ಉಸಿರಾಟದಲ್ಲಿ ಸಮಸ್ಯೆ : ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲು

Team Udayavani, Nov 11, 2019, 5:26 PM IST

ಮುಂಬಯಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಗಂಭೀರ ಸ್ವರೂಪದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಸೋಮವಾರದಂದು ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತು ಸದ್ಯಕ್ಕೆ ಲತಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಲತಾ ಮಂಗೆಶ್ಕರ್ ಅವರಿಗೆ ಸೋಮವಾರ ಬೆಳಗಿನ ಜಾವ ಎದೆ ಹಿಡಿದುಕೊಂಡ ಸ್ಥಿತಿ ಕಂಡುಬಂದ ಪರಿಣಾಮ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಇವರ ಪರಿಸ್ಥಿತಿ ಗಂಭೀರವಾಗಿದ್ದರೂ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಲತಾ ಅವರ ಕುಟುಂಬ ಮೂಲಗಳು ತಿಳಿಸಿವೆ.

ಲತಾ ಮಂಗೆಶ್ಕರ್ ಅವರು ರವಿವಾರವಷ್ಟೇ ಹಿರಿಯ ನಟಿ ಪದ್ಮಿನಿ ಕೊಲ್ಲಾಪುರೆ ಅವರು ‘ಪಾಣಿಪತ್’ ಚಿತ್ರದ ಮೂಲಕ ಮತ್ತೆ ಹಿರಿತೆರೆಗೆ ಮರಳಿರುವ ಕುರಿತು ಸಂತೋಷವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿ ಅವರಿಗೆ ಶುಭ ಹಾರೈಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ