ಗೋವಾ ಚಿತ್ರೋತ್ಸವ :ಐವತ್ತು ವರ್ಷಗಳ ಸಿನಿಮಾ ಕನ್ನಡದ ಉಯ್ಯಾಲೆ ಪ್ರದರ್ಶನಕ್ಕೆ ಅವಕಾಶ

Team Udayavani, Nov 18, 2019, 3:46 PM IST

ಪಣಜಿ, ನ. 18:ಸುವರ್ಣ ಸಂಭ್ರಮದಲ್ಲಿರುವ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ [ಇಫಿ] ನಲ್ಲಿ ಈ ಬಾರಿಯ ಮತ್ತೊಂದು ವಿಶೇಷವೆಂದರೆ ಐವತ್ತು ವರ್ಷಗಳ ಹಿಂದೆ ಅಂದರೆ 1969ರಲ್ಲಿ ಬಿಡುಗಡೆಯಾದ ಭಾರತೀಯ ಭಾಷೆಯ ಪ್ರಮುಖ ಚಿತ್ರಗಳ ಸಣ್ಣದೊಂದು ಅವಲೋಕನ.

ಇದರ ಭಾಗವಾಗಿ ಒಂಬತ್ತು ದಿನಗಳ ಉತ್ಸವದಲ್ಲಿ ಹನ್ನೊಂದು ಪ್ರಶಸ್ತಿ ಪುರಸ್ಕೃತ ಭಾರತೀಯ ಭಾಷೆಗಳ ಚಲನ ಚಿತ್ರಗಳು ಪ್ರದರ್ಶನವಾಗಲಿವೆ. ಇದು ಇನ್ನೊಂದು ಬಗೆಯಲ್ಲಿ ಭಾರತೀಯ ಭಾಷಾ ಚಿತ್ರರಂಗದ ಹೊಸಅಲೆಯನ್ನು ಗುರುತಿಸುವ ಪ್ರಯತ್ನವೂ ಹೌದು.

ಈ ಗೌರವ ಸಿಕ್ಕಿರುವುದು ಎನ್‌. ಲಕ್ಷ್ಮೀನಾರಾಯಣರ ಉಯ್ಯಾಲೆ ಚಿತ್ರಕ್ಕೆ. ಉಳಿದಂತೆ ಒಡಿಯಾ, ಬಂಗಾಳಿ, ತಮಿಳು, ತೆಲುಗು, ಮರಾಠಿ, ಹಿಂದಿ, ಅಸ್ಸಾಮಿ ಹಾಗೂ ಮಲಯಾಳಂ ಭಾಷೆಯ ಚಲನಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ.

ಚಿತ್ರಗಳ ವಿವರ:

ಎನ್‌ ಟಿರಾಮರಾವ್‌ ಅವರ ವರಕ್ತಂ, ಬ್ರಜೇನ್‌ ಬರುವಾ ಅವರ ಡಾ. ಬೇಜ್‌ ಬರುವಾ, ಸತ್ಯಜಿತ್‌ ರೇ ಅವರ ಅರಗೂಪಿ ಗೈನೆ ಬಾಘಾಬೖನೆ, ಕೆ. ಬಾಲಚಂದರ್ ನಿರ್ದೇಶನದ ಕೋಡುಗಲ್‌, ರಾಮ್‌ ಮಹೇಶ್ವರಿಯವರ ನಾನಕ್‌ ನಾಮ್‌ ಜಹಾಜ್‌ ಹೈ, ಹೃಷಿಕೇಶ್‌ ಮುಖರ್ಜಿಯವರ ಸತ್ಯಕಮ್‌, ಸಿದ್ಧಾರ್ಥರ ಸ್ತ್ರೀ, ಬಲ್ಜಿಪೆಂಡರಕರ್‌ ರ ತಂಬ್ದಿ, ಶಕ್ತಿಸಮಂತಾ ರ ಆರಾಧನಾ ಹಾಗೂ ಕೆ.ಎಸ್‌. ಸೇತು ಮಾಧವನ್‌ ಆವರ ಆದಿಮಕಲ್‌ ಸೇರಿವೆ.

ಉಯ್ಯಾಲೆ ಚಿತ್ರದ ಕುರಿತು:

ಈ ಚಿತ್ರತೆರೆ ಕಂಡದ್ದು 1969 ರಲ್ಲಿ. ಡಾ.ರಾಜ್‌ಕುಮಾರ್‌ ಮತ್ತು ಕಲ್ಪನಾ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದರು. ಕನ್ನಡದ ಖ್ಯಾತ ಕಾದಂಬರಿಕಾರ ಚದುರಂಗ ಅವರ ಕಾದಂಬರಿಯನ್ನು ಆಧರಿಸಿ ರೂಪಿಸಿದ ಸಿನಿಮಾ.

ಚದುರಂಗರು ಬರೀ ಸಿನಿಮಾಕಥೆ ಕೊಟ್ಟಿರಲಿಲ್ಲ, ಜತೆಗೆ ಸಂಭಾಷಣೆಯನ್ನೂಬರೆದಿದ್ದರು. ಇದಕ್ಕೆ ಸಂಗೀತ ಒದಗಿಸಿದವರು ವಿಜಯಭಾಸ್ಕರ್‌. ಗೋಪಾಲ್‌ ಮತ್ತು ಲಕ್ಷ್ಮಣ್‌ ಈ ಚಿತ್ರದ ನಿರ್ಮಾಪಕರು.

ಎನ್‌. ಲಕ್ಷ್ಮೀನಾರಾಯಣ್‌ ಅವರು ತಮ್ಮ ನಾಂದಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಚಿತ್ರಗಳನ್ನು ಶುರು ಮಾಡಿದವರು. ಹಲವಾರು ಸಾಮಾಜಿಕ ಸಂಗತಿಗಳನ್ನು ಅತ್ಯಂತ ಸಮರ್ಪಕವಾಗಿ ಜನಪ್ರಿಯತೆಯ ನೆಲೆಯಲ್ಲೇ ಸಿನಿಮಾ ರೂಪಿಸಿ ಯಶಸ್ವಿಯಾದವರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಉಡುಪಿ: ಮಾರಕ ಕೋವಿಡ್ 19 ವೈರಸ್ ನಿಯಂತ್ರಿಸುವಲ್ಲಿ ಜಿಲ್ಲೆಗೆ ನೆರವಾಗುವ ಉದ್ದೇಶದಿಂದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಅಗತ್ಯ ವೈದ್ಯಕೀಯ...

  • B.A. at Computer Science in a University can be absolutely the absolute most crucial level for the technologically driven environment. You have to pick your app wisely. If you really don't want to become just a conventional"methods engineer", subsequently you definitely want to become a more"info https://uk.thesiswritingservice.com/ scientist"I t analyst".I...

  • There are so many information science websites it may be really hard to settle on those to stick to. I think most experts concur the most effective websites are those that offer insight and practical information that is great. If you really do not have sufficient time to browse thousands of articles dnp research But so what do you learn from these...

  • In the previous, the word "decomposer" refers for the organism that breaks down dead organic matter into smaller components.At this time, this term is applied in reference towards the cells that generally reside within the human body. What employed to be regarded a composer is actually an autograph or even a living method.Physiology could be the study...

  • With the implementation of your most recent DNA (DNA Polymerase) Biology Definition, the AP Biology Exam is going to be tougher than ever just before.That is how you are going to study for your AP Biology exam:The first issue you have to do is always to learn how you can know the information and concepts which you use for the tests. Believe about how...