ಗೋವಾ ಚಿತ್ರೋತ್ಸವ: ಅದು ನಿಮ್ಮ ಪ್ರೀತಿ…ಜನರ ಋಣ ಯಾವತ್ತೂ ತೀರಿಸಲ್ಲ: ಅಮಿತಾಬ್ ಬಚ್ಚನ್

Team Udayavani, Nov 20, 2019, 6:36 PM IST

ಪಣಜಿ:ನನ್ನೆಲ್ಲಾ ಸಹೋದ್ಯೋಗಿಗಳು, ತಂತ್ರಜ್ಞರು, ನಿರ್ದೇಶಕರು, ಅಭಿಮಾನಿಗಳು ನನ್ನನ್ನು ಬೆಳೆಸಿದ್ದೀರಿ. ನಿಮ್ಮ (ಜನರ) ಋಣಭಾರ ನನ್ನ ಮೇಲಿದೆ. ಅದಕ್ಕಾಗಿ ನಾನು ನಿಮಗೆ ಅಭಾರಿಯಾಗಿದ್ದೇನೆ. ಆದರೆ ನಾನು ನಿಮ್ಮ ಋಣವನ್ನು ಯಾವತ್ತೂ ತೀರಿಸಲ್ಲ, ಯಾಕೆಂದರೆ ಅದು ನಿಮ್ಮ ಪ್ರೀತಿ, ಅದನ್ನು ನಾನು ಬಿಟ್ಟುಕೊಡಲಾರೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದರು.

ಅವರು ಬುಧವಾರ ಗೋವಾದಲ್ಲಿ ಆರಂಭಗೊಂಡ 50ನೇ ವರ್ಷದ ಅಂತಾರಾಷ್ಟ್ರೀಯ ಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್ ಅವರ ಜೀವಮಾನದ ಸಾಧನೆ ಪರಿಗಣಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ಸೂಪರ್ ಸ್ಟಾರ್ ರಜನಿಕಾಂತ್ ಜೀ ನನಗೆ ಪ್ರತಿದಿನವೂ ಸ್ಫೂರ್ತಿಯಾಗಿದ್ದಾರೆ. ಅವರೊಬ್ಬ ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ. ರಜನಿ ಒಬ್ಬ ಶ್ರೇಷ್ಠ ನಟ ಎಂದು ಶ್ಲಾಘಿಸಿದರು.

ನನ್ನನ್ನು ರೂಪಿಸಿದವರಲ್ಲಿ ನಿರ್ದೆಶಕರು, ತಂತ್ರಜ್ಞರು ಎಲ್ಲರೂ ಇದ್ದಾರೆ..ಅವರಿಗಿಂತ ನೀವು (ಅಭಿಮಾನಿಗಳು, ಪ್ರೇಕ್ಷಕರು) ನನ್ನನ್ನು ಬೆಳೆಸಿದ್ದೀರಿ. ನಾನು ಗೆದ್ದಾಗ, ಸೋತಾಗ‌ ಕ್ಯೆ ಹಿಡಿದು ನಡೆಸಿದ್ದಿರಿ. ಅ ಋನ ನನ್ನ‌ ಮೇಲಿದೆ. ಆದರೆ‌ ಅದನ್ನು ತೀರಿಸಲಾಗದು, ತೀರಿಸಲೂ ಮನಸ್ಸಿಲ್ಲ. ಅದು ಹಾಗೆ ಇರಲಿ. ಯಾಕೆಂದರೆ ಅದು ನಿಮ್ಮ‌ ಪ್ರೀತಿ ಎಂದರು ಅಮಿತಾಬ್.

ರಜನೀಕಾಂತ್ ಮತ್ತು ನಾನು ಒಂದೇ ಕುಟುಂಬದ ಸದಸ್ಯರಂತೆ ಇದ್ದು ಪರಸ್ಪರ ಸಲಹೆಗಳನ್ನು ಕೊಟ್ಟುಕೊಳ್ಳುತ್ತಿರುತ್ತೇವೆ, ನಮ್ಮ ನಡುವಿನ ಸಂಬಂಧ ಅನನ್ಯವಾದುದು. ರಜನಿಕಾಂತ್ ಅವರೊಬ್ಬ ಶ್ರೇಷ್ಠ ನಟ ಎಂಬುದನ್ನು ಹೇಳಲು ಅಮಿತಾಭ್ ಮರೆಯಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ