ರಿಯಾಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದದ್ದು ನಟಿ ಸಾರಾ ಅಲಿ ಖಾನ್? ಈಕೆ ಸ್ಟಾರ್ ನಟನ ಪುತ್ರಿ

ಡ್ರಗ್ ಪೆಡ್ಲರ್ ಗಳು ಸಾರಾ ಅಲಿ ಖಾನ್ ಗೆ ಡ್ರಗ್ ಸರಬರಾಜು ಮಾಡುತ್ತಿರುವುದಾಗಿ ವರದಿ ತಿಳಿಸಿದೆ.

Team Udayavani, Sep 14, 2020, 4:56 PM IST

ರಿಯಾಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದದ್ದು ನಟಿ ಸಾರಾ ಅಲಿ ಖಾನ್? ಈಕೆ ಸ್ಟಾರ್ ನಟನ ಪುತ್ರಿ

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಾಗೂ ಡ್ರಗ್ಸ್ ಜಾಲದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಮುಂದೆ ರಿಯಾ ಚಕ್ರವರ್ತಿ ಹಲವಾರು ಸೆಲೆಬ್ರಿಟಿಗಳ ಹೆಸರನ್ನು ಬಾಯ್ಬಿಟ್ಟಿರುವ ಬಳಿಕ ಎನ್ ಸಿಬಿ ಹಲವು ನಟ, ನಟಿಯರ ಚಟುವಟಿಕೆ ಮೇಲೆ ಕಣ್ಣಿದ್ದಾರೆ. ಅಲ್ಲದೇ ನಟಿ ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಹಾಗೂ ಇತರರು ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್ ಸೇವಿಸುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿರುವುದಾಗಿ ವರದಿ ತಿಳಿಸಿದೆ.

ಸುಶಾಂತ್ ಹಾಗೂ ಡ್ರಗ್ಸ್ ಜಾಲದ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಈಗಾಗಲೇ ರಿಯಾ ಚಕ್ರವರ್ತಿ ಹಾಗೂ ಕೆಲವು ಡ್ರಗ್ ಪೆಡ್ಲರ್ಸ್ ಗಳನ್ನು ಬಂಧಿಸಿದ್ದಾರೆ. ಡ್ರಗ್ ಪೆಡ್ಲರ್ ಗಳು ಸಾರಾ ಅಲಿ ಖಾನ್ ಗೆ ಡ್ರಗ್ ಸರಬರಾಜು ಮಾಡುತ್ತಿರುವುದಾಗಿ ವರದಿ ತಿಳಿಸಿದೆ.

ರಿಯಾ ಚಕ್ರವರ್ತಿ ಮತ್ತು ಸಾರಾ ಅಲಿ ಖಾನ್ ಕೆಲವು ಸಾಮಾನ್ಯ ಮಾದಕ ವಸ್ತು ಮಾರಾಟಗಾರರ ಜತೆ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲ ರಿಯಾ ಚಕ್ರವರ್ತಿ ತಾನು ಉಪಯೋಗಿಸಲು ಡ್ರಗ್ಸ್ ಅನ್ನು ಸಾರಾಳಿಂದ ಪಡೆಯುತ್ತಿದ್ದಳು ಎಂದು ವರದಿ ವಿವರಿಸಿದೆ.

ಇದನ್ನೂ ಓದಿ: ಸುಶಾಂತ್ ಪ್ರಕರಣದಲ್ಲಿ ‘ನಶೆ’ ನಂಟು: ರಿಯಾ ಚಕ್ರವರ್ತಿ, ಶೋವಿಕ್ ನಿವಾಸಕ್ಕೆ NCB ರೈಡ್

ಸಿಂಬಾ ಸಿನಿಮಾದ ಹೀರೋಯಿನ್ ಸಾರಾ ರಿಯಾ ಜತೆಗಿನ ಸಂಪರ್ಕ ಹೊರತುಪಡಿಸಿ ತನ್ನದೇ ಆದ ಒಂದು ಡ್ರಗ್ ಪೆಡ್ಲರ್ ಗುಂಪನ್ನು ಹೊಂದಿದ್ದಳು. ಈ ನಿಟ್ಟಿನಲ್ಲಿ ಆಕೆ ಪ್ರತ್ಯೇಕವಾಗಿ ಡ್ರಗ್ಸ್ ಬಳಕೆ ಮಾಡಿಕೊಳ್ಳುತ್ತಿದ್ದಳು. ರಿಯಾ ಕೂಡಾ ಸಾರಾಳ ಡ್ರಗ್ ಪೆಡ್ಲರ್ ಜತೆ ಸಂಪರ್ಕದಲ್ಲಿದ್ದು, ಆತನಿಂದ ಬೇಕಾದ ಡ್ರಗ್ಸ್ ಖರೀದಿಸಿ ಅದನ್ನು ಸುಶಾಂತ್ ಗೆ ನೀಡುತ್ತಿದ್ದಳು ಎಂದು ವರದಿ ವಿವರಿಸಿದೆ.

ಇದೀಗ ರಿಯಾ ಚಕ್ರವರ್ತಿ ಹಾಗೂ ಸಾರಾಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಎನ್ ಸಿಬಿ ತನಿಖೆ ನಡೆಸುತ್ತಿದೆ. ಈಗಾಗಲೇ ರಿಯಾ ಜತೆ ಸಂಪರ್ಕದಲ್ಲಿದ್ದ ಬಹುತೇಕ ಡ್ರಗ್ ಸರಬರಾಜುದಾರರನ್ನು ಬಂಧಿಸಲಾಗಿದೆ.

ಡ್ರಗ್ ಸಂಚಿನ ಜಾಲಕ್ಕೆ ಸಂಬಂಧಿಸಿದಂತೆ ಈವರೆಗೆ 16 ಮಂದಿಯನ್ನು ಬಂಧಿಸಲಾಗಿದೆ. ಭಾನುವಾರ ಎನ್ ಸಿಬಿ ಒಟ್ಟು ಆರು ಮಂದಿಯನ್ನು ಬಂಧಿಸಿತ್ತು. ಅವರನ್ನೆಲ್ಲಾ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಇವರನ್ನು ಕರಮ್ ಜೀತ್ ಸಿಂಗ್ ಆನಂದ್, ಡಿ.ಫೆರ್ನಾಂಡಿಸ್, ಸಂಕೇತ್ ಪಾಟೀಲ್, ಅಂಕುಶ್ ಅನ್ ರೇಜಾ, ಸಂದೀಪ್ ಗುಪ್ತಾ ಮತ್ತು ಅಫ್ತಾತಾಬ್ ಫತೆಹ್ ಅನ್ಸಾರಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸುಶಾಂತ್ 5 ದಿನದಲ್ಲಿ 14 ಬಾರಿ ಸಿಮ್ ಬದಲಾಯಿಸಿದ್ದೇಕೆ? ಬಿಹಾರ ಪೊಲೀಸರಿಂದ ಸತ್ಯ ಬಯಲು

ಸುಶಾಂತ್ ಸಾವಿನ ಪ್ರಕರಣದಲ್ಲಿನ ಡ್ರಗ್ಸ್ ಲಿಂಕ್ ಕುರಿತ ಆರೋಪದಲ್ಲಿ ರಿಯಾ ಚಕ್ರವರ್ತಿಯನ್ನು ಕಳೆದ ಮಂಗಳವಾರ ಎನ್ ಸಿಬಿ ಬಂಧಿಸಿತ್ತು. ರಿಯಾ ಹಾಗೂ ಆಕೆಯ ಸಹೋದರ ಶೋವಿಕ್ ವಿರುದ್ಧ ಎನ್ ಸಿಬಿ ಎನ್ ಡಿಪಿಎಸ್ ಕಾಯ್ದೆ 27ಎರ ಅಡಿ ಪ್ರಕರಣ ದಾಖಲಿಸಿತ್ತು.

ಯಾರೀಕೆ ಸಾರಾ ಅಲಿಖಾನ್?

1995ರ ಆಗಸ್ಟ್ 12ರಂದು ಮುಂಬೈ ನಲ್ಲಿ ಜನಿಸಿದ್ದ ಸಾರಾ ಅಲಿಖಾನ್, ಪಟೌಡಿ ಮತ್ತು ಟ್ಯಾಗೋರ್ ಕುಟುಂಬದ ಸದಸ್ಯೆ…ಈಕೆ ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಪುತ್ರಿ. ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಠಾಗೋರ್ ಮೊಮ್ಮಗಳು. ಕೊಲಂಬಿಯಾ ಯೂನಿರ್ವಸಿಟಿಯಲ್ಲಿ ಪದವಿ ಪಡೆದಿದ್ದ ಈಕೆ 2018ರಲ್ಲಿ ಬಾಲಿವುಡ್ ನಲ್ಲಿ ತೆರೆಕಂಡಿದ್ದ ಕೇದಾರನಾಥ್ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದಳು. ಆ ನಂತರ ಸಿಂಬಾ ಚಿತ್ರದಲ್ಲಿ ನಟಿಸಿದ್ದು, ಎರಡೂ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಹಿಟ್ ಆಗಿದ್ದವು.

ಟಾಪ್ ನ್ಯೂಸ್

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

1-dsd

ಒಳ ಉಡುಪಿನ ವಿಚಾರಕ್ಕೆ ದೇವರ ಪ್ರಸ್ತಾಪ : ನಟಿ ಶ್ವೇತಾ ತಿವಾರಿ ವಿರುದ್ಧ ಆಕ್ರೋಶ

ಬೆಂಗಳೂರಿನ ಗೆಳೆಯನೊಂದಿಗೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಬೆಡಗಿ

ಬೆಂಗಳೂರಿನ ಗೆಳೆಯನೊಂದಿಗೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಬೆಡಗಿ

1-gg

ಮುತ್ತಿನ ಪ್ರಕರಣ: ಗೇರ್ ಕೃತ್ಯಕ್ಕೆ ಶಿಲ್ಪಾ ಶೆಟ್ಟಿ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.