ಸಲ್ಮಾನ್‌ ಆಪ್ತ,ಬಾಲಿವುಡ್‌ ನಟ ಇಂದರ್‌ ಕುಮಾರ್‌ ಹೃದಯಾಘಾತದಿಂದ ನಿಧನ

Team Udayavani, Jul 28, 2017, 2:41 PM IST

ಮುಂಬಯಿ: ಬಾಲಿವುಡ್‌ನ‌ ನಟ ಇಂದರ್‌ ಕುಮಾರ್‌ ಅವರು ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. 

ಸಲ್ಮಾನ್‌ ಖಾನ್‌ ಜೊತೆಗಿನ ಕೆಲ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಇಂದರ್‌ ಕುಮಾರ್‌ ಅವರ ಆಪ್ತ ವಲಯದಲ್ಲಿ ಓರ್ವ ರಾಗಿದ್ದರು. 

ಅಂಧೇರಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಶುಕ್ರವಾರ ನಸುಕಿನ 2 ಗಂಟೆಯ ವೇಳೆಗೆ ಹೃದಯಾಘಾತದಿಂದ ಇಂದರ್‌ ಕುಮಾರ್‌ ಕೊನೆಯುಸಿರೆಳೆದಿರುವುದಾಗಿ  ಕುಟುಂಬ ಮೂಲಗಳು ತಿಳಿಸಿವೆ. 

20 ವರ್ಷಗಳ ಕಾಲ ಬಾಲಿವುಡ್‌ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ಇಂದರ್‌ ಕುಮಾರ್‌  ಏಕ್ತಾ ಕಪೂರ್‌ ಅವರ ಜನಪ್ರಿಯ ಟಿವಿ ಶೋ ‘ಕ್ಯೂಂಕಿ ಸಾಸ್‌ ಭಿ ಕಭೀ ಬಹು ಥಿ’ನಲ್ಲಿ ಮಿಹಿರ್‌ ವಿರಾನಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದರು. ‘ತಿರ್ಚಿ ಟೋಪಿವಾಲೆ’, ‘ಕಹೀ ಪ್ಯಾರ್‌ ನಾ ಸೋ ಜಾಯೆ’, ‘ಪೇಯಿಂಗ್‌ ಗೆಸ್ಟ್‌,’ತುಮ್‌ಕೋ ನ ಭೂಲ್‌ ಪಾಯೆಂಗೆ’, ‘ವಾಂಟೆಡ್‌’ ಮೊದಲಾದವುಗಳು ಅವರ ಪ್ರಮುಖ ಚಿತ್ರಗಳು. ‘ಪಾಟಿ ಪೆಯ್ಡ ಹೆ ಯಾರ್‌’ ಚಿತ್ರ ಇನ್ನಷ್ಟೆ ಬಿಡುಗಡೆಯಾಗಬೇಕಿದೆ. 

ಪತ್ನಿ ಪಲ್ಲವಿ ಸರಫ್ ರನ್ನು ಇಂದರ್‌ ಕುಮಾರ್‌ ಅಗಲಿದ್ದಾರೆ. ಇಂದು ಸಂಜೆ ಯಾರಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ