ತನ್ನ ಮಾಜೀ ಬಾಯ್ ಫ್ರೆಂಡ್ ಹೆತ್ತವರನ್ನು ಭೇಟಿಯಾದ ದೀಪಿಕಾ ಪಡುಕೋಣೆ

Team Udayavani, May 12, 2019, 2:45 PM IST

ನ್ಯೂಯಾರ್ಕ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ನ್ಯೂಯಾರ್ಕ್ ನಲ್ಲಿ ತನ್ನ ಮಾಜೀ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಹೆತ್ತವರನ್ನು ಭೇಟಿಯಾಗಿದ್ದು ಈಗ ಬಿ-ಟೌನ್ ನಲ್ಲಿ ಭಾರೀ ಸುದ್ದಿಯಾಗಿದೆ.

ಬಾಲಿವುಡ್ ಹಿರಿಯ ನಟ ಮತ್ತು ರಣಬೀರ್ ಕಪೂರ್ ಅವರ ತಂದೆ ರಿಷಿ ಕಪೂರ್ ಅವರು ಚಿಕಿತ್ಸೆಗಾಗಿ ನ್ಯೂಯಾರ್ಕ್ ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ತಾವು ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆದಕೊಂಡಿದ್ದು ಮತ್ತು ತಾವೀಗ ಕ್ಯಾನ್ಸರ್ ಮುಕ್ತನಾಗಿರುವುದಾಗಿ ರಿಷಿ ಕಪೂರ್ ಇತ್ತೀಚಿಗಿನ ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಈ ವಿಷಯ ತಿಳಿದ ಬಳಿಕ ಬಾಲಿವುಡ್ ನ ಹಲವಾರು ನಟ, ನಟಿಯರು, ಮತ್ತು ಇತರರು ರಿಷಿ ಕಪೂರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದರು. ಇದೀಗ ನಟಿ ದೀಪಿಕಾ ಪಡುಕೋಣೆ ಅವರು ರಿಷಿ ಕಪೂರ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿರುವುದು ಲೇಟೆಸ್ಟ್ ಸುದ್ದಿಯಾಗಿದೆ.

ಈ ವಿಷಯವನ್ನು ರಣಬೀರ್ ಅವರ ತಾಯಿ ನೀತೂ ಕಪೂರ್ ಅವರು ತಮ್ಮ ಇನ್ಸ್ಟ್ರಾ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.

‘ಆತ್ಮೀಯ ದೀಪಿಕಾ ಪಡುಕೋಣೆಯೊಂದಿಗೆ ನಾವಿಂದು ಸುಂದರ ಸಂಜೆಯನ್ನು ಕಳೆದೆವು…’ ಎಂದು ನೀತೂ ಅವರು ತಮ್ಮ ಖಾತೆಯಲ್ಲಿ ಬರೆದುಕೊಂಡು ಮೂವರು ಜೊತೆಗಿರುವ ಫೊಟೋವನ್ನು ಹಂಚಿಕೊಂಡಿದ್ದಾರೆ.

View this post on Instagram

Such a fun evening with adorable @deepikapadukone .. gave lot of love n warmth 😍🥰

A post shared by neetu Kapoor. Fightingfyt (@neetu54) on

ದೀಪಿಕಾ ಅವರು ರಣಬೀರ್ ಕಪೂರ್ ಅವರೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಈ ಜೋಡಿ ಖಾಸಗಿ ಜೀವನದಿಂದ ಬೇರ್ಪಡುವ ಮೊದಲು ಸುಮಾರು ಏಳು ಚಲನಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಬಳಿಕ ದೀಪಿಕಾ ಅವರು ರಣವೀರ್ ಸಿಂಗ್ ಅವರನ್ನು ಮದುವೆಯಾಗಿದ್ದಾರೆ. ಇತ್ತ ರಣಬೀರ್ ಕಪೂರ್ ಅಲಿಯಾ ಭಟ್ ಜೊತೆಗೆ ತಮ್ಮ ಸ್ನೇಹ ಸಂಬಂಧವನ್ನು ಮುಂದುವರೆಸಿದ್ದಾರೆ.

ರಣಬೀರ್ ಕಪೂರ್ ಜೀವನದಿಂದ ದೀಪಿಕಾ ದೂರವಾಗಿದ್ದರೂ ಅವರಿಬ್ಬರ ಗೆಳೆತನ ಅಬಾಧಿತವಾಗಿದೆ.

ರಿಷಿ ಕಪೂರ್ ಅವರ ಎಂಟು ತಿಂಗಳ ಚಿಕಿತ್ಸೆ ಮೇ 01ರಿಂದ ಪ್ರಾರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಅವರಿಗೆ ಅಸ್ಥಿಮಜ್ಜೆ ವರ್ಗಾವಣೆ ಚಿಕಿತ್ಸೆ ನಡೆಯಲಿದೆ. ಒಟ್ಟಾರೆಯಾಗಿ ರಿಷಿ ಕಪೂರ್ ಅವರು ಇದೀಗ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿರುವುದು ಖುಷಿಯ ವಿಚಾರವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ