ರಾಣಿ ಲಕ್ಷ್ಮೀಬಾಯಿ ಗೆಟಪ್‌ನಲ್ಲಿ ಅನುಷ್ಕಾ ಶೆಟ್ಟಿ
Team Udayavani, Aug 30, 2019, 5:00 AM IST
ಬಾಹುಬಲಿ ಮತ್ತು ಭಾಗಮತಿ ಚಿತ್ರಗಳ ನಂತರ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿರದ ಸೌತ್ ಸುಂದರಿ ಅನುಷ್ಕಾ ಶೆಟ್ಟಿ ಈಗ ಮತ್ತೂಂದು ಬಿಗ್ ಬಜೆಟ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ಸಿದ್ಧತೆಯಲ್ಲಿದ್ದಾರೆ.
ಹೌದು, ಭಾಗಮತಿ ಚಿತ್ರದ ನಂತರ ಅನುಷ್ಕಾ ಶೆಟ್ಟಿ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೈರಾ ಚಿತ್ರ ಚಿತ್ರೀಕರಣದ ವೇಳೆಯಲ್ಲಿಯೇ ಅನುಷ್ಕಾ ಶೆಟ್ಟಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ, ಎಂಬ ಸುದ್ದಿ ಹರಿದಾಡಿದ್ದರೂ, ಚಿತ್ರತಂಡವಾಗಲಿ, ಅನುಷ್ಕಾ ಶೆಟ್ಟಿ ಅವರಾಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ, ಇದು ಅಂತೆ-ಕಂತೆ ಸುದ್ದಿ ಇರಬಹುದು ಎಂದು ಅಭಿಮಾನಿಗಳು ಕೂಡ ಸುಮ್ಮನಾಗಿದ್ದರು. ಆದರೆ ಈಗ ಈ ಸುದ್ದಿ ನಿಜವಾಗಿದೆ. ಸೈರಾ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿರುವ ವಿಷಯವನ್ನು ಸ್ವತಃ ಸೈರಾ ಚಿತ್ರತಂಡವೇ ಸ್ಪಷ್ಟಪಡಿಸಿದೆ.
ಸದ್ಯ ಭರದಿಂದ ಸೈರಾ ಚಿತ್ರದ ಪ್ರಮೋಶನ್ ಕೆಲಸಗಳಲ್ಲಿ ನಿರತ ವಾಗಿರುವ ಚಿತ್ರತಂಡ, ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ಅಂಶವನ್ನು ರಿವೀಲ್ ಮಾಡಿದೆ. ಅಲ್ಲದೆ ಸೈರಾ ಚಿತ್ರ ದಲ್ಲಿ ಅನುಷ್ಕಾ ಶೆಟ್ಟಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದಾರೆ ಎಂಬ ಸಂಗತಿಯನ್ನು ಬಿಚ್ಚಿಟ್ಟಿದೆ.
ಸೈರಾ ಚಿತ್ರತಂಡ ನೀಡಿರುವ ಮಾಹಿತಿಯ ಪ್ರಕಾರ, ಅನುಷ್ಕಾ ಶೆಟ್ಟಿ ಸೈರಾ ಚಿತ್ರದಲ್ಲಿ 1857ರ ದಂಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಣಿ ಲಕ್ಷ್ಮೀ ಬಾಯಿ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಸೈರಾ ಚಿತ್ರದ ನಿರ್ಮಾಪಕ ರಾಮ್ ಚರಣ್, ಚಿತ್ರದ ಆರಂಭದಲ್ಲಿ ರಾಣಿ ಲಕ್ಷ್ಮೀಬಾಯಿ ಯುದ್ಧಭೂಮಿಯಲ್ಲಿ ಗಾಯಗೊಂಡ ಸೈನಿಕರಿಗೆ ಉಯಲವಾಡ ನರಸಿಂಹ ರೆಡ್ಡಿ ಅವರ ಸ್ಫೂರ್ತಿದಾಯಕ ಕಥೆಯನ್ನು ಹೇಳುವ ಮೂಲಕವೇ ಚಿತ್ರ ಪ್ರಾರಂಭವಾಗುತ್ತದೆ. ಚಿತ್ರದ ಕಥೆಗೆ ಪ್ರಮುಖ ತಿರುವು ನೀಡುವ ಅತಿಥಿ ಪಾತ್ರದಲ್ಲಿ ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ. ಅನುಷ್ಕಾ ಅವರನ್ನು ಈ ಗೆಟಪ್‌ನಲ್ಲಿ ತೆರೆಯ ಮೇಲೆ ನೋಡಲು, ಅಭಿಮಾನಿಗಳ ಜೊತೆ ಚಿತ್ರತಂಡ ಕೂಡ ಕಾತುರವಾಗಿದೆ’ ಎಂದು ಹೇಳಿದ್ದಾರೆ.
ಇನ್ನು ಸೈರಾ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರ ಪಾತ್ರದ ಬಗ್ಗೆ ಸೈರಾ ನಾಯಕ ನಟ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು ಸೈರಾ ಚಿತ್ರದಲ್ಲಿ ಚಿರಂಜೀವಿ ಅವರೊಂದಿಗೆ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ತಮನ್ನಾ, ಜಗಪತಿ ಬಾಬು, ನಯನತಾರಾ ಹೀಗೆ ಅನೇಕ ಸ್ಟಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಸೈರಾ ಚಿತ್ರ ಅಕ್ಟೋಬರ್ ಮೊದಲ ವಾರ ತೆಲುಗು, ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದ್ದು, ಚಿತ್ರದಲ್ಲಿ ಅನುಷ್ಕಾ ಗೆಟಪ್, ಲುಕ್ ಹೇಗಿರಲಿದೆ ಅನ್ನೋದು ಚಿತ್ರ ಬಿಡುಗಡೆಯಾದ ಮೇಲಷ್ಟೆ ಗೊತ್ತಾಗಲಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾಖಾನ್ ವಿಧಿವಶ
51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೊದಲ ಬಾರಿಗೆ ಕನ್ನಡದ ನಟನಿಗೆ ಉದ್ಘಾಟನಾ ಗೌರವ
ಸಲಾರ್ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್ನಲ್ಲಿ ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ
ರಾಜಕೀಯಕ್ಕೆ ಬರುವಂತೆ ಒತ್ತಾಯಿಸಬೇಡಿ, ಪ್ರತಿಭಟನೆ ಕೈಬಿಡಿ: ಅಭಿಮಾನಿಗಳಿಗೆ ರಜನಿಕಾಂತ್
ದುಬೈ :ಕೋವಿಡ್ ಲಸಿಕೆ ತೆಗೆದುಕೊಂಡ ಬಾಲಿವುಡ್ ನ ಮೊದಲ ನಟಿ ಶಿಲ್ಪಾ ಶಿರೋಡ್ಕರ್