Udayavni Special

Trending: ಹೃತಿಕ್ ನಂತೆಯೇ ಆರು ಬೆರಳು; ತನ್ನ ಮಗನಿಗೆ ನೆಚ್ಚಿನ ನಟನ ಹೆಸರನಿಟ್ಟ ಅಭಿಮಾನಿ !

Team Udayavani, Nov 24, 2020, 8:30 PM IST

hrutghik

ನವದೆಹಲಿ:  ತಮ್ಮ ನೆಚ್ಚಿನ ನಟನ ಬಗೆಗಿನ ಅಭಿಮಾನವನ್ನು ವ್ಯಕ್ತಪಡಿಸಲು ಅಭಿಮಾನಿಗಳು ಸದಾ ಒಂದಿಲ್ಲೊಂದು ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಕೆಲವರು ಮೈಮೇಲೆ ಹಚ್ಚೆ ಹಾಕಿಸಿಕೊಂಡರೆ, ಇನ್ನು ಕೆಲವರು ನಟರ ಫೋಟೋ ಇರುವ ಶರ್ಟ್, ಟಿ-ಶರ್ಟ್‌ ತೊಟ್ಟು  ಅಭಿಮಾನ ಮೆರೆಯುತ್ತಾರೆ. ಇಲ್ಲೊಬ್ಬ ವ್ಯಕ್ತಿ ತನ್ನ ಮಗನಿಗೆ ಜನಪ್ರಿಯ ನಟನೊಬ್ಬನ ಹೆಸರನ್ನು ಇಡುವ ಮೂಲಕ ತನ್ನ ಅಭಿಮಾನ ತೋರಿಸಿದ್ದಾನೆ.

ಹೌದು ! “ವಿಶ್ವದ ಅತ್ಯಂತ ಸ್ಪುರದ್ರೂಪಿ ವ್ಯಕ್ತಿ” ಎಂದೇ  ಖ್ಯಾತಿಯ ನಟ ಹೃತಿಕ್‌ ರೋಶನ್‌ ಹೆಸರನ್ನು ಅಭಿಮಾನಿಯೊಬ್ಬ ತನ್ನ ಮಗನಿಗೂ ಇಟ್ಟಿದ್ದಾನೆ.

ಹೃತಿಕ್ ರೋಶನ್ ಗೆ ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳ ದಂಡೇ ಇದೆ. ಇಂತಹ ಅಭಿಮಾನಿಗಳಲ್ಲಿ ಇಂಪಾಲ್‌ನ ರಿಷಿಕೇಶ್‌ ಕೂಡ ಒಬ್ಬರು. ರಿಷಿಕೇಶ್‌ ದಂಪತಿಗೆ ನವೆಂಬರ್‌ 23ರಂದು ಗಂಡು ಮಗು ಜನಿಸಿತ್ತು.

ಈ ಮಗುವಿನ ಒಂದು ಕೈಯಲ್ಲಿ ಆರು ಬೆರಳುಗಳಿದ್ದು, ವಿಶೇಷವೆಂದರೇ ನಟ ಹೃತಿಕ್‌ ರೋಶನ್ ಗೂ ಒಂದು ಕೈಯಲ್ಲಿ ಎರಡು ಹೆಬ್ಬೆರಳು ಇವೆ.

ಇದನ್ನೂ ಓದಿ: ಹುತಾತ್ಮ ಮೇಜರ್‌ ಪತ್ನಿ ಈಗ ಲೆಫ್ಟಿನೆಂಟ್‌! ಪತಿ ಕೌಸ್ತುಭ್‌ ಕನಸು ಈಡೇರಿಸಿದ ಕನ್ನಿಕಾ

ತನ್ನ ನೆಚ್ಚಿನ ನಟನಂತೆ, ಮಗನಿಗೂ ಒಂದು ಕೈಯಲ್ಲಿ ಎರಡು ಹೆಬ್ಬೆರ‌ಳಿರುವುದು ರಿಷಿಕೇಶ್ ಅವರ ಸಂಭ್ರಮಕ್ಕೆ ಕಾರಣವಾಗಿದ್ದು, ಕೂಡಲೇ ಮಗುವಿಗೆ ‘ಹೃತಿಕ್‌’ ಎಂದು ನಾಮಕರಣ ಮಾಡಿದ್ದಾರೆ. ಮಾತ್ರವಲ್ಲದೆ ಒಂದು ಕಡೆ ಮಗುವಿನ ಫೋಟೋ , ಮತ್ತೊಂದು ಕಡೆ ನಟ ಹೃತಿಕ್‌ ರೋಶನ್‌ ಅವರ ಫೋಟೊ ಹಾಕಿ, ಟ್ವೀಟ್ ಮಾಡಿದ್ದು, ಇದು ಕೆಲ ಕಾಲ ಟ್ರೆಂಡಿಂಗ್‌ ಕೂಡ ಆಗಿತ್ತು.

ತಮ್ಮ ಟ್ವಿಟರ್‌ ಖಾತೆಯಲ್ಲಿ  ರಿಷಿಕೇಶ್‌ ಅವರು ಮತ್ತೊಂದು ರಹಸ್ಯವನ್ನೂ ಬಹಿರಂಗಪಡಿಸಿದ್ದು,  ತನ್ನ ಹೆಸರಿನ ಮೊದಲು ಇಂಗ್ಲಿಷ್‌ ಅಕ್ಷರ ‘H’ ಸೇರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ನಾನು ಹೃತಿಕ್‌ ರೋಶನ್‌ ಅವರ ಅಪ್ಪಟ ಅಭಿಮಾನಿ. ಅವರ “ಕಹೋ ನಾ ಪ್ಯಾರ್‌ ಹೈ’ ಚಿತ್ರದಿಂದಲೂ ನಾನು ಅವರನ್ನು ಅನುಕರಿಸುತ್ತಿದ್ದೇನೆ. ಅವರ ಹೆಸರಿನ ಪ್ರಥಮ ಅಕ್ಷರ ‘ಎಚ್‌’ ಅನ್ನು ನನ್ನ ಹೆಸರಿನ ಮೊದಲು ಸೇರಿಸಿಕೊಂಡಿದ್ದೇನೆ. ಮೊದಲು ರಿಷಿಕೇಶ್‌ ಇದ್ದು ಬಳಿಕ ಹೃಷಿಕೇಶ್‌ ಎಂದು ಬದಲಾಯಿಸಿಕೊಂಡಿದ್ದೇನೆ. ಅಲ್ಲದೇ ನನ್ನ ಮಗುವಿಗೂ ‘ಹೃತಿಕ್‌ ಸರ್’‌ ಅಂತೆಯೇ ಒಂದು ಕೈಯಲ್ಲಿ  ಎರಡು ಹೆಬ್ಬೆರಳು ಇದ್ದು ಅವರ ಹೆಸರನ್ನೇ ಇಡಲು ನಿರ್ಧರಿಸಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಮೂಡುಬಿದ್ರೆ ಶಾಂಭವಿ ನದಿಯಲ್ಲಿ ನಾಲ್ವರು ಮುಳುಗಿದ ಪ್ರಕರಣ : ಇಬ್ಬರ ಮೃತದೇಹ ಪತ್ತೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ

ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ

ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಶಿವಮೊಗ್ಗ ಜನತೆ

ಭಾರೀ ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದ ಶಿವಮೊಗ್ಗ ಜನತೆ

ನಿಗದಿಯಂತೆ ಕಾಮನ್‌ವೆಲ್ತ್‌ ಗೇಮ್ಸ್‌: ಸಿಡಬ್ಲ್ಯುಜಿ ಫೆಡರೇಶನ್‌ ವಿಶ್ವಾಸ

ನಿಗದಿಯಂತೆ ಕಾಮನ್‌ವೆಲ್ತ್‌ ಗೇಮ್ಸ್‌: ಸಿಡಬ್ಲ್ಯುಜಿ ಫೆಡರೇಶನ್‌ ವಿಶ್ವಾಸ

ಸಿಸಿಬಿ ಪೊಲೀಸರ ಕಾರ್ಯಾಚರಣೆ 38 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ : 38 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳ ಬಂಧನ

ತನ್ನನ್ನು ಧೋನಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಂತ್

ತನ್ನನ್ನು ಧೋನಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಂತ್

ಪರೀಕ್ಷೆ ಪಾಸಾಯ್ತು ಹಾಕ್‌-ಐ ಯುದ್ಧ ವಿಮಾನ : ಒಡಿಶಾದ ಕರಾವಳಿಯಲ್ಲಿ ಯಶಸ್ವಿ ಪರೀಕ್ಷೆ

ಪರೀಕ್ಷೆ ಪಾಸಾಯ್ತು ಹಾಕ್‌-ಐ ಯುದ್ಧ ವಿಮಾನ : ಒಡಿಶಾದ ಕರಾವಳಿಯಲ್ಲಿ ಯಶಸ್ವಿ ಪರೀಕ್ಷೆ

ರಾಜ್ಯ ವನ್ಯಜೀವಿ ಮಂಡಳಿಗೆ ಸದಸ್ಯರ ನೇಮಕ: ಮೂಲ ಕಡತ ಹಾಜರುಪಡಿಸಲು ಹೈಕೋರ್ಟ್ ಸೂಚನೆ

ರಾಜ್ಯ ವನ್ಯಜೀವಿ ಮಂಡಳಿಗೆ ಸದಸ್ಯರ ನೇಮಕ: ಮೂಲ ಕಡತ ಹಾಜರುಪಡಿಸಲು ಹೈಕೋರ್ಟ್ ಸೂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pathan: Truth REVEALED behind reported fight between Siddharth Anand & assistant on sets of SRK’s film

 ‘ಪಠಾಣ್’ ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರ ಮೇಲೆ ಹಲ್ಲೆ! ನಡೆದಿದ್ದೇನು?

tandav

ಜನರ ಆಕ್ರೋಶಕ್ಕೆ ಮಣಿದ ‘ತಾಂಡವ್’ ತಂಡ: ವಿವಾದಿತ ದೃಶ್ಯಕ್ಕೆ ಕತ್ತರಿ ಪ್ರಯೋಗ

ತಾಂಡವ್‌ ವೆಬ್‌ಸಿರೀಸ್‌ ತಂಡ ಕ್ಷಮೆಯಾಚನೆ

ತಾಂಡವ್‌ ವೆಬ್‌ಸಿರೀಸ್‌ ತಂಡ ಕ್ಷಮೆಯಾಚನೆ

ಶಿವಮೊಗ್ಗದಲ್ಲಿ ವೀಕೆಂಡ್ ಕಳೆದ ಜಾಕ್ವೇಲಿನ್‌ ಫ‌ರ್ನಾಂಡೀಸ್‌

ಶಿವಮೊಗ್ಗದಲ್ಲಿ ವೀಕೆಂಡ್ ಕಳೆದ ಜಾಕ್ವೇಲಿನ್‌ ಫ‌ರ್ನಾಂಡೀಸ್‌

ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಯಾಗಬಹುದು: ಸದಸ್ಯರಿಗೆ ರಜನಿ ಅಭಿಮಾನಿಗಳ ಸಂಘ

ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಯಾಗಬಹುದು: ಸದಸ್ಯರಿಗೆ ರಜನಿ ಅಭಿಮಾನಿಗಳ ಸಂಘ!

MUST WATCH

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

udayavani youtube

PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು

udayavani youtube

Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

ಹೊಸ ಸೇರ್ಪಡೆ

ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ

ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ

ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಶಿವಮೊಗ್ಗ ಜನತೆ

ಭಾರೀ ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದ ಶಿವಮೊಗ್ಗ ಜನತೆ

ನಿಗದಿಯಂತೆ ಕಾಮನ್‌ವೆಲ್ತ್‌ ಗೇಮ್ಸ್‌: ಸಿಡಬ್ಲ್ಯುಜಿ ಫೆಡರೇಶನ್‌ ವಿಶ್ವಾಸ

ನಿಗದಿಯಂತೆ ಕಾಮನ್‌ವೆಲ್ತ್‌ ಗೇಮ್ಸ್‌: ಸಿಡಬ್ಲ್ಯುಜಿ ಫೆಡರೇಶನ್‌ ವಿಶ್ವಾಸ

ಸಿಸಿಬಿ ಪೊಲೀಸರ ಕಾರ್ಯಾಚರಣೆ 38 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ : 38 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳ ಬಂಧನ

ತನ್ನನ್ನು ಧೋನಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಂತ್

ತನ್ನನ್ನು ಧೋನಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.