ಫೋನಿ ಸೈಕ್ಲೋನ್‌ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಿದ ಅಕ್ಷಯ್‌?

Team Udayavani, May 7, 2019, 3:45 PM IST

ಮುಂಬಯಿ: ಬಾಲಿವುಡ್‌ನ‌ ಖ್ಯಾತ ನಟ ಆಕ್ಷಯ್‌ ಕುಮಾರ್‌ ಅವರು ಫೋನಿ ಚಂಡ ಮಾರುತದಿಂದ ತತ್ತರಿಸಿದ್ದ ಒಡಿಶಾಗೆ 1 ಕೋಟಿ ರೂಪಾಯಿ ನೆರವು ನೀಡಿದ್ದಾರೆ.

ಈ ಹಿಂದೆಯೂ ಅಕ್ಷಯ್‌ ಕುಮಾರ್‌ ಅವರು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಉದಾರತೆ ತೋರಿದ್ದರು. ಸೈನಿಕರಿಗೆ, ಕೇರಳ ನೆರೆಗೆ , ಚೆನ್ನೈ ಪ್ರವಾಹದ ವೇಳೆಯೂ ಪರಿಹಾರ ನಿಧಿಗೆ ಹಣ ಸಹಾಯ ನೀಡಿದ್ದರು.

ಆಕ್ಷಯ್‌ ಕುಮಾರ್‌ ಅವರು ಸದ್ಯ ಕರೀನಾ ಕಪೂರ್‌ ಅವರೊಂದಿಗೆ ಗುಡ್‌ ನ್ಯೂಸ್‌ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇದೊಂದು ಸುಳ್ಳು ಸುದ್ದಿಯೇ!

ಅಕ್ಷಯ್ ಕುಮಾರ್ ಅವರು ಫೋನಿ ಚಂಡಮಾರುತದಿಂದ ತತ್ತರಿಸಿದ್ದ ಒಡಿಶಾಗೆ ಒಂದು ಕೋಟಿ ದೇಣಿಗೆ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯತೊಡಗಿದೆ. ಅಕ್ಷಯ್ ಕುಮಾರ್ ಒಂದು ಕೋಟಿ ಕೊಟ್ಟಿಲ್ಲ, ಇದೊಂದು ಸುಳ್ಳು ಸುದ್ದಿ ಎಂದು ಎಸ್ ಆರ್ ಕೆ ಫ್ಯಾನ್ ಬೇಸ್ ಆರೋಪಿಸಿದೆ. ಅಷ್ಟೇ ಅಲ್ಲ ವಿಕಿಪಿಡಿಯಾದಲ್ಲಿರುವ ಅಕ್ಷಯ್ ನಿಜವಾದ ಸಹಿ ಹಾಗೂ ಚೆಕ್ ನಲ್ಲಿರುವ ಸಹಿಯನ್ನು ಹೋಲಿಕೆ ಮಾಡಿದೆ.ಈ ಗೊಂದಲಕ್ಕೆ ತೆರೆ ಎಳೆಯಬೇಕಾಗಿದ್ದು ಸ್ವತಃ ಅಕ್ಷಯ್ ಕುಮಾರ್ ಅವರ ಜವಾಬ್ದಾರಿಯಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ