ಹೇಗಿದೆ ಗೊತ್ತಾ ಹೃತಿಕ್ ರೋಷನ್ ‘ ಸೂಪರ್ 30’ ಸಿನಿಮಾ ಪೋಸ್ಟರ್

ಟ್ರೈಲರ್ ಬಿಡುಗಡೆ ದಿನಾಂಕ ಖಚಿತ ಪಡಿಸಿದ ಸೂಪರ್ ಹೀರೋ

Team Udayavani, Jun 2, 2019, 4:19 PM IST

ಹೊಸದಿಲ್ಲಿ: ಬಾಲಿವುಡ್ ನ ಸ್ಟೈಲಿಶ್ ಹೀರೋ ಹೃತಿಕ್ ರೋಷನ್ ಅವರ ಹೊಸ ಚಿತ್ರ ‘ ಸೂಪರ್ 30’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಇದರೊಂದಿಗೆ ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಲಾಗಿದೆ.

ತಮ್ಮ ಹೊಸ ಚಿತ್ರ ‘ಸೂಪರ್ 30’ ಪೋಸ್ಟರ್ ಅನ್ನು ತಮ್ಮ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದ ಹೃತಿಕ್ ರೋಷನ್, ಚಿತ್ರದ ಟ್ರೈಲರ್ ಜೂನ್ ನಾಲ್ಕರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಚಿತ್ರದಲ್ಲಿ ಹೃತಿಕ್ ಗಣಿತ ಅಧ್ಯಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಮೃನಾಲ್ ಠಾಕೂರ್ ಚಿತ್ರದಲ್ಲಿ ಹೃತಿಕ್ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಸೂಪರ್ 30’ ಚಿತ್ರವನ್ನು ಫ್ಯಾಂಟಂ ಫಿಲಂ, ಎನ್ ಜಿಇ ಮೂವೀಸ್, ರಿಲಯನ್ಸ್ ಎಂಟರ್ಟೈಮೆಂಟ್ ಗಳು ನಿರ್ಮಾಣದ ಹೊಣೆ ಹೊತ್ತಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ