ಅತ್ಯಾಚಾರ, ಬ್ಲಾಕ್‌ ಮೇಲ್‌: ಜಾಮೀನಿಗಾಗಿ ಬಾಂಬೆ ಹೈಕೋರ್ಟಿಗೆ ಕರಣ್‌ ಒಬೆರಾಯ್‌

Team Udayavani, May 28, 2019, 3:17 PM IST

ಮುಂಬಯಿ : ಮಹಿಳೆಯ ಅತ್ಯಾಚಾರ ಮತ್ತು ಬ್ಲಾಕ್‌ ಮೇಲಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ಈ ತಿಂಗಳ ಆದಿಯಲ್ಲಿ ಸೆಶನ್ಸ್‌ ಕೋರ್ಟ್‌ ತನ್ನ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಇದೀಗ ಟಿವಿ ನಟ ಕರಣ್‌ ಒಬೆರಾಯ್‌ ಜಾಮೀನಿಗಾಗಿ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಪ್ರಕರಣದ ತನಿಖೆ ಇನ್ನೂ ಅಪೂರ್ಣ ಸ್ಥಿತಿಯಲ್ಲಿರುವುದರಿಂದ ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದು ಸರಿಯಲ್ಲ ಎಂಬ ಕಾರಣ ನೀಡಿ ಸೆಶನ್ಸ್‌ ಕೋರ್ಟ್‌ ಕರಣ್‌ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.

ಇಂದು ಸೋಮವಾರ ತನ್ನ ವಕೀಲ ದಿನೇಶ್‌ ತಿವಾರಿ ಮೂಲಕ ಬಾಂಬೆ ಹೈಕೋರ್ಟಿಗೆ ಸಲ್ಲಿಸಿರುವ ಜಾಮೀನು ಕೋರಿಕೆ ಅರ್ಜಿಯಲ್ಲಿ ಕರಣ್‌, ತನ್ನನ್ನು ಈ ಪ್ರಕರಣದಲ್ಲಿ ಸುಳ್ಳು ಸುಳ್ಳೇ ಸಿಲುಕಿಸಲಾಗಿದೆ; ತನ್ನ ಮಹಿಳೆ ಜತೆಗಿನ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ನಡೆದ ಸಂಬಂಧವಾಗಿದೆ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

40ರ ಹರೆಯದ ಟಿವಿ ನಟ ಕರಣ್‌ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ನಡೆಸಿ, ನನ್ನ ಜತೆಗಿನ ಸೆಕ್ಸ್‌ನ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡು ಬ್ಲಾಕ್‌ ಮೇಲ್‌ ಮಾಡಿದ್ದಾನೆಂದು ಆರೋಪಿಸಿ ಮಹಿಳೆಯು ಒಶಿವಾರಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದನ್ನು ಅನುಸರಿಸಿ ಕರಣ್‌ ನನ್ನು ಪೊಲೀಸರು ಬಂಧಿಸಿದ್ದರು.

ಕರಣ್‌ ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ