
ವಿಜಯ್ ದೇವರಕೊಂಡರಿಗೆ ಆ ದೋಷವಿದೆ, ಅವರು ಎಂದೂ.. ಜೋತ್ಯಿಷಿ ಹೇಳಿದ ಹಳೆಯ ಮಾತು ಮತ್ತೆ ವೈರಲ್
Team Udayavani, Sep 19, 2022, 1:01 PM IST

ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ʼಲೈಗರ್ʼ ಎಷ್ಟು ಅಬ್ಬರದಿಂದ ರಿಲೀಸ್ ಆಗಿತ್ತೋ, ಅಷ್ಟೇ ವೇಗದಿಂದ ಥಿಯೇಟರ್ ನಿಂದ ದೂರ ಹೋಗಿದೆ. ನಿರೀಕ್ಷೆ ಹುಟ್ಟಿಸಿದ ಸಿನಿಮಾ ಎಷ್ಟೋ ಮಂದಿಗೆ ನಿರಾಸೆ ಮೂಡಿಸಿ, ಬಾಕ್ಸ್ ಆಫೀಸ್ ನಲ್ಲೂ ಸೋತಿದೆ.
ಆ.25 ರಂದು ರಿಲೀಸ್ ಆದ ಸಿನಿಮಾಕ್ಕೆ ಮೊದಲಿನಿಂದಲೂ ಹೈಪ್ ಇತ್ತು. ಭರ್ಜರಿ ಫೈಟ್ ಸೀನ್ ಗಳಿರುವ ಚಿತ್ರದಲ್ಲಿ ವಿಜಯ್ ಜಬರ್ ದಸ್ತ್ ಬಾಡಿ ಬಿಲ್ಡ್ ಮಾಡಿ ಚಿತ್ರಕ್ಕಾಗಿ ತಯಾರಿ ನಡೆಸಿದ್ದರು. ಆದರೆ ಚಿತ್ರ ರಿಲೀಸ್ ಆದ ಬಳಿಕ ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆಯಿದ್ದ ನಿರೀಕ್ಷೆ ಹುಸಿಯಾಯಿತು. ನಿರ್ದೇಶಕ ಪುರಿ ಜಗನ್ನಾಥ್ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿ ಪ್ರೇಕಕ್ಷಕರಿಗೆ ಮೋಸ ಮಾಡಿದರು ಎನ್ನುವ ಮಾತುಗಳೂ ಕೇಳಿ ಬಂತು.
ವಿಜಯ್ ದೇವರಕೊಂಡ ಅವರಿಗೆ ʼಲೈಗರ್ʼ ಸೋಲು ದೊಡ್ಡ ಹಿನ್ನೆಡೆಯಾಗಿದೆ. ಈ ಹಿಂದಿನ ಚಿತ್ರಗಳಾದ ʼವರ್ಲ್ಡ್ ಫೇಮಸ್ ಲವರ್, ʼ ʼನೋಟʼ ಕೂಡ ಅಟ್ಟರ್ ಫ್ಲಾಫ್ ಸಾಲಿಗೆ ಸೇರಿತ್ತು. ಈ ಸರಣಿ ಸೋಲಿನ ಹಿಂದಿನ ಕಾರಣದ ಬಗ್ಗೆ ಟಿಟೌನ್ ನಲ್ಲಿ ಮಾತುಗಳು ಆರಂಭವಾಗಿದೆ.
ತೆಲಂಗಾಣದ ಜೋತ್ಯಿಷಿಯೊಬ್ಬರು ವಿಜಯ್ ದೇವರಕೊಂಡ ಬಗ್ಗೆ ಹೇಳಿದ ಮಾತುಗಳು ಸತ್ಯವೆಂದು ಜನರೀಗ ಮಾತಾನಾಡಿಕೊಳ್ಳುತ್ತಿದ್ದಾರೆ. ವೇಣುಸ್ವಾಮಿ ಎಂಬ ಜ್ಯೋತಿಷಿಯೊಬ್ಬರು ಈ ಹಿಂದೆ ವಿಜಯ್ ದೇವರಕೊಂಡ ಭವಿಷ್ಯವನ್ನು ನುಡಿದಿದ್ದರು. ವಿಜಯ್ ದೇವರಕೊಂಡ ಅವರಿಗೆ ಅಷ್ಟಮ ಶನಿ ವಕ್ಕರಿಸಿದೆ. ವಿಜಯ್ ನಟರಾದ ಅರವಿಂದ ಸ್ವಾಮಿ, ಉದಯ್ ಕಿರಣ್ ರಂತೆ ಮೊದಲು ಮಿಂಚಿ ನಂತರ ಬದಿಗೆ ಸರಿಯುತ್ತಾರೆ. ಅವರು ಮುಂದಿನ ನಿರ್ಧಾರಗಳನ್ನು ತುಂಬಾ ಜಾಗ್ರತೆಯಿಂದ ತೆಗೆದುಕೊಳ್ಳಬೇಕು. ಅವರು ದೊಡ್ಡ ಹೀರೋ ಆಗಲು ಸಾಧ್ಯ ವಿಲ್ಲ ಎಂದು ಹೇಳಿದ್ದರು.
ಈ ಹಳೆಯ ಮಾತು ಈಗ ʼಲೈಗರ್ʼ ಸೋಲಿನ ಬಳಿಕ ಮತ್ತೆ ವೈರಲ್ ಆಗುತ್ತಿದೆ. ಕೆಲವರು ಸ್ವಾಮೀಜಿ ಹೇಳಿದ ಮಾತುಗಳೇ ಸತ್ಯವೆಂದು ಮಾತಾನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಇದೇ ವೇಣು ಸ್ವಾಮಿ ಸಮಂತಾ – ನಾಗ ಚೈತನ್ಯ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂದು ಮೊದಲೇ ಹೇಳಿದ್ದರು. ರಶ್ಮಿಕಾ ಅವರ ಯಶಸ್ಸಿನ ಬಗ್ಗೆಯೂ ಭವಿಷ್ಯವನ್ನು ನುಡಿದಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇರಳ ಚಲನಚಿತ್ರ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಡೂರ್ ಗೋಪಾಲಕೃಷ್ಣನ್ ರಾಜೀನಾಮೆ

ಪಠಾಣ್ ಅಬ್ಬರಕ್ಕೆ ನಡುಗಿದ ಬಾಕ್ಸಾಫೀಸ್: ಭಾರತದಲ್ಲೇ 300 ಕೋಟಿ ಗಳಿಸಿದ ಶಾರುಖ್ ಸಿನಿಮಾ

ಮೊದಲ ಬಾರಿ ಮಗಳ ಮುಖ ರಿವೀಲ್ ಮಾಡಿದ ಪಿಂಕಿ: ವೈರಲ್ ಆಯಿತು ಕ್ಯೂಟ್ ಮಾಲ್ತಿ ಫೋಟೋ

ಪಠಾಣ್ ಯಶಸ್ಸು; ಜೀವನವನ್ನು ಮತ್ತೆ ಸಿನಿಮಾಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು ಎಂದ ಶಾರುಖ್

ಹೆಸರು ದುರ್ಬಳಕೆ: ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ರಜನಿಕಾಂತ್
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
