ಏನಿದು ನಟಿ ನೀನಾ ಗುಪ್ತಾ ಅವರ ‘ಫ್ರಾಕ್ ಕಾ ಶಾಕ್’ !?

Team Udayavani, Dec 8, 2019, 7:25 PM IST

ಮುಂಬಯಿ: ಬಿ ಟೌನ್ ನ ಹಿರಿಯ ನಟಿ ನೀನಾ ಗುಪ್ತಾ 60ರ ಈ ಪ್ರಾಯದಲ್ಲೂ ತನ್ನ ಅನುಪಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವ ಕೆಲವೇ ನಟಿಯರಲ್ಲಿ ಒಬ್ಬರು. ಮತ್ತು ತಾನು ತೊಟ್ಟುಕೊಳ್ಳುವ ಬಟ್ಟೆಗಳಲ್ಲೂ ವಿಶೇಷತೆಯನ್ನು ಕಾಣಿಸುವ ನಟಿಯಾಗಿ ನೀನಾ ಗುಪ್ತಾ ಬಾಲಿವುಡ್ ನಲ್ಲಿ ಗುರುತಿಸಲ್ಪಡುತ್ತಾರೆ. ಹಾಗಾಗಿ ಆಕೆ ತನ್ನ ಸಿನೇಮಾಗಳಲ್ಲಿ ಅಥವಾ ಟಿವಿ ಶೋಗಳಲ್ಲಿ ಎಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೋ ಅಷ್ಟೇ ತನ್ನ ಉಡುಗೆ ತೊಡುಗೆ ಮತ್ತು ಲುಕ್ ವಿಚಾರದಲ್ಲೂ ಹೆಸರುವಾಸಿ ಈ ನಟಿ.

ಇದೀಗ ನೀನಾ ಗುಪ್ತಾ ಅವರು ತನ್ನ ಅಭಿಮಾನಿಗಳಿಗೆ ಇನ್ನೊಂದು ಶಾಕ್ ನೀಡಿದ್ದಾರೆ. ಅದು ಆಕೆಯೇ ಹೇಳಿಕೊಂಡಿರುವಂತೆ ‘ಫ್ರಾಕ್ ಕಾ ಶಾಕ್’!. ಹೌದು ಈ ನಟಿ ಬಿಳಿ ಬಣ್ಣದ ಫ್ರಾಕ್ ಮೇಲೆ ಹಳದಿ ಪ್ರಿಂಟ್ ಇರುವ ತುಂಡುಡುಗೆ ಧರಿಸಿರುವ ಫೊಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಕಳೆದ ತಿಂಗಳು ದುಬಾರಿ ಬೆಲೆಯ ಹಸಿರು ಬಣ್ಣದ ಸೀರೆ ಮತ್ತು ತುಂಡು ತೋಳಿನ ಕುಪ್ಪಸವನ್ನು ತೊಟ್ಟ ಫೊಟೋವನ್ನು ವಸ್ತ್ರ ವಿನ್ಯಾಸಕಿಯೂ ಆಗಿರುವ ನೀನಾ ಅವರ ಮಗಳು ಮಸಾಬಾ ಗುಪ್ತಾ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು. ಕುಪ್ಪಸ ಸಹಿತ ಈ ಸೀರೆಯ ಬೆಲೆ 43 ಸಾವಿರ ರೂಪಾಯಿಗಳು ಎಂದು ಹೇಳಲಾಗಿತ್ತು.

ತನ್ನ ಮಗಳು ಮಸಾಬಾ ಗುಪ್ತಾ ಹೆಸರಾಂತ ವಸ್ತ್ರ ವಿನ್ಯಾಸಕಿಯಾಗಿರುವುದರಿಂದ ನೀನಾ ಅವರು ಪ್ರತೀಸಲ ಹೊಸ ಹೊಸ ವಿನ್ಯಾಸದ ಉಡುಗೆಗಳನ್ನು ಧರಿಸಿಕೊಂಡು ತನ್ನ ಅಭಿಮಾನಿಗಳಿಗೆ ಈ ರೀತಿ ಶಾಕ್ ನೀಡುತ್ತಲೇ ಇರುತ್ತಾರೆ.

ತನ್ನ ಶುಭ್ ಮಂಗಲ್ ಜ್ಯಾದಾ ಸಾವಧಾನ್ ಚಿತ್ರದ ಸಹ ನಟ ಗಜರಾಜ್ ರಾವ್ ಅವರು ಈ ಚಿತ್ರವನ್ನು ಕ್ಲಿಕ್ ಮಾಡಿರುವುದಾಗಿ ನೀನಾ ಬರೆದುಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ