
ಭೋಜ್ ಪುರಿ ನಟಿಯ ಎಂಎಂಎಸ್ ಲೀಕ್?: ಆಕ್ರೋಶಗೊಂಡು ಮೌನ ಮುರಿದ ನಟಿ
Team Udayavani, Sep 20, 2022, 4:49 PM IST

ಮುಂಬಯಿ: ಭೋಜ್ ಪುರಿ ನಟಿ ಅಕ್ಷರ ಸಿಂಗ್ ತನ್ನ ನಟನೆ ಹಾಗೂ ಗಾಯನದಿಂದ ಖ್ಯಾತಿಗಳಿಸಿದವರು. ಬಿಗ್ ಬಾಸ್ ಓಟಿಟಿಯಲ್ಲಿ ಭಾಗವಹಿಸಿದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ.
ಭೋಜ್ ಪುರಿ ಸಿನಿಮಾರಂಗದಲ್ಲಿ ‘ಪವನ್ ರಾಜ’ ‘ದಿಲ್ ವಾಲಾʼ ʼಸತ್ಯʼ ಇತ್ಯಾದಿ ಸಿನಿಮಾದಲ್ಲಿ ನಟಿಸಿರುವ ಅಕ್ಷರ ‘ರಾಕೆಟ್ ಜವಾನಿʼ ʼಜಾ ತೋ ರಹೇ ಹೋ ಮುಝೆ ಚೋಡ್ ಕರ್ ತುಮ್ʼ ಮುಂತಾದ ಹಾಡುಗಳನ್ನು ಹಾಡಿ, ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಾಡುಗಳು ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ.
ಅಕ್ಷರ ಸಿಂಗ್ ಮತ್ತೊಂದು ವಿಷಯದಲ್ಲಿ ಸುದ್ದಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಎಂಎಂಎಸ್ ವಿಡಿಯೋವೊಂದು ಲೀಕ್ ಆಗಿದ್ದು, ಅದು ನಟಿ ಅಕ್ಷರ ಸಿಂಗ್ ಅವರದೆನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಸರಿಯಾಗಿ ಮುಖ ಕಾಣುವುದಿಲ್ಲ. ಆದ್ರೂ ಅದು ಅಕ್ಷರ ಸಿಂಗ್ ಅವರದೆಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ನಟಿ ಅಕ್ಷರ ಅವರೇ ಆಕ್ರೋಶಗೊಂಡು ಮೌನ ಮುರಿದಿದ್ದಾರೆ.
ನಟಿ ಅಕ್ಷರ ಅವರಿಗೆ ಅಭಿಮಾನಿ ವರ್ಗ ದೊಡ್ಡದಿದೆ. ಹಲವು ಮಂದಿ ಈ ವಿಷಯದಲ್ಲಿ ಅಕ್ಷರ ಅವರ ಬೆನ್ನಿಗೆ ನಿಂತಿದ್ದಾರೆ. ಇತ್ತೀಚಿಗೆ ಅಕ್ಷರ ಈ ಕುರಿತು ಮಾತಾನಾಡಿದ್ದು, ಈ ಎಲ್ಲಾ ವಿಷಯಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ಮಾನಸಿಕವಾಗಿ ಈ ವಿಚಾರ ನನ್ನ ಕಾಡಿದೆ. ನಾನು ಆ ವಿಡಿಯೋವನ್ನು ನೋಡಿಲ್ಲ. ಆದರೆ ಯಾರು ಇಂಥದ್ದನ್ನು ಮಾಡಿದ್ದಾರೆ ಅವರು ಕೀಳು ಮನಸ್ಥಿತಿಯವರು. ಇಂಥ ಕೃತ್ಯ ಎಸಗಿದವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇದು ಭೋಜ್ ಪುರಿ ಸಿನಿಮಾ ಇಂಡಸ್ಟ್ರಿ ಕೊಳಕು ತಂತ್ರಗಳಲ್ಲೊಂದು. ನನ್ನ ಮಾನಹಾನಿ ಮಾಡಲು ಇದನ್ನೆಲ್ಲ ಮಾಡಲಾಗಿದೆ ಎಂದು ನಟಿ ಹೇಳಿದ್ದಾರೆ.
ಲೀಕ್ ಆಗಿರುವ ಎಂಎಂಎಸ್ ಹಳೆಯ ವಿಡಿಯೋ ಎನ್ನಲಾಗಿದ್ದು, ನಟಿಯ ಹೆಸರನ್ನು ಎಳೆದು ತರಲಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೆಲ್ಫಿ ತೆಗೆಯಲು ಪ್ರಯತ್ನಿಸಿದ ಅಭಿಮಾನಿಯ ಮೊಬೈಲ್ ಫೋನ್ ಎಸೆದ ರಣಬೀರ್ ಕಪೂರ್ ವಿಡಿಯೋ ವೈರಲ್!

ತೆಲುಗು ಸಿನಿಮಾರಂಗದ ಜನಪ್ರಿಯ ಡಬ್ಬಿಂಗ್ ಕಲಾವಿದ ಶ್ರೀನಿವಾಸ ಮೂರ್ತಿ ಹೃದಯಾಘಾತದಿಂದ ನಿಧನ

ʼಪಠಾಣ್ʼ ಮೋಡಿ: 32 ವರ್ಷದ ಬಳಿಕ ಹೌಸ್ ಫುಲ್ ಆದ ಕಾಶ್ಮೀರದ ಥಿಯೇಟರ್

ಬಹುಭಾಷಾ ಹಿರಿಯ ನಟಿ ಜಮುನಾ ನಿಧನ

ಆಲ್ ಟೈಮ್ ರೆಕಾರ್ಡ್: ಮೊದಲ ದಿನ ಗಳಿಸಿದ್ದೆಷ್ಟು ಕಿಂಗ್ ಖಾನ್ ʼಪಠಾಣ್ʼ ಸಿನಿಮಾ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
