ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ ನಡೆಸಿದ ಕಾಶ್ಮೀರಿಗರು: ಈ ಬಗ್ಗೆ ನಟ ಹೇಳಿದ್ದೇನು?
Team Udayavani, Sep 20, 2022, 7:31 PM IST
ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರು ‘ಗ್ರೌಂಡ್ ಜೀರೋ’ ಚಿತ್ರದ ಶೂಟಿಂಗ್ಗಾಗಿ ಕಾಶ್ಮೀರಕ್ಕೆ ತೆರಳಿದ್ದರು. ಈ ವೇಳೆ ಕೆಲವರು ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಇಮ್ರಾನ್ ಹಶ್ಮಿ ಮೇಲೆ ಕಲ್ಲು ಎಸೆದವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಇಮ್ರಾನ್ ಹಶ್ಮಿ ಸ್ಪಷ್ಟನೆ ನೀಡಿದ್ದಾರೆ.
ಕಾಶ್ಮೀರದ ಜನರು ತುಂಬಾ ಆತ್ಮೀಯರಾಗಿದ್ದಾರೆ. ಅವರು ಒಳ್ಳೆಯ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಶ್ರೀನಗರ ಮತ್ತು ಪಹಲ್ಗಾಮ್‌ನಲ್ಲಿ ಶೂಟಿಂಗ್ ಸಂತಸದಿಂದ ನಡೆದಿದೆ. ಕಲ್ಲು ತೂರಾಟದಲ್ಲಿ ನನಗೆ ಗಾಯವಾಗಿದೆ ಎಂಬುದು ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
‘ಬಾರ್ಡ್ ಆಫ್ ಬ್ಲಡ್’ ವೆಬ್ ಸರಣಿ 2019ರಲ್ಲಿ ಒಟಿಟಿ ಮೂಲಕ ರಿಲೀಸ್ ಆಯಿತು. ಪ್ರೊಫೆಸರ್ ಕಬೀರ್ ಆನಂದ್ ಆಗಿ ಎಲ್ಲರ ಗಮನ ಸೆಳೆದರು ಇಮ್ರಾನ್. ಇದಾದ ಬಳಿಕ ಹಲವು ಸಿನಿಮಾ ಆಫರ್ಗಳು ಅವರನ್ನು ಹುಡುಕಿ ಬಂದವು. ‘ಟೈಗರ್ 3’ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್ ಖಾನ್ ಹೀರೋ. ಸಲ್ಲುಗೆ ಎದುರಾಳಿಯಾಗಿ ಈ ಪಾತ್ರ ಮೂಡಿ ಬರಲಿದೆ ಎನ್ನಲಾಗುತ್ತಿದೆ. 2023ರಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೂಜಾ ಹೆಗ್ದೆ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್: ಮತ್ತೆ ‘ಪ್ರೀತಿ ವದಂತಿ’ ಶುರು
ಟಾಲಿವುಡ್ ರಂಗದ ʼಕಲಾ ತಪಸ್ವಿʼ, ದಿಗ್ಗಜ ನಿರ್ದೇಶಕ ಕೆ.ವಿಶ್ವನಾಥ್ ನಿಧನ
ಬಾಲಿವುಡ್ ಸ್ಟಾರ್ಸ್ ಅಕ್ಷಯ್ ಕುಮಾರ್,ಟೈಗರ್ ಶ್ರಾಫ್ ಡಾನ್ಸ್ ವೈರಲ್
ಹಸೆಮಣೆ ಏರಲು ಸಜ್ಜಾದ ʼಶೇರ್ ಷಾʼ ಜೋಡಿ ಸಿದ್ಧಾರ್ಥ್ – ಕಿಯಾರಾ: ಫೆ.6 ಕ್ಕೆ ಅದ್ಧೂರಿ ವಿವಾಹ
‘ಪ್ರಮುಖ ಪಾತ್ರಕ್ಕಾಗಿ…. ‘: ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ನಯನತಾರಾ