ಅನಾರೋಗ್ಯ: ಆಸ್ಪತ್ರೆಗೆ ದಾಖಲಾಗಿರುವ ಬಿಗ್‌ ಬಿ

Team Udayavani, Nov 12, 2019, 1:51 AM IST

ಮುಂಬಯಿ: ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ವಿಶ್ರಾಂತಿ ಪಡೆಯುತ್ತಿರುವ ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌, ತಾವು ದಾಖಲಾಗಿರುವ ಆಸ್ಪತ್ರೆಯ ಸ್ಪೆಷಲ್‌ ವಾರ್ಡ್‌ನಿಂದಲೇ ತಮ್ಮ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಫೋಟೋದೊಂದಿಗೆ ಕಿರು ಸಂದೇಶವನ್ನೂ ಹಾಕಿರುವ ಅವರು, ‘ನನ್ನ ವೇಗವನ್ನು ಕಡಿಮೆಮಾಡಿಕೊಳ್ಳಬೇಕೆಂದು ನನ್ನ ದೇಹ ಸೂಚಿಸುತ್ತಿದೆ’ ಎಂದು ಅವರು ಹೇಳಿದ್ದಾರೆ. ಫೋಟೋಕ್ಕೆ ಲಕ್ಷಾಂತರ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಶೀಘ್ರವೇ ಗುಣಮುಖರಾಗುವಂತೆ ಅಮಿತಾಭ್‌ಗೆ ಹಾರೈಸಿದ್ದಾರೆ.

ತಮ್ಮ ಬ್ಲಾಗ್‌ನಲ್ಲಿಯೂ ಈ ಕುರಿತಂತೆ ಬರೆದುಕೊಂಡಿರುವ ಅವರು, ‘ತಾರುಣ್ಯದಲ್ಲಿ ಡಾನ್‌ ಮುಂತಾದ ಸಿನೆಮಾಗಳಲ್ಲಿ ಅಭಿನಯಿಸುವಾಗ ಆಗಿದ್ದ ಪೆಟ್ಟುಗಳು, ನೋವುಗಳು ಈಗ ತಮ್ಮ ಪ್ರಭಾವ ತೋರುತ್ತಿವೆ’ ಎಂದು ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ