ಹೊಸ ಉದ್ಯಮಕ್ಕೆ ಕೈ ಹಾಕಿದ ನಟಿ ಕಂಗನಾ…!
Team Udayavani, Feb 23, 2021, 9:40 PM IST
ಮುಂಬೈ : ಬಾಲಿವುಡ್ ಬೋಲ್ಡ್ ಬೆಡಗಿ ಕಂಗನಾ ರನೌತ್ ಅಭಿನಯದ ಜತೆಗೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮೂರಲ್ಲಿ ಒಂದು ದೊಡ್ಡ ರೆಸ್ಟೋರೆಂಟ್ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದ್ದಾರೆ.
ಬಾಲಿವುಡ್ ನ ಡೇರ್ ಡೇವಿಲ್ ನಟಿ ಕಂಗನಾ, ಹೋಟೆಲ್ ಉದ್ಯಮಕ್ಕೆ ಕೈ ಹಾಕುತ್ತಿದ್ದಾರೆ. ತಾನು ಹುಟ್ಟಿ ಬೆಳೆದ ಮನಾಲಿಯಲ್ಲಿ ಸುಂದರವಾದ ಕೆಫೆ, ರೆಸ್ಟೋರೆಂಟ್ ತೆರೆಯಲು ಫ್ಲ್ಯಾನ್ ಮಾಡಿದ್ದಾರೆ. ಇಂದು (ಫೆ.23) ತಮ್ಮ ರೆಸ್ಟೋರೆಂಟ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಕೂಡ ನಡೆಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ :‘ಗ್ಯಾಂಗ್ ರೇಪ್’ ಬೆದರಿಕೆ ಎದುರಿಸಿದ್ದರಂತೆ ನಟಿ ಪ್ರಿಯಾಂಕಾ…!
ಇದು ನನ್ನ ಕನಸಿನ ಯೋಜನೆ ಎಂದಿರುವ ಕಂಗನಾ, ನನಗೆ ಮೊದಲಿಂದಲೂ ಆಹಾರದ ಮೇಲೆ ತುಂಬ ಪ್ರೀತಿ. ಫುಡ್ ತಯಾರಿಸುವುದು ನನಗೆ ಫ್ಯಾಷನ್. ಬಹಳ ದಿನಗಳ ನನ್ನ ಕನಸು ಈಡೇರುತ್ತಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಇನ್ನು ಕಂಗನಾ ರನೌತ್ ಸದ್ಯ ಆ್ಯಕ್ಷನ್ ಜಾನರ್ ನ ಧಾಕಡ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ತೇಜಸ್ ಸಿನಿಮಾ ಮುಖ್ಯಪಾತ್ರಕ್ಕೆ ಕಂಗನಾ ಆಯ್ಕೆಯಾಗಿದ್ದಾರೆ.