ಬಾಲಿವುಡ್ನ ಹಿರಿಯ ಪೋಷಕ ನಟಿ ರೀಟಾ ಭಾದುರಿ ವಿಧಿವಶ
Team Udayavani, Jul 17, 2018, 10:04 AM IST
ಮುಂಬಯಿ: ಬಾಲಿವುಡ್ನ ಹಿರಿಯ ಪೋಷಕ ನಟಿ ರೀಟಾ ಭಾದುರಿ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 62 ವರ್ಷ ಪ್ರಯವಾಗಿತ್ತು.
ನಟ ಶಿಶಿರ್ ಶರ್ಮಾ ಅವರು ಫೇಸ್ಬುಕ್ನಲ್ಲಿ ನೋವಿನ ವಿಚಾರವನ್ನು ಬರೆದುಕೊಂಡಿದ್ದು, ಜೂನ್ 17 ರಂದು ಅಂಧೇರಿ ಪೂರ್ವದ ಪಾರ್ಸಿವಾಡಾ ರಸ್ತೆಯ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹಿರಿಯ ನಟಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹಲವು ವರದಿಗಳ ಮೂಲಕ ತಿಳಿದು ಬಂದಿದೆ.
70 ರಿಂದ 90 ರ ದಶಕದಲ್ಲಿ ಹಲವು ಬಾಲಿವುಡ್ ಚಿತ್ರಗಳಲ್ಲಿ ರೀಟಾ ಅವರು ನಟಿಸಿದ್ದರು. ಸಾವನ್ ಕೋ ಆನೆ ದೋ, ರಾಜಾ, ಹಿಟ್ ಚಿತ್ರಗಳು ರಾಜಾ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದರು.
70 ಕ್ಕೂ ಹೆಚ್ಚು ಚಿತ್ರಗಳು ಮತ್ತು ಕಿರುತೆರೆಯಲ್ಲೂ ಬಣ್ಣ ಹಚ್ಚಿದ್ದರು.
ರೀಟಾ ಅವರು ಕೊನೆಯದಾಗಿ ಅಭಿನಯಿಸಿರುವ ನಿಮ್ಕಿ ಮುಖೀಯಾ ಸದ್ಯ ಪ್ರಸಾರವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ