ದುಬಾರಿ ಕಾರಿಗೆ ತೆರಿಗೆ ವಿನಾಯಿತಿ ಕೇಳಿದ್ದ ನಟ ಧನುಷ್ ಗೆ ಕೋರ್ಟ್ ತರಾಟೆ


Team Udayavani, Aug 5, 2021, 9:10 PM IST

fgrsdhjkdxfd

ಚೆನ್ನೈ :  ತನ್ನ ದುಬಾರಿ ಕಾರಿನ ಮೇಲಿನ ಆಮದು ಸುಂಕ ವಿನಾಯಿತಿ ಕೇಳಿದ್ದ ಕಾಲಿವುಡ್ ನಟ ರಾಷ್ಟ್ರಪ್ರಶಸ್ತಿ ವಿಜೇತ ಧನುಷ್ ಅವರನ್ನು ಮದ್ರಾಸ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ತೆರಿಗೆದಾರರ ಹಣವನ್ನು ಬಳಸಿಕೊಂಡು ನೀವು ರಸ್ತೆಗಳಲ್ಲಿ ಐಷಾರಾಮಿ ಕಾರನ್ನು ಓಡಿಸುತ್ತೀರಿ. ಹಾಲು ಮಾರಾಟಗಾರ ಮತ್ತು ದಿನಗೂಲಿ ಕಾರ್ಮಿಕರು ಕೂಡ ತಾವು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್‌ಗೆ ತೆರಿಗೆ ಪಾವತಿಸುತ್ತಿದ್ದಾರೆ. ಈ ವ್ಯಕ್ತಿಗಳು ತೆರಿಗೆ ವಿನಾಯಿತಿ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿಲ್ಲ’ ಎಂದು ಕೋರ್ಟ್ ಛಿಮಾರಿ ಹಾಕಿದೆ.

ನಟ ಧನುಷ್ ತನ್ನ ಆಮದು ಮಾಡಿದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಆಮದು ತೆರಿಗೆಯನ್ನು ಪ್ರಶ್ನಿಸಿ 2015ರಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ನಟರು ಜವಾಬ್ದಾರಿಯುತ ನಾಗರೀಕರಂತೆ ವರ್ತಿಸಬೇಕು. ಸಂಪೂರ್ಣವಾಗಿ ತೆರಿಗೆ ಪಾವತಿಸದೆ ತಮ್ಮ ಕಾರುಗಳನ್ನು ಚಲಾಯಿಸಬಾರದು ಎಂದು ಹೇಳಿದೆ.

2015ರಲ್ಲಿ ಧನುಷ್​ ರೋಲ್ಸ್​ ರಾಯ್ಸ್​ ಕಾರನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದರು. ಇದಕ್ಕೆ ಅವರು 60 ಲಕ್ಷ ರೂಪಾಯಿ ಎಂಟ್ರಿ ಟ್ಯಾಕ್ಸ್​ ಪಾವತಿ ಮಾಡಬೇಕಿತ್ತು. ಧನುಷ್ ಅರ್ಧದಷ್ಟು ತೆರಿಗೆ ಪಾವತಿಸಿ ಉಳಿದಿದ್ದಕ್ಕೆ ವಿನಾಯಿತಿ ನೀಡುವಂತೆ ಕೋರಿದ್ದರು. ಈ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ನ ನ್ಯಾಯಮೂರ್ತಿ ಎಸ್​.ಎಂ. ಸುಬ್ರಮಣಿಯಮ್​ ಅವರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ತೆರಿಗೆ ವಿನಾಯಿತಿ ನೀಡೋಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಇಂದು ಧನುಷ್​ ಸಲ್ಲಿಕೆ ಮಾಡಿದ ಅರ್ಜಿ ವಿಚಾರಣೆಗೆ ಬಂದಿದೆ. ಈ ವೇಳೆ ಕೋರ್ಟ್​ಗೆ ಧನುಷ್​ ಪರ ವಕೀಲರು ಮನವಿ ಒಂದನ್ನು ಮಾಡಿಕೊಂಡರು. ‘ಧನುಷ್​ ಶೇ.50 ತೆರಿಗೆಯನ್ನು ತುಂಬಿದ್ದಾರೆ. ಉಳಿದ ತೆರಿಗೆಯನ್ನು ಪಾವತಿಸೋಕೆ ಅವರು ಇಚ್ಛಿಸಿದ್ದಾರೆ. ಹೀಗಾಗಿ, ಅರ್ಜಿ ಹಿಂಪಡೆಯೋಕೆ ಅವಕಾಶ ನೀಡಬೇಕು’ ಎಂದು ​ ವಕೀಲರು ಕೋರಿದರು. ಆದರೆ, ಕೋರ್ಟ್​ ಇದನ್ನು ನಿರಾಕರಿಸಿದೆ.

ಇನ್ನು ಇತ್ತೀಚಿಗಷ್ಟೆ ಇಂತಹದೆ ಪ್ರಕರಣದಲ್ಲಿ ತಮಿಳು ನಟ ವಿಜಯ್ ಧಳಪತಿ ಅವರಿಗೂ ಮದ್ರಾಸ್ ಹೈಕೋರ್ಟ್ ಬುದ್ಧಿವಾದ ಹೇಳಿತ್ತು. ಇತರರಿಗೆ ನೀವು ಮಾದರಿಯಾಗಬೇಕು. ಕೇವಲ ತೆರೆಯ ಮೇಲಷ್ಟೆ ಹೀರೋ ಆದರೆ ಸಾಲದು ಎಂದು ತರಾಟೆ ತೆಗೆದುಕೊಂಡಿದ್ದ ನ್ಯಾಯಾಲಯ 1 ಲಕ್ಷ ರೂ. ದಂಡವನ್ನೂ ವಿಧಿಸಿತ್ತು.

ಟಾಪ್ ನ್ಯೂಸ್

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ – ಅಮಿತ್ ಶಾ

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ: ಅಮಿತ್ ಶಾ

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

sagara news

ಅಕ್ರಮ ಗೋವು ಕಳ್ಳತನ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

incident held at sagara

ಬಸ್ಸಿಗೆ ಕಾಯುತ್ತಿದ್ದವರಿಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಉಳಿದವರ ಸ್ಥಿತಿ ಗಂಭೀರ

ಅಲ್ಪಸಂಖ್ಯಾತರನ್ನು ಮುಗಿಸುವುದೇ ಕುಮಾರಸ್ವಾಮಿ ಗುರಿ: ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

ಅಲ್ಪಸಂಖ್ಯಾತರನ್ನು ಮುಗಿಸುವುದೇ ಕುಮಾರಸ್ವಾಮಿ ಗುರಿ: ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

1-dd

ನಿರುದ್ಯೋಗ ನಿವಾರಣೆಗೊಂದು ಉಪಾಯವಿದೆ: ಡಿಕೆಶಿ ಹೇಳಿದ್ದೇನು ?

GENERAL BIPIN RAWAT

ಅಫ್ಘಾನ್‌ ಪ್ರಭಾವ: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಉಲ್ಬಣಿಸುವ ಎಚ್ಚರಿಕೆ..!





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿಡಿಎಲ್‌ಜೆ ರಂಗ ಪ್ರಯೋಗ!

ಡಿಡಿಎಲ್‌ಜೆ ರಂಗ ಪ್ರಯೋಗ!

25

‘ಓ ಮೈ ಗಾಡ್ 2’ : ಮತ್ತೊಂದು ವಿಭಿನ್ನ ಪಾತ್ರದಲ್ಲಿ ಅಕ್ಷಯ್ ಕುಮಾರ್

21ananya

ಅನನ್ಯ-ಆರ್ಯನ್ ವಾಟ್ಸ್ಯಾಪ್ ಚಾಟ್: ಡ್ರಗ್ಸ್ ಅಲ್ಲಂತೆ ಸಿಗರೇಟ್ ಅಂತೆ!?

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಡ್ರಗ್ಸ್ ಪ್ರಕರಣ

ಬಾಲಿವುಡ್ ಮಾದಕ ಜಾಲದ ಜಾತಕ : ಆರ್ಯನ್‌ ಮಾತ್ರವಲ್ಲ..!

MUST WATCH

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

ಹೊಸ ಸೇರ್ಪಡೆ

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ – ಅಮಿತ್ ಶಾ

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ: ಅಮಿತ್ ಶಾ

ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಯೋಜನೆ ಕಾರ್ಯಕ್ರಮಕ್ಕೆ  ಉತ್ತಮ ಪ್ರತಿಕ್ರಿಯೆ

ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಯೋಜನೆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ

ಗೋವಾ ಸರ್ಕಾರ ಕೇಂದ್ರದ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ: ಪ್ರಧಾನಿ ಮೋದಿ

ಗೋವಾ ಸರ್ಕಾರ ಕೇಂದ್ರದ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ: ಪ್ರಧಾನಿ ಮೋದಿ

1-2-aa’

ಅತಿಯಾದ ಲೈಂಗಿಕ ಗೀಳು: ಸ್ತ್ರೀ ಹಾರ್ಮೋನ್ ಚುಚ್ಚಿಸಿಕೊಂಡ ಸ್ಪೇನ್‌ನ ಮಾಜಿ ರಾಜ !

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.