ಅಜಯ್ ದೇವಗನ್ ತಮ್ಮ ಹೆಸರು ಬದಲಾಯಿಸಿಕೊಂಡಿರುವುದರ ಹಿಂದಿನ ಕಾರಣವೇನು?
Team Udayavani, Mar 26, 2021, 8:22 PM IST
ಮುಂಬೈ: ಬಾಲಿವುಡ್ ಅಂಗಳದಲ್ಲಿ ತನ್ನ ವಿಭಿನ್ನ ನಟನಾ ಶೈಲಿಯ ಮೂಲಕ ಜನಪ್ರಿಯಗೊಂಡಿರುವ ಅಜಯ್ ದೇವಗನ್ ಇದೀಗ ತಮ್ಮ ಹೆಸರನ್ನು ಸುದರ್ಶನ್ ಎಂದು ಬದಲಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಅಜಯ್ ದೇವಗನ್ ಎಂಬ ಹೆಸರಿನ ಮೂಲಕ ತಮ್ಮ ಅಭಿಮಾನಿಗಳ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಇವರ ಈ ದಿಡೀರ್ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿದಿದೆ.
ಈ ಕುರಿತಾಗಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ನಟ “ನಿಮ್ಮ ಬಳಿ ಎಷ್ಟು ಬಾರಿ ಹೇಳಬೇಕು. ಅಜಯ್ ಎಂದು ಏಕೆ ಕರೆಯುತ್ತೀರಿ. ನನ್ನ ಹೆಸರು ಸುದರ್ಶನ್” ಎಂದಿದ್ದಾರೆ.
ಆದರೆ ಅಸಲಿಗೆ ನಟ ಅಜಯ್ ದೇವಗನ್ ನಿಜವಾಗಿಯೂ ತಮ್ಮ ಹೆಸರನ್ನು ಸುದರ್ಶನ್ ಎಂದು ಬದಲಾಯಿಸಿಕೊಂಡಿಲ್ಲ. ಬದಲಾಗಿ ಇದು ಅಜಯ್ ದೇವಗನ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ನ ಒಂದು ಜಾಹೀರಾತಿನಲ್ಲಿ ಬರುವ ಪಾತ್ರ. ಜಾಹೀರಾತಿನಲ್ಲಿ ನಟ ಅಜಯ್, ಸುದರ್ಶನ್ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ನಟ ಕೇವಲ ಹೆಸರು ಮಾತ್ರಲ್ಲದೆ ತನ್ನ ಲುಕ್ ಅನ್ನು ಬದಲಾಯಿಸಿಕೊಂಡಿದ್ದಾರೆ.
ಉದ್ದ ದಾಡಿ ಬಿಟ್ಟಿರುವ ಗೆಟಪ್ನಲ್ಲಿ ಅಜಯ್ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತನ್ನು ವಿಭಿನ್ನವಾಗಿ ಪ್ರಮೋಟ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅಂದಹಾಗೆ ಅಜಯ್ ದೇವಗನ್ ಸದ್ಯ ಬಿಗ್ ಬುಲ್ ಸಿನಿಮಾದ ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಅಜಯ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್