‘ಆತನಿಗೆ ಮೊದಲೇ ಒಂದು ಸಂಸಾರ ಇತ್ತು’…ಗಂಡನ ವಿರುದ್ಧ ನಟಿ ರಾಖಿ ಆರೋಪ
ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಕೂಡ ತನ್ನ ಮದುವೆ ಬಗ್ಗೆ ಕೆಲವೊಂದು ಸುಳ್ಳುಗಳನ್ನು ಹೇಳಿದ್ದಳು.
Team Udayavani, Feb 24, 2021, 5:02 PM IST
ಮುಂಬೈ : ಹಿಂದಿ ಬಿಗ್ ಬಾಸ್ 14 ನೇ ಸೀಸನ್ ಮುಗಿಸಿ ಹೊರ ಬಂದಿರುವ ಬಾಲಿವುಡ್ ನಟಿ ರಾಖಿ ಸಾವಂತ್, ರಿತೇಶ್ ಜತೆ ನಡೆದ ತನ್ನ ಮದುವೆ ಕುರಿತು ಆಘಾತಕಾರಿ ಸಂಗತಿಗಳನ್ನ ಹೊರಹಾಕಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ರಾಖಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಿತೇಶ್ ಹಾಗೂ ತನ್ನ ಮದುವೆ ಹೇಗೆ ನಡೆಯಿತು ಎಂದು ಹೇಳಿಕೊಂಡಿದ್ದಾರೆ. ‘ಒಬ್ಬರು ನನ್ನ ಅಪಹರಣ ಮಾಡಲು ಮುಂದಾಗಿದ್ದರು. ಈ ವಿಚಾರ ನನಗೆ ಹಾಗೂ ನಮ್ಮ ತಾಯಿಗೆ ಭಯ ಹುಟ್ಟಿಸಿತು. ಈ ಆಪತ್ತಿನಿಂದ ಪಾರಾಗಲು ಚಿಂತಿಸುತ್ತಿರುವಾಗಲೇ ರಿತೇಶ್ ಜತೆ ಮದುವೆ ಮಾಡಲು ನಮ್ಮ ತಾಯಿ ಮುಂದಾದರು. ನಾನು ಕೂಡ ಈ ಮದುವೆಗೆ ಒಪ್ಪಿಕೊಂಡೆ’ಎಂದಿದ್ದಾರೆ.
ಮದುವೆ ಮುಂಚೆ ರಿತೇಶ್ ಜತೆ ಒಮ್ಮೆಯೂ ಮಾತಾಡಿರಲಿಲ್ಲ ಎಂದು ಹೇಳಿರುವ ರಾಖಿ, 2019 ರಲ್ಲಿ ಹೋಟೆಲ್ ವೊಂದರಲ್ಲಿ ನಮ್ಮ ಮದುವೆ ನಡೆಯಿತು. ಈ ವಿಷಯ ತಿಳಿದ ಕೆಲ ಪತ್ರಕರ್ತರು ಅಲ್ಲಿಗೆ ಧಾವಿಸಿದ್ದರಿಂದ ರಿತೇಶ್ ಹಿತ್ತಲ ಬಾಗಿಲಿನಿಂದ ಓಡಿದ. ಅವನು ಹಾಗೇಕೆ ಮಾಡಿದ ಎಂದು ನಂಗೆ ಅಂದು ತಿಳಿಯಲಿಲ್ಲ. ನಂತರ ಲಾಕ್ ಡೌನ್ ವೇಳೆ ಎಲ್ಲವೂ ನಡೆದು ಹೋಯಿತು ಎಂದಿದ್ದಾರೆ.
ರಿತೇಶ್ ಕುರಿತು ಮತ್ತೊಂದು ಆಘಾತಕಾರಿ ವಿಷಯ ರಿವೀಲ್ ಮಾಡಿರುವ ರಾಖಿ, ಆತನಿಗೆ ಈ ಮುಂಚೆಯೇ ಒಂದು ಸಂಸಾರ ಇರುವ ವಿಚಾರ ನನ್ನ ಮುಂದೆ ಮುಚ್ಚಿಟ್ಟಿದ್ದ ಎಂದಿದ್ದಾರೆ. ಆದರೆ, ರಾಖಿ ಸಾವಂತ್ ತುಂಬ ಸುಳ್ಳುಬುರುಕಿ ಎಂದು ಆಕೆಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಈ ಹಿಂದೆಯೂ ಸಾಕಷ್ಟು ಹಸಿಹಸಿ ಸುಳ್ಳುಗಳನ್ನು ಆಕೆ ಹೇಳಿದ್ದಳು. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಕೂಡ ತನ್ನ ಮದುವೆ ಬಗ್ಗೆ ಕೆಲವೊಂದು ಸುಳ್ಳುಗಳನ್ನು ಹೇಳಿದ್ದಳು. ಈಗ ಮತ್ತೆ ಗಂಡನ ಮೇಲೆ ಗುರುತರವಾದ ಅಪವಾದ ಹೊರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಪು: ನಾಗಬನದ ಮೇಲೆ ಉರುಳಿ ಬಿದ್ದ ಅಶ್ವಥ ಮರ, ಅಪಾರ ಹಾನಿ
ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಸದಾಶಿವರಾವ್ ಭೋಸಲೆ ಇನ್ನಿಲ್ಲ
ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ
10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!