ಮೂರೇ ದಿನದಲ್ಲಿ 60 ಕೋಟಿ ಬಾಚಿದ ‘ತಾನಾಜಿ’ ; ‘ಛಪಾಕ್’ ಚಿತ್ರಕ್ಕಿಲ್ಲ ಪ್ರೇಕ್ಷಕರ ಬಹುಪರಾಕ್!

Team Udayavani, Jan 13, 2020, 7:53 PM IST

Tanhaji-01-730

ಮುಂಬಯಿ: ಶುಕ್ರವಾರ ತೆರೆಕಂಡ ಎರಡು ಬಹುನಿರೀಕ್ಷಿತ ಬಾಲಿವುಡ್ ಚಿತ್ರಗಳ ಪೈಕಿ ಒಂದು ಚಿತ್ರ ದಾಖಲೆಯ ಕಲೆಕ್ಷನ್ ನೊಂದಿಗೆ ಮುನ್ನುಗ್ಗುತ್ತಿದ್ದರೆ ಇನ್ನೊಂದು ಚಿತ್ರ ಕಾರಣವಲ್ಲದೆ ಕಾರಣಕ್ಕಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮುಗ್ಗರಿಸುವ ಲಕ್ಷಣ ಕಾಣಿಸುತ್ತಿದೆ.

ಅಜಯ್ ದೇವಗನ್ ಅಭಿನಯದ ನೂರನೇ ಚಿತ್ರವಾಗಿ ತೆರೆಗೆ ಬಂದ ತಾನಾಜಿ: ದಿ ಅನ್ ಸಂಗ್ ವಾರಿಯರ್ ಆದಿತ್ಯವಾರ ದೇಶಾದ್ಯಂತ 26.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ತಾನಾಜಿ ಚಿತ್ರ ಬಿಡುಗಡೆಗೊಂಡ ಮೂರೇ ದಿನದಲ್ಲಿ 61.75 ಕೋಟಿ ರೂ. ಗಳಿಸುವ ಮೂಲಕ ಗೆಲುವಿನ ಹಾದಿಯಲ್ಲಿದೆ.

ಮರಾಠ ದೊರೆ ಛತ್ರಪತಿ ಶಿವಾಜಿ ಕಾಲದ ಘಟನೆಯೊಂದನ್ನು ಆಧರಿಸಿ ತಯಾರಿಸಲಾಗಿರುವ ಈ ಐತಿಹಾಸಿಕ ಚಿತ್ರದಲ್ಲಿ ಅಜಯ್ ದೇವಗನ್ ಅವರು ತಾನಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ ಸೈಫ್ ಅಲಿ ಖಾನ್ ಮತ್ತು ಕಾಜೊಲ್ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ತಾನಾಜಿ ಚಿತ್ರದ ಜೊತೆಯಲ್ಲೇ ಬಿಡುಗಡೆಗೊಂಡ ದೀಪಿಕಾ ಪಡುಕೋಣೆ ಅವರ ವಿಭಿನ್ನ ಪ್ರಯತ್ನದ ‘ಛಪಾಕ್’ ಚಿತ್ರ ಮಾತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮುಗ್ಗರಿಸಿದೆ. ಶುಕ್ರವಾರ ಈ ಚಿತ್ರ 4.77 ಕೋಟಿ ರೂ. ಗಳಿಸಿದ್ದರೆ, ಶನಿವಾರ 6.90 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ರಜಾದಿನವಾದ ಆದಿತ್ಯವಾರವೂ ಛಪಾಕ್ ಚಿತ್ರ ಪ್ರೇಕ್ಷಕರನ್ನು ಥಿಯೇಟರ್ ಗೆ ಸೆಳೆಯುವಲ್ಲಿ ವಿಫಲವಾಗಿದೆ. ಆದಿತ್ಯವಾರ ಈ ಚಿತ್ರದ ಕಲೆಕ್ಷನ್ 7.35 ಕೋಟಿ ರೂಪಾಯಿಗಳಷ್ಟೇ. ಮೂರು ದಿನಗಳಲ್ಲಿ ಛಪಾಕ್ ಗಳಿಸಿದ ಒಟ್ಟು ಮೊತ್ತ 19.02 ಕೋಟಿ ರೂಪಾಯಿಗಳು ಮಾತ್ರ.

ದೇಶಾದ್ಯಂತ ತಾನಾಜಿಯ ಅಬ್ಬರ ಒಂದು ಮಟ್ಟದ್ದಾಗಿದ್ದರೆ ಮಹಾರಾಷ್ಟ್ರದಲ್ಲಿ ಮಾತ್ರ ತಾನಾಜಿ ಎಲ್ಲಾ ದಾಖಲೆಗಳನ್ನು ಚಿಂದಿ ಮಾಡಿ ಮುನ್ನುಗ್ಗುತ್ತಿದೆ. ಮರಾಠರ ಪ್ರತಿಷ್ಠೆ ಎಂಬಂತೆ ಮಹಾ ಜನತೆ ಈ ಚಿತ್ರವನ್ನು ಸ್ವೀಕರಿಸಿರುವುದು ಇದರ ಬಾಕ್ಸ್ ಆಫೀಸ್ ಕಲೆಕ್ಷನ್ ನಿಂದಲೇ ಗೊತ್ತಾಗುತ್ತಿದೆ.

ತಾನಾಜಿ ಚಿತ್ರ ಶುಕ್ರವಾರ ಬಿಡುಗಡೆಗೊಂಡಿತ್ತು ಮತ್ತು ಆ ದಿನ 15.10 ಕೋಟಿ ರೂ. ಗಳಿಸಿತ್ತು, ಇನ್ನು ಶನಿವಾರ ಈ ಚಿತ್ರದ ಕಲೆಕ್ಷನ್ 20.57 ಕೋಟಿಗೇರಿದ್ದರೆ ಆದಿತ್ಯವಾರ ತಾನಾಜಿ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 26.08 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ.

ಕಳೆದ ವರ್ಷ ಬಿಡುಗಡೆಗೊಂಡಿದ್ದ ದೇವಗನ್ ಅಭಿನಯದ ‘ಟೋಟಲ್ ಧಮಾಲ್’ ಚಿತ್ರವೂ ಸಹ ಮೂರು ದಿನದಲ್ಲಿ 62.40 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತ್ತು. ಇದರೊಂದಿಗೆ ‘ದೇ ದೇ ಪ್ಯಾರ್ ದೇ’ ಎಂಬ ಹಿಟ್ ಚಿತ್ರವನ್ನೂ ಸಹ ಅಜಯ್ ದೇವಗನ್ ಕಳೆದ ವರ್ಷ ನೀಡಿದ್ದರು.

ಟಾಪ್ ನ್ಯೂಸ್

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ಭಾರತ-ಪಾಕಿಸ್ಥಾನ ಕೇವಲ ಮತ್ತೊಂದು ಪಂದ್ಯ ಅಷ್ಟೇ: ಸೌರವ್‌ ಗಂಗೂಲಿ

ಭಾರತ-ಪಾಕಿಸ್ಥಾನ ಕೇವಲ ಮತ್ತೊಂದು ಪಂದ್ಯ ಅಷ್ಟೇ: ಸೌರವ್‌ ಗಂಗೂಲಿ

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಡೇವಿಡ್‌ ವಾರ್ನರ್‌

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಡೇವಿಡ್‌ ವಾರ್ನರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lal singh chaddha four day collection

ನಾಲ್ಕು ದಿನಗಳಲ್ಲಿ ಆಮಿರ್ ಚಿತ್ರ ಲಾಲ್ ಸಿಂಗ್ ಛಡ್ಡಾ ಗಳಿಸಿದ್ದೆಷ್ಟು?

tdy-2

ʼಸಲಾರ್‌ʼ ರಿಲೀಸ್‌ ಡೇಟ್‌ ಪ್ರಕಟ: ಪ್ರೇಕ್ಷಕರಿಗೆ ಪ್ರಶಾಂತ್‌ ನೀಲ್‌ ಕೊಟ್ರು ಸರ್ಪ್ರೈಸ್‌

tdy-5

ಕುಟುಂಬ ರಕ್ಷಣೆಗೆ ಮತ್ತೆ ಬಂದ್ರು ಚಾರ್ಜ್‌ ಕುಟ್ಟಿ? : ʼದೃಶ್ಯಂ-3ʼ ಪೋಸ್ಟರ್‌ ವೈರಲ್

tdy-19

ಆ.15 ಕ್ಕೆ ʼಸಲಾರ್‌ʼ ಚಿತ್ರದಿಂದ ಬಿಗ್‌ ಅನೌನ್ಸ್‌ ಮೆಂಟ್‌: ಹೆಚ್ಚಾಯಿತು ಫ್ಯಾನ್ಸ್‌ ಕುತೂಹಲ

ಹಾಲಿವುಡ್‌ನ‌ ಆಸ್ಕರ್‌ನಿಂದ ಹೊಗಳಿಕೆ ಪಡೆದ “ಲಾಲ್‌ ಸಿಂಗ್‌ ಛಡ್ಡಾ’ಸಿನಿಮಾ

ಹಾಲಿವುಡ್‌ನ‌ ಆಸ್ಕರ್‌ನಿಂದ ಹೊಗಳಿಕೆ ಪಡೆದ “ಲಾಲ್‌ ಸಿಂಗ್‌ ಛಡ್ಡಾ’ಸಿನಿಮಾ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಹೊಸ ಸೇರ್ಪಡೆ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.