ಸಡಕ್-2 ಟ್ರೇಲರ್ ಗೆ ಲೈಕ್ಸ್ ಗಿಂತ ಹೆಚ್ಚಾಗಿ ಡಿಸ್ ಲೈಕ್ಸ್: ಕಾರಣವೇನು ?
Team Udayavani, Aug 13, 2020, 3:33 PM IST
ಮುಂಬೈ: ಮಹೇಶ್ ಭಟ್ ನಿರ್ದೇಶನದ ಸಡಕ್ -2 ಚಿತ್ರದ ಟ್ರೈಲರ್ ಗೆ ಯೂಟ್ಯೂಬ್ ನಲ್ಲಿ ಲೈಕ್ ಗಿಂತ ಹೆಚ್ಚಾಗಿ ಡಿಸ್ ಲೈಕ್ ಸಿಕ್ಕಿದೆ. ಆ ಮೂಲಕ ಸಡಕ್ -2 ಚಿತ್ರ ಡಿಸ್ ಲೈಕ್ ಮೂಲಕವೇ ಟ್ರೆಂಡ್ ಸೃಷ್ಟಿಸಿದೆ.
ಆಗಸ್ಟ್ 11 ರಂದು ಬಿಡುಗಡೆಯಾದ ಈ ಟ್ರೈಲರ್ ನಾನಾ ವಿವಾದಗಳಿಂದಲೇ ಕಳೆದ ಕೆಲವು ದಿನಗಳಿಂದ ಸುದ್ದಿ ಮಾಡುತ್ತಿದೆ. ಪ್ರಮುಖವಾಗಿ ಈ ಚಿತ್ರದಲ್ಲಿ ನಟಿಸಿರುವ ಎಲ್ಲರೂ ಕೂಡ ಸಿನಿಮಾ ಕೌಟುಂಬಿಕ ಹಿನ್ನಲೆಯಿಂದ ಬಂದವರಾಗಿದ್ದು ಈ ಕಾರಣಕ್ಕಾಗಿಯೇ ಚಿತ್ರವನ್ನು ಬಹಿಷ್ಕರಿಸಲು ನೆಟ್ಟಿಗರು ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಸಾಮಾಜಿಕ ಜಾಲತಾಣದಲ್ಲಿ ಸೃಜನಪಕ್ಷಪಾತ ಹಾಗೂ ಸ್ಟಾರ್ ಕಿಡ್ ಗಳ ಮೇಲೆ ನೆಟ್ಟಿಗರು ಸಮರ ಸಾರಿದ್ದಾರೆ. ಇದೇ ಕಾರಣದಿಂದ ಅತೀ ಹೆಚ್ಚು ಡಿಸ್ ಲೈಕ್ಸ್ ಸಿಗುತ್ತಿದೆ ಎನ್ನಲಾಗಿದೆ.
ಮಾತ್ರವಲ್ಲದೆ ಸಡಕ್ -2 ಚಿತ್ರ ಆಗಸ್ಟ್ 28 ರಂದು ಓಟಿಟಿ ಮೂಲಕ ರೀಲೀಸ್ ಆಗಲಿದ್ದು, ಹಾಟ್ ಸ್ಟಾರ್ ಅನ್ನು ಅನ್ ಇನ್ ಸ್ಟಾಲ್ ಮಾಡುವಂತೆಯೂ ನೆಟ್ಟಿಗರು ಟ್ರೆಂಡ್ ಸೃಷ್ಟಿಸಿದ್ದರು. ಇನ್ನು ಮುಖೇಶ್ ಭಟ್ ನಿರ್ಮಾಣದ ಈ ಚಿತ್ರದಲ್ಲಿ ಆಲಿಯಾ ಭಟ್, ಪೂಜಾ ಭಟ್, ಸಂಜಯ್ ದತ್ ಹಾಗೂ ಆದಿತ್ಯ ರಾಯ್ ಕಪೂರ್ ನಟಿಸಿದ್ದಾರೆ. ನೆಟ್ಟಿಗರು ಆರೋಪಿಸುತ್ತಿರುವ ಹಾಗೆ ಇದರಲ್ಲಿರುವ ಪ್ರಮುಖ ಪಾತ್ರಧಾರಿಗಳೆಲ್ಲ ಸಿನಿ ತಾರೆಯರ ಕುಟುಂಬಕ್ಕೆ ಸೇರಿದವರೆ.
ಇದೀಗ ಸಡಕ್ -2 ಟ್ರೈಲರ್ ಯೂಟ್ಯೂಬ್ ನಲ್ಲಿ 338K ಲೈಕ್ ಪಡೆದಿದ್ದು 6.2M ಡಿಸ್ ಲೈಕ್ ಪಡೆದಿದೆ. ಸುಮಾರು 2,14,42,594 ಮಂದಿ ವೀಕ್ಷಿಸಿದ್ದಾರೆ.
2018ರಲ್ಲಿ ಯೂಟ್ಯೂಬ್ ರಿಲೀಸ್ ಮಾಡಿದ್ದ ಯೂಟ್ಯೂಬ್ ರಿವೈಂಡ್ ವಿಡಿಯೋಗೆ 1.8 ಕೋಟಿ ಡಿಸ್ ಲೈಕ್ಸ್ ಸಿಕ್ಕಿರುವುದು ಈವರೆಗಿನ ದಾಖಲೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ