ಪತಿ ಅಕ್ಷಯ್ ಕೊಟ್ಟ ‘ಆ’ ಗಿಫ್ಟ್ ಕಂಡು ಟ್ವಿಂಕಲ್ ಖನ್ನಾ ಥ್ರಿಲ್ ಆಗಿದ್ದೇಕೆ?

Team Udayavani, Dec 13, 2019, 6:17 PM IST

ಮುಂಬಯಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ಗುಡ್ ನ್ಯೂಝ್ ’ನ ಪ್ರಮೋಷನ್ ಗೆಂದು ಹೆಸರಾಂತ ಕಪಿಲ್ ಶರ್ಮಾ ಕಾಮಿಡಿ ಶೋದಲ್ಲಿ ಪಾಲ್ಗೊಳ್ಳಲೆಂದು ಹೋಗಿದ್ದಾಗ ಅಲ್ಲಿ ಕಂಡ ಬಹು ಬೆಲೆಬಾಳುವ ಗಿಫ್ಟ್ ಅನ್ನು ಕಂಡು ಅದನ್ನು ತಂದು ತನ್ನ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ನೀಡಿದ್ದಾರೆ.

ಪತಿ ಅಕ್ಕಿ ಕೊಟ್ಟ ಈ ಬೆಲೆಕಟ್ಟಲಾಗದ ಗಿಫ್ಟ್ ಅನ್ನು ಕಂಡು ಟ್ವಿಂಕಲ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ ಮತ್ತು ತನ್ನ ಈ ಸಂತೋಷವನ್ನು ಅವರು ಇನ್ ಸ್ಟಾಗ್ರಾಂನಲ್ಲೂ ಹಂಚಿಕೊಂಡಿದ್ದಾರೆ. ಅಂದಹಾಗೆ ಅಕ್ಷಯ್ ಕುಮಾರ್ ತನ್ನ ಪತ್ನಿಗೆ ಕೊಟ್ಟ ಆ ಬ್ಯೂಟಿಫುಲ್ ಪ್ರೆಷಿಯಸ್ ಗಿಫ್ಟ್ ಯಾವುದು ಗೊತ್ತೇ..? ಅದುವೇ ‘ಈರುಳ್ಳಿ ಕಿವಿ ಆಭರಣ’ (ಇಯರ್ ರಿಂಗ್).

ಹೌದು, ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಏರಿದ ಈರುಳ್ಳಿ ಬೆಲೆಗಿಂತಲೂ ಹೆಚ್ಚು ಸುದ್ದಿಯಾಗುತ್ತಿರುವುದು ಈರುಳ್ಳಿ ಬೆಲೆ ಏರಿಕೆಗೆ ಸಂಬಂಧಿಸಿದ ಮೀಮ್ ಗಳು, ಫನ್ನಿ ವಿಡಿಯೋಗಳು, ಫನ್ನಿ ಮೆಸೇಜ್ ಗಳು ಇತ್ಯಾದಿ.


ಈರುಳ್ಳಿಗೆ ಬಂಗಾರದ ಬೆಲೆ ಬಂದಿದೆ ಎಂಬ ಅರ್ಥದಲ್ಲಿ ಈ ತರಕಾರಿಯನ್ನು ಚಿನ್ನಕ್ಕೆ ಹೋಲಿಸಿ ಅದರಿಂದಲೇ ವಿಧವಿಧದ ಆಭರಣಗಳ ವಿನ್ಯಾಸಗಳನ್ನು ಮಾಡಿ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತಿದೆ.

ಇದೇ ರೀತಿಯಲ್ಲಿ ಕಪಿಲ್ ಶರ್ಮಾ ಕಾಮಿಡಿ ಶೋನಲ್ಲೂ ಸಹ ಅಂದವಾದ ಈರುಳ್ಳಿ ಇಯರ್ ರಿಂಗ್ ಗಳನ್ನು ಸಿದ್ಧಗೊಳಿಸಿ ಪ್ರದರ್ಶಿಸಲಾಗಿತ್ತು. ಇದು ‘ಗುಡ್ ನ್ಯೂಝ್’ ಚಿತ್ರದ ನಟಿ ಕರೀನಾ ಕಪೂರ್ ಅವರನ್ನು ಅಷ್ಟಾಗಿ ಆಕರ್ಷಿಸದಿದ್ದರೂ ನಟ ಅಕ್ಷಯ್ ಕುಮಾರ್ ಅವರನ್ನು ಸಖತ್ ಇಂಪ್ರೆಸ್ ಮಾಡಿತ್ತು.

‘ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳು ಮತ್ತು ಪ್ರಾಮುಖ್ಯತೆ ಇಲ್ಲದ ವಿಷಯಗಳೇ ನಿಮ್ಮ ಹೃದಯಕ್ಕೆ ಹತ್ತಿರವಾಗುತ್ತದೆ’ ಎಂದು ನಟಿ ಮತ್ತು ಲೇಖಕಿ ಟ್ವಿಂಕಲ್ ಖನ್ನಾ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಅಕ್ಷಯ್ ಕುಮಾರ್ ಅವರ ಹಾಸ್ಯ ಪ್ರವೃತ್ತಿಯನ್ನು ಪತ್ನಿ ಮೆಚ್ಚಿಕೊಂಡು ಪ್ರಶಂಸಿರುವುದು ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ