ರಣ್ಬೀರ್- ಆಲಿಯಾ ಜೋಡಿ ರಹಸ್ಯ ನಿಶ್ಚಿತಾರ್ಥ? ಬಿ ಟೌನ್ ಹೇಳುವುದೇನು?
Team Udayavani, Dec 30, 2020, 9:00 PM IST
ಮುಂಬೈ: ಬಾಲಿವುಡ್ ನಟ ರಣ್ಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಜೋಡಿಯಾಗುತ್ತಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೆ ಇದೀಗ ಅವರಿಬ್ಬರೂ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.
ಈ ಕುರಿತಾದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ವೈರಲ್ ಆಗಿದೆ.
ಇತ್ತೀಚೆಗಷ್ಟೆ ಬಾಲಿವುಡ್ ಅಂಗಳದಲ್ಲಿ ನಟ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪ್ರೀತಿಯ ವಿಚಾರ ಹರಿದಾಡುತ್ತಿತ್ತು. ಈ ಗುಸು ಗುಸು ಸುದ್ದಿಗೆ ನಟ ರಣ್ಬೀರ್ ಪ್ರತಿಕ್ರಿಯೆಯನ್ನೂ ನೀಡಿದ್ದು, ನಾನೂ ಮತ್ತು ಆಲಿಯಾ ಪರಸ್ಪರ ಪ್ರೀತಿಸುತ್ತಿದ್ದೇವೆ ಸದ್ಯದಲ್ಲಿಯೆ ವಿವಾಹವಾಗಲಿದ್ದೇವೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಅನುಮಾನಗಳಿಗೆ ತೆರೆ ಎಳೆದಿದ್ದರು.
ಆದರೆ ಈ ನಡುವೆ ಸದಾ ಒಂದಲ್ಲಾ ಒಂದು ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಬಾಲಿವುಡ್ ನಟ-ನಟಿಯರು ಇದೀಗ ಸದ್ದಿಲ್ಲದೆ ಜೈಪುರದ ಕಡೆಗೆ ಪ್ರಯಾಣ ಬೆಳೆಸಿದ್ದಾರಂತೆ, ಅಷ್ಟೇ ಅಲ್ಲದೆ ರಣ್ಬೀರ್ ಹಾಗೂ ಆಲಿಯಾ ಕುಟುಂಬದ ಸದಸ್ಯರೂ ಕೂಡ ಅಲ್ಲಿಗೆ ಪಯಣ ಬೆಳೆಸಿದ್ದಾರಂತೆ ಈ ಎಲ್ಲಾ ಬೆಳವಣಿಗೆಗಳು ಇವರಿಬ್ಬರೂ ಸದ್ದಿಲ್ಲದೆ ಎಂಗೇಜ್ ಆಗಿರಬಹುದಾ ಎಂಬ ಗುಸು ಗುಸು ಮಾತುಗಳಿಗೆ ದಾರಿಮಾಡಿ ಕೊಟ್ಟಿದೆ.
ಇದನ್ನೂ ಓದಿ: ನಟ ಸೋನು ಸೂದ್ ಗೆ ಒಲಿದ 2020 ರ ಜನೋಪಕಾರಿ ಪ್ರಶಸ್ತಿ
ಈ ಸುದ್ದಿಗೆ ಮತ್ತಷ್ಟು ಪುಷ್ಠಿ ಕೊಡುವಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡಾ ಜೈಪುರದ ಕಡೆ ಪಯಣ ಬೆಳೆಸಿ . ಅಲ್ಲಿರುವ ಸ್ಟಾರ್ ಹೋಟೆಲ್ ಒಂದರಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ನಟ ರಣ್ ವೀರ್ ,ರಣ್ಬೀರ್ ಮತ್ತು ನೀತು ಜೊತೆಯಲ್ಲಿ ಸೆಲ್ಫಿಯೊಂದನ್ನು ಕ್ಲಿಕ್ಕಿಸಿದ್ದು, ಇದೀಗ ಈ ಸೆಲ್ಫಿ ಪೋಟೋ ಕೂಡಾ ಭಾರಿ ವೈರಲ್ ಆಗಿದೆ.
ಕಳೆದ ಕೆಲ ಸಮಯಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗಳು ಇದೀಗ ಸದ್ದಿಲ್ಲದೆ ನಿಶ್ವಿತಾರ್ಥವನ್ನೂ ಮಾಡಿಕೊಂಡರಾ ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಗಳನ್ನು ರಣಬೀರ್- ಆಲಿಯಾ ಜೋಡಿಯಾಗಲಿ ಅಥವಾ ಅವರ ಕುಟುಂಬದ ಸದಸ್ಯರಾಗಲಿ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?