‘ಗ್ಯಾಂಗ್ ರೇಪ್’ ಬೆದರಿಕೆ ಎದುರಿಸಿದ್ದರಂತೆ ನಟಿ ಪ್ರಿಯಾಂಕಾ…!
Team Udayavani, Feb 23, 2021, 8:00 PM IST
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾ ರಂಗದಲ್ಲಿ ತಾವು ಎದುರಿಸಿದ್ದ ಕಹಿ ಘಟನೆಗಳನ್ನು ತಮ್ಮ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.
ಬಿಟೌನ್ ನಿಂದ ಹಾಲಿವುಡ್ ಗೆ ಹಾರಿದ್ದ ಪ್ರಿಯಾಂಕಾ ಅವರಿಗೆ ಎದುರಾಗಿದ್ದು ಜನಾಂಗೀಯ ನಿಂದನೆ, ವರ್ಣಭೇದದ ಬಿಸಿ. ಅಮೆರಿಕದ ರಿಯಾಲಿಟಿ ಶೋವೊಂದರ ಮೂಲಕ ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಪಿಗ್ಗಿ ಪದಾರ್ಪಣೆ ಮಾಡಿದ್ದರು. ಈ ಕಾರ್ಯಕ್ರಮದ ಪ್ರೋಮೊ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಆದರೆ, ಈ ಪ್ರೋಮೊ ವಿರುದ್ಧ ಸಾಕಷ್ಟು ವಿರೋಧ ಕೇಳಿ ಬಂದಿತ್ತಂತೆ. ಈ ಕುರಿತು ಪುಸ್ತಕದಲ್ಲಿ ಅವರೇ ಹೇಳಿಕೊಂಡಿರುವಂತೆ ‘ಈ ಪ್ರೋಮೊ ನನಗೆ ಒಳ್ಳೆಯ ಬ್ರೇಕ್ ನೀಡಬಹುದು ಎಂದುಕೊಂಡಿದ್ದೆ. ಆದರೆ, ಸಾಕಷ್ಟು ಜನರ ನೆಗೆಟಿವ್ ಕಾಮೆಂಟ್ ನೋಡಿ ನನ್ನ ನಿರೀಕ್ಷೆ ನೀರು ಪಾಲಾಯಿತು ಎಂದಿದ್ದಾರೆ.
ರೇಪ್ ಬೆದರಿಕೆ :
ಹಾಲಿವುಡ್ ಚಿತ್ರರಂಗದಲ್ಲಿ ಮಿಂಚಬೇಕು ಎಂದಿದ್ದ ಪ್ರಿಯಾಂಕಾ ಅವರ ಆಶಾಗೋಪುರ ಕುಸಿದಂತೆ ಅನುಭವವಾಯಿತಂತೆ. ಇದಕ್ಕೆ ಕಾರಣ ಅಲ್ಲಿಯ ಜನರ ಟೀಕೆ. ಪ್ರೋಮೊ ನೋಡಿದ ಕೆಲವರು ಈ ಕಂದು ಬಣ್ಣದ ಭಯೋತ್ಪಾದಕಿಯನ್ನು ಅಮೆರಿಕದಲ್ಲೇಕೆ ಪರಿಚಯಿಸುತ್ತಿದ್ದೀರಿ ಎಂದು ತೆಗಳಿದ್ದರಂತೆ. ಅಷ್ಟೇ ಅಲ್ಲದೆ ‘ನಿಮ್ಮ ದೇಶಕ್ಕೆ ತೊಲಗು ಇಲ್ಲದಿದ್ದರೆ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವ ಬೆದರಿಕೆಯ ಇ-ಮೇಲ್ ಹಾಗೂ ಟ್ವೀಟ್’ ಗಳು ಹರಿದು ಬಂದಿದ್ದವಂತೆ. ವರ್ಷಗಳ ಹಿಂದೆ ನಡೆದ ಕಹಿ ಘಟನೆಯನ್ನು ಪುಸ್ತಕದಲ್ಲಿ ಅಕ್ಷರ ರೂಪದಲ್ಲಿ ವ್ಯಕ್ತಪಡಿಸಲು ಈಗಲೂ ಕಷ್ಟವಾಗುತ್ತಿದೆ ಎಂದಿದ್ದಾರೆ ಪ್ರಿಯಾಂಕಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುಟುಂಬ ರಕ್ಷಣೆಗೆ ಮತ್ತೆ ಬಂದ್ರು ಚಾರ್ಜ್ ಕುಟ್ಟಿ? : ʼದೃಶ್ಯಂ-3ʼ ಪೋಸ್ಟರ್ ವೈರಲ್
ಆ.15 ಕ್ಕೆ ʼಸಲಾರ್ʼ ಚಿತ್ರದಿಂದ ಬಿಗ್ ಅನೌನ್ಸ್ ಮೆಂಟ್: ಹೆಚ್ಚಾಯಿತು ಫ್ಯಾನ್ಸ್ ಕುತೂಹಲ
ಹಾಲಿವುಡ್ನ ಆಸ್ಕರ್ನಿಂದ ಹೊಗಳಿಕೆ ಪಡೆದ “ಲಾಲ್ ಸಿಂಗ್ ಛಡ್ಡಾ’ಸಿನಿಮಾ
ವಿವಾದದ ಹೇಳಿಕೆಯೇ ʼಲಾಲ್ ಸಿಂಗ್ ಚಡ್ಡಾʼ ಕ್ಕೆ ಮುಳುವಾಯಿತೇ? : ಟ್ರೋಲ್ ಆದ್ರು ಬೇಬೋ
ಫೋಟೋ ವಿವಾದ: ಬಾಲಿವುಡ್ ನಟ ರಣವೀರ್ ಸಿಂಗ್ಗೆ ನೋಟಿಸ್
MUST WATCH
ಹೊಸ ಸೇರ್ಪಡೆ
ಶಿವಮೊಗ್ಗ ಸ್ಮಾರ್ಟ್ಸಿಟಿ ಯೋಜನಾ ನೋಟ
ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ
ಜಾನಪದ ಕಲಾವಿದರೊಂದಿಗೆ ಹೆಜ್ಜೆಹಾಕಿದ ಮಮತಾ ಬ್ಯಾನರ್ಜಿ: ವಿಡಿಯೋ ನೋಡಿ
ಕೊಟ್ಟಿಗೆಹಾರದಲ್ಲಿ ಆನೆ ದಾಳಿಗೆ ರೈತ ಬಲಿ: ಮೃತದೇಹವನ್ನ ಕಾಡಿನಲ್ಲಿ ಎಳೆದಾಡಿದ ಒಂಟಿ ಸಲಗ
ಸ್ವಾತಂತ್ರ್ಯ ದಿನಾಚರಣೆ; ಅಂಬೇಡ್ಕರ್ ಭಾವಚಿತ್ರ ಮರೆತ ತಾಲೂಕಾಡಳಿತ; ದಲಿತ ಸಂಘನೆಗಳ ಆಕ್ರೋಶ