‘ಸಲಾರ್’ ರಿಮೇಕ್ ಅಥವಾ ಸ್ವಮೇಕ್: ಸ್ಪಷ್ಟನೆ ನೀಡಿದ ಪ್ರಶಾಂತ್ ನೀಲ್
Team Udayavani, Feb 6, 2021, 10:30 AM IST
ನಿರ್ದೇಶಕ ಪ್ರಶಾಂತ್ ನೀಲ್ ನಟ ಪ್ರಭಾಸ್ಗಾಗಿ ನಿರ್ದೇಶಿಸುತ್ತಿರುವ “ಸಲಾರ್’ ಚಿತ್ರ ಕನ್ನಡದಲ್ಲಿ ಅವರೇ ನಿರ್ದೇಶಿಸಿರುವ “ಉಗ್ರಂ’ ಚಿತ್ರದ ರೀಮೇಕ್ ಎಂಬ ಸುದ್ದಿ ಆರಂಭದಿಂದಲೂ ಓಡಾಡುತ್ತಿತ್ತು. ಆದರೆ, ಪ್ರಶಾಂತ್ ನೀಲ್ ಮಾತ್ರ ಇಷ್ಟು ದಿನ ಆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.
ಆದರೆ, ಈಗ ಪ್ರಶಾಂತ್ ನೀಲ್ ಈ ಬಗ್ಗೆಸ್ಪಷ್ಟನೆ ನೀಡಿದ್ದು, ಇದು ಯಾವುದೇ ಸಿನಿಮಾದ ರೀಮೇಕ್ ಅಲ್ಲ. ಇದು ಪ್ರಭಾಸ್ ಅವರನ್ನೇ ಗಮನದಲ್ಲಿಟ್ಟುಕೊಂಡು ಮಾಡಿರುವ ಕಥೆ. ಯಾವುದೇ ಹಾಲಿವುಡ್, ಬಾಲಿವುಡ್ ಸಿನಿಮಾಗಳ ಪ್ರೇರಣೆಯಿಂದಲೂ ಮಾಡಿರುವ ಸಿನಿಮಾವಲ್ಲ ಇದು ಎಂದು ನೇರವಾಗಿ ಹೇಳಿದ್ದಾರೆ.
ಈಗಾಗಲೇ “ಸಲಾರ್’ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ “ಕೆಜಿಎಫ್-2′ ಚಿತ್ರ ಜುಲೈ 16ರಂದು ತೆರೆಕಾಣುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ