“ ವಿಮಾನದಲ್ಲಿ ಪೀಡ್ಸ್‌ ಬಂದು ಬಿದ್ದಿದ್ದೆ..” ಮೂರ್ಛೆ ರೋಗದ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ

Team Udayavani, Nov 29, 2022, 5:15 PM IST

“ ವಿಮಾನದಲ್ಲಿ ಪೀಡ್ಸ್‌ ಬಂದು ಬಿದ್ದಿದೆ..” ಮೂರ್ಛೆ ರೋಗದ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ

ಮುಂಬಯಿ: ಆಮಿರ್‌ ಖಾನ್‌ ಅವರ ʼದಂಗಲ್‌ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಫಾತಿಮಾ ಸನಾ ಶೇಖ್ ಬಾಲಿವುಡ್‌ ನಲ್ಲಿ ಬ್ಯುಸಿ ನಟಿಯರ ಸಾಲಿನಲ್ಲಿ ಒಬ್ಬರು. ಇತ್ತೀಚೆಗೆ ನೆಟ್‌ ಫ್ಲಿಕ್ಸ್‌ ನಲ್ಲಿ ತೆರೆ ಕಂಡಿದ್ದ “ಥಾರ್”‌ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.

ಎಷ್ಟೋ ಬಾರಿ ಸೆಲೆಬ್ರಿಟಿಗಳು ಆರೋಗ್ಯದ ಸಮಸ್ಯೆಗೆ ಒಳಗಾಗುತ್ತಾರೆ. ಖಿನ್ನತೆಯಂತಹ ಗಂಭೀರ ಕಾಯಿಲೆಗೆ ಸ್ಟಾರ್‌ ಗಳು ಒಳಗಾಗುವುದನ್ನು ನಾವು ನೋಡಿದ್ದೇವೆ. ನಟಿ ಫಾತಿಮಾ ಸನಾ ಶೇಖ್ ತಾನು ಅಪಸ್ಮಾರ ( ಮೂರ್ಛೆ ರೋಗ) ದಿಂದ ಬಳಲುತ್ತಿದ್ದೇನೆ ಎನ್ನುವುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುವಾಗ ಮೂರ್ಛೆ ರೋಗಕ್ಕೆ ಒಳಗಾದ ಸಂದರ್ಭವನ್ನು ವಿವರಿಸುತ್ತಾ ಮಾತನ್ನು ಆರಂಭಿಸಿದ ಅವರು, ಮೂರ್ಛೆ ಹೋದ ಬಳಿಕ ಕೂಡಲೇ ನನಗೆ ವಿಮಾನದಲ್ಲೇ ಚಿಕಿತ್ಸೆ ನೀಡಲಾಯಿತು. ಎರಡು ದಿನ ಆಸ್ಪತ್ರೆಯಲ್ಲಿದ್ದೆ ಆಗ ನನ್ನ ಪಕ್ಕದಲ್ಲಿ ಯಾವ ಪರಿಚಯಸ್ಥ ಮುಖವೂ ಇರಲಿಲ್ಲ. ನನ್ನ ಅದೃಷ್ಟಕ್ಕೆ ನಾನು ಬದುಕುಳಿದೆ ಎಂದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು.

ಈ ಘಟನೆ ಆದ ಬಳಿಕ ನಾನು ಎಲ್ಲಿಗೂ ಒಂಟಿಯಾಗಿ ಪಯಣಿಸುವುದಿಲ್ಲ ಯಾರಾದರೂ ನನ್ನ ಜೊತೆ ಇರಬೇಕು. ನಾನು ಇದನ್ನು ಮುಚ್ಚಿಟ್ಟಿಲ್ಲ ಆದರೆ ಇದನ್ನು ಹೇಳಲು ನನಗೆ ಸಮಯ ಸಿಕ್ಕಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಸಮಯವನ್ನು ತೆಗೆದುಕೊಂಡೆ. ಮೂರ್ಛೆ ರೋಗದ ಬಗ್ಗೆ ಜನರಲ್ಲಿ ಕೆಲವೊಂದು ಅಪನಂಬಿಕೆಗಳಿವೆ. ನಾವು ಅಂದುಕೊಳ್ಳುತ್ತೇವೆ. ನಮಗೆ ಇದ್ದಿದ್ದರೆ ಜನ ಏನು ಅಂದುಕೊಳ್ಳುತ್ತಾರೋ ಎಂದು. ನಾನು ದುರ್ಬಲ ಎಂದು ಜನರು ಭಾವಿಸುವುದು ನನಗೆ ಇಷ್ಟವಿಲ್ಲ.  ನಾನು ಇದನ್ನು ಹೇಳಿದರೆ ನನಗೆ ಕೆಲಸ ಸಿಗುವುದಿಲ್ಲ ಎಂದು ನಾನು ಹೆದರುತ್ತಿದ್ದೆ. ನನಗೆ ಈ ಸ್ಥಿತಿಯಿದೆ ಎನ್ನುವುದನ್ನು ಒಪ್ಪಿಕೊಳ್ಳಲು ನನಗೆ ಇಷ್ಟವಿರಲಿಲ್ಲ ಎಂದು ನಟಿ ಹೇಳಿದ್ದಾರೆ.

ನಾನು ಈ ಸ್ಥಿತಿಯಲ್ಲಿದ್ದೇನೆ ಎಂದು ಒಂದು ವ್ಯಕ್ತಿಯಾಗಿ ನಿರ್ಮಾಪಕರಿಗೆ ಹೇಳುವುದು ನನ್ನ ಜವಾಬ್ದಾರಿ. ಅಪಸ್ಮಾರ ಹೊಂದಿರುವ ವ್ಯಕ್ತಿ ಕೆಲಸ ಮಾಡುವುದನ್ನು ಅಥವಾ ಸಾಮಾನ್ಯ ಜೀವನವನ್ನು ನಡೆಸುವುದನ್ನು ಯಾರೂ ಕೂಡ ತಡೆಯಬಾರದು. ಗ್ರಾಮೀಣ ಪ್ರದೇಶದಲ್ಲಾದರೆ ಇದನ್ನು ಡ್ರಗ್ಸ್‌ ತಕ್ಕೊಂಡಿದ್ದಾರೆ. ಮೈಯಲ್ಲಿ ಭೂತ ಬಂದಿದೆ ಎಂದು ಹೇಳುತ್ತಾರೆ. ಈ ಸ್ಥಿತಿಯಲ್ಲಿದ್ದ ಕೆಲವರು ಮದುವೆಯಾಗಲ್ಲ. ಇದರ ಬಗ್ಗೆ ಅವರಿಗೆ ಸರಿಯಾಗಿ ತಿಳಿದಿರುವುದಿಲ್ಲ. ಅವರು ಕೆಲಸ ಮಾಡಲು ಆಗುವುದಿಲ್ಲ. ಏಕೆಂದರೆ ಏನಾದರೂ ಆದರೆ ನೀವು ಹೊಣೆಗಾರರಾಗುತ್ತೀರಿ. ಇದೇ ಕಾರಣಕ್ಕೆ ನಾನು ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ನಟಿ ಮಾತು ಮುಗಿಸಿದ್ದರು.

ನವೆಂಬರ್‌ ತಿಂಗಳನ್ನು ಅಪಸ್ಮಾರ ಜಾಗೃತಿಯ ತಿಂಗಳೆಂದು ಕರೆಯಲಾಗುತ್ತದೆ. ನಟಿ ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದರು. ಈಗ ಮುಕ್ತವಾಗಿ ಮಾತನಾಡಿದ್ದಾರೆ.

ಟಾಪ್ ನ್ಯೂಸ್

“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆ

“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆ

ತೆರಿಗೆ ಪಾವತಿಸಿದ್ರೆ 10 ಲಕ್ಷ ರೂ. ವಿಮೆ!

ತೆರಿಗೆ ಪಾವತಿಸಿದ್ರೆ 10 ಲಕ್ಷ ರೂ. ವಿಮೆ!

ಈಗ ಲ್ಯಾಟಿನ್‌ ಅಮೆರಿಕದ ಮೇಲೆ ಚೀನ ಗುಪ್ತಚರ ಬಲೂನ್‌ ಹಾರಾಟ

ಈಗ ಲ್ಯಾಟಿನ್‌ ಅಮೆರಿಕದ ಮೇಲೆ ಚೀನ ಗುಪ್ತಚರ ಬಲೂನ್‌ ಹಾರಾಟ

ಮೋದಿ ಭ್ರಷ್ಟಾಚಾರದ ಆರೋಪ ಸಹಿಸುವುದಿಲ್ಲ

ಮೋದಿ ಭ್ರಷ್ಟಾಚಾರದ ಆರೋಪ ಸಹಿಸುವುದಿಲ್ಲ

ಹಗಲು ವಿಮಾನವಿಲ್ಲದೆ ಅನಿವಾರ್ಯ ತೊಂದರೆ! ನಾಲ್ಕು ತಿಂಗಳು ರನ್‌ವೇ ಕಾಮಗಾರಿ

ಹಗಲು ವಿಮಾನವಿಲ್ಲದೆ ಅನಿವಾರ್ಯ ತೊಂದರೆ! ನಾಲ್ಕು ತಿಂಗಳು ರನ್‌ವೇ ಕಾಮಗಾರಿ

ಯುಗಾದಿ ಬಳಿಕ ಪ್ರಕೃತಿ ವಿಕೋಪ: ಕೋಡಿಮಠ ಶ್ರೀ

ಯುಗಾದಿ ಬಳಿಕ ಪ್ರಕೃತಿ ವಿಕೋಪ: ಕೋಡಿಮಠ ಶ್ರೀ

ವಿಕಿಪೀಡಿಯಾ ಮೇಲೆ ನಿರ್ಬಂಧ ವಿಧಿಸಿದ ಪಾಕಿಸ್ಥಾನ !

ವಿಕಿಪೀಡಿಯಾ ಮೇಲೆ ನಿರ್ಬಂಧ ವಿಧಿಸಿದ ಪಾಕಿಸ್ಥಾನ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewq

ಪಠಾಣ್ ನಿಜವಾದ ಕಲೆಕ್ಷನ್ ಎಷ್ಟು?; ನೆಟಿಜನ್ ಗಳಿಗೆ ತಿರುಗೇಟು ಕೊಟ್ಟ ಶಾರುಖ್

ಪ್ರಭುದೇವ ಅಭಿನಯದ “wolf” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವರಾಜಕುಮಾರ್

ಪ್ರಭುದೇವ ಅಭಿನಯದ “wolf” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವರಾಜಕುಮಾರ್

Salman Khan Attends Pooja Hegde’s Brother’s Wedding

ಪೂಜಾ ಹೆಗ್ದೆ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್: ಮತ್ತೆ ‘ಪ್ರೀತಿ ವದಂತಿ’ ಶುರು

thumb-1

ಟಾಲಿವುಡ್‌ ರಂಗದ ʼಕಲಾ ತಪಸ್ವಿʼ, ದಿಗ್ಗಜ ನಿರ್ದೇಶಕ ಕೆ.ವಿಶ್ವನಾಥ್‌ ನಿಧನ

ಬಾಲಿವುಡ್‌ ಸ್ಟಾರ್ಸ್ ‌ಅಕ್ಷಯ್‌ ಕುಮಾರ್‌,ಟೈಗರ್‌ ಶ್ರಾಫ್ ಡಾನ್ಸ್‌ ವೈರಲ್‌

ಬಾಲಿವುಡ್‌ ಸ್ಟಾರ್ಸ್ ‌ಅಕ್ಷಯ್‌ ಕುಮಾರ್‌,ಟೈಗರ್‌ ಶ್ರಾಫ್ ಡಾನ್ಸ್‌ ವೈರಲ್‌

MUST WATCH

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

ಹೊಸ ಸೇರ್ಪಡೆ

“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆ

“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆ

ತೆರಿಗೆ ಪಾವತಿಸಿದ್ರೆ 10 ಲಕ್ಷ ರೂ. ವಿಮೆ!

ತೆರಿಗೆ ಪಾವತಿಸಿದ್ರೆ 10 ಲಕ್ಷ ರೂ. ವಿಮೆ!

ಈಗ ಲ್ಯಾಟಿನ್‌ ಅಮೆರಿಕದ ಮೇಲೆ ಚೀನ ಗುಪ್ತಚರ ಬಲೂನ್‌ ಹಾರಾಟ

ಈಗ ಲ್ಯಾಟಿನ್‌ ಅಮೆರಿಕದ ಮೇಲೆ ಚೀನ ಗುಪ್ತಚರ ಬಲೂನ್‌ ಹಾರಾಟ

ಮೋದಿ ಭ್ರಷ್ಟಾಚಾರದ ಆರೋಪ ಸಹಿಸುವುದಿಲ್ಲ

ಮೋದಿ ಭ್ರಷ್ಟಾಚಾರದ ಆರೋಪ ಸಹಿಸುವುದಿಲ್ಲ

ಹಗಲು ವಿಮಾನವಿಲ್ಲದೆ ಅನಿವಾರ್ಯ ತೊಂದರೆ! ನಾಲ್ಕು ತಿಂಗಳು ರನ್‌ವೇ ಕಾಮಗಾರಿ

ಹಗಲು ವಿಮಾನವಿಲ್ಲದೆ ಅನಿವಾರ್ಯ ತೊಂದರೆ! ನಾಲ್ಕು ತಿಂಗಳು ರನ್‌ವೇ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.