ ವೋರಾ ವಿಧಿವಶ 

Team Udayavani, Dec 14, 2017, 10:16 AM IST

ಮುಂಬಯಿ : ‘ಫಿರ್‌ ಹೇರಾ ಫೆರಿ’ ಖ್ಯಾತಿಯ ಬಾಲಿವುಡ್‌ ನಿರ್ದೇಶಕ, ನಟ ಮತ್ತು ಬರಹಕಾರ ನೀರಜ್‌ ವೋರಾ ಅವರು ಗುರುವಾರ ನಸುಕಿನ 4 ಗಂಟೆಯ ವೇಳೆಗೆ ನಗರದ ಕೃತಿ ಕೇರ್‌ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫ‌ಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

2016 ರ ಅಕ್ಟೋಬರ್‌ನಲ್ಲಿ ತೀವ್ರ ಹೃದಯಾಘಾತ ಮತ್ತು ಲಕ್ವಾ ಪೀಡಿತರಾಗಿದ್ದ ವೋರಾ ಅವರು ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ವೋರಾ ನಿಧನದ ಸುದ್ದಿಯನ್ನು ಅವರ ಆಪ್ತ ನಟ ಪರೇಶ್‌ ರಾವಲ್‌ ಅವರು ಟ್ವೀಟ್‌ನಲ್ಲಿ ಖಚಿತ ಪಡಿಸಿದ್ದಾರೆ. 

ವೋರಾ ಅಂತ್ಯಕ್ರಿಯೆಯನ್ನು ಇಂದು ಅಂತಿಮ ದರ್ಶನದ ಬಳಿಕ 3 ಗಂಟೆಯ ವೇಳೆಗೆ ಸಾಂತಾ ಕ್ರೂಜ್‌ ಪಶ್ಚಿಮದ ರುದ್ರ ಭೂಮಿಯಲ್ಲಿ ನಡೆಸಲಾಗುತ್ತಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ