2022ಕ್ಕೆ ತೆರೆಮೇಲೆ ಬರಲಿದ್ದಾನೆ ‘ಬಚ್ಚನ್ ಪಾಂಡೆ’
Team Udayavani, Jan 24, 2021, 7:35 PM IST
ಮುಂಬೈ: ಬಿ-ಟೌನ್ ಅಂಗಳದ ಬಹುಬೇಡಿಕೆಯ ನಟ ಅಕ್ಷಯ್ ಕುಮಾರ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘ಬಚ್ಚನ್ ಪಾಂಡೆ’ ಮುಂಬರುವ 2022ರ ಜನವರಿ 26 ರಂದು ಬಿಡುಗಡೆಗೊಳ್ಳಲಿದೆ. ಈ ಕುರಿತಾದ ಮಾಹಿತಿಯನ್ನು ನಟ ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಇದೊಂದು ಆ್ಯಕ್ಷನ್ ಕಾಮಿಡಿ ಸಿನಿಮಾ ಆಗಿದ್ದು, ವಿಭಿನ್ನ ಪ್ರಾತ್ರದಲ್ಲಿ ಅಕ್ಷಯ್ ಕುಮಾರ್ ತೆರೆ ಮೇಲೆ ಬರಲಿದ್ದಾರೆ. ಇದೀಗ ನಟ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಅಕ್ಷಯ್ ದರೋಡೆಕೋರನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ಫರ್ಹಾದ್ ಸಾಮ್ಜಿ ಆ್ಯಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ನಿರ್ಮಾಣಕ್ಕೆ ಸಾಜಿದ್ ನಾದಿಯಾವಾಲ ಹಣ ಹೂಡಿಕೆ ಮಾಡಿದ್ದಾರೆ. ನಟಿ ಕೃತಿ ಸನನ್ ನಾಯಕಿಯಾಗಿ ಬಣ್ಣಹಚ್ಚಿರುವ ಈ ಸಿನಿಮಾದಲ್ಲಿ ಜಾಕ್ವಲಿನ್ ಫೆರ್ನಾಂಡಿಸ್, ಪಂಕಜ್ ತ್ರಿಪಾಠಿ ಮುಂತಾದ ತಾರಾ ಬಳಗವನ್ನು ಕಾಣಬಹುದಾಗಿದೆ.
ಇದನ್ನೂ ಓದಿ:ಬಿಜೆಪಿ ಇನ್ನೂ 5 ವರ್ಷ ಅಧಿಕಾರಕ್ಕೆ ಬಂದರೇ, ಅಸ್ಸಾಂ ಭದ್ರವಾಗುತ್ತದೆ : ಶಾ
ಈ ಹಿಂದೆ ಸಿನಿಮಾವವನ್ನು 2020ರ ಕ್ರಿಸ್ ಮಸ್ ಗೆ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿತ್ತು, ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಿನಿಮಾ ನಿರ್ಮಾಣ ವಿಳಂಬಗೊಂಡು ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.
ಇದನ್ನೂ ಓದಿ:ಶಿವಮೊಗ್ಗ ಗಾಂಧಿ ಬಜಾರ್ ನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಅಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ
ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !
ಕಾಂಗ್ರೆಸ್ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್ ಪ್ರಯತ್ನ
ನಾಳೆಯಿಂದ ಬಜೆಟ್ ಅಧಿವೇಶನ : ಸಿ.ಡಿ. ಬಾಂಬ್, ಮೀಸಲಾತಿ ಸದ್ದಿನ ನಿರೀಕ್ಷೆ
ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ