ಗಂಡನ ಮನೆ ತೊರೆಯಲು ಯೋಜಿಸಿದ್ದಾರಾ ನಟಿ ಶಿಲ್ಪಾ ಶೆಟ್ಟಿ ?
Team Udayavani, Aug 31, 2021, 2:43 PM IST
ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರು ಗಂಡನ ಮನೆ ತೊರೆದು ಮಕ್ಕಳ ಜೊತೆ ಪ್ರತ್ಯೇಕ ವಾಸ ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
ಕಳೆದ ಕೆಲ ದಿನಗಳಿಂದ ಶಿಲ್ಪಾ ಶೆಟ್ಟಿಯವರನ್ನು ಸಂಕಷ್ಟಗಳು ಹುಡುಕಿಕೊಂಡು ಬರುತ್ತಿವೆ. ಈ ನಟಿಯ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಸಿನಿಮಾ ನಿರ್ಮಾಣ ಹಾಗೂ ವಿತರಣೆಯ ಆರೋಪದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಅವರು ಜೈಲಿನಲ್ಲಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದ ನಂತರ ಶಿಲ್ಪಾ ಶೆಟ್ಟಿ ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನದ ಮೇಲೆ ಗಾಢ ಪ್ರಭಾವ ಬೀರಿತು. ಶಿಲ್ಪಾ ಬಹಳ ಸಮಯದವರೆಗೆ ಸೂಪರ್ ಡ್ಯಾನ್ಸರ್ ನಲ್ಲಿ ಕಾಣಿಸಿಕೊಳ್ಳಲಿಲ್ಲ ಮತ್ತು ಈ ವಿವಾದದ ನಡುವೆ ಅನೇಕ ದೊಡ್ಡ ಬ್ರಾಂಡ್ ಗಳು ಸಹ ಅವರ ಕೈ ತಪ್ಪಿ ಹೋಯಿತು ಎಂದು ವರದಿಗಳು ಸೂಚಿಸುತ್ತವೆ.
ಶಿಲ್ಪಾ ಶೆಟ್ಟಿ ಅವರ ಸಮಸ್ಯೆಗಳು ಕಡಿಮೆಯಾಗಿಲ್ಲ ಎಂದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ. ರಾಜ್ ಕುಂದ್ರಾ ಅವರ ರಹಸ್ಯ ಬೆಳಕಿಗೆ ಬಂದಾಗಿನಿಂದ ಶಿಲ್ಪಾ ಶೆಟ್ಟಿ ಆಘಾತಕ್ಕೊಳಗಾಗಿದ್ದಾರೆ. ಅವರು ಪತಿ ಮನೆಯನ್ನು ತೊರೆದು ಬೇರೆ ಕಡೆ ವಾಸಮಾಡಲಿದ್ದಾರೆ ಎನ್ನಲಾಗುತ್ತಿದೆ.
‘ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಅವರ ಹಣವನ್ನು ಮುಟ್ಟಲು ಸಹ ಬಯಸುವುದಿಲ್ಲ’ ಎಂದು ಸ್ನೇಹಿತರೊಬ್ಬರು ಹೇಳಿರುವುದಾಗಿ ಮಾಧ್ಯಮ ವರದಿ ಹೇಳಿದೆ. ವರದಿಯ ಪ್ರಕಾರ, ‘ಶಿಲ್ಪಾ ಶೆಟ್ಟಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸ್ವತಂತ್ರ್ಯರಾಗಿದ್ದಾರೆ’ ಎಂದು ಹೇಳಿದರು. ಹಂಗಾಮಾ 2 ಮತ್ತು ನಿಕಮ್ಮಾ ನಂತರ ಬೇರೆ ಚಿತ್ರಗಳಲ್ಲಿ ನಟಿಸಲು ಸಿದ್ಧ ಎಂದು ಶಿಲ್ಪಾ ಶೆಟ್ಟಿ ಉದ್ಯಮದ ಎಲ್ಲರಿಗೂ ಹೇಳಿದ್ದಾರೆ ಎಂದು ಸ್ನೇಹಿತರೊಬ್ಬರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾಕ್ವೆಲಿನ್ ಫರ್ನಾಂಡಿಸ್ ಗೆ ಅಬುಧಾಬಿಗೆ ತೆರಳಲು ಕೋರ್ಟ್ ಅನುಮತಿ
‘ಸ್ವತಂತ್ರ ವೀರ್ ಸಾವರ್ಕರ್’ ಫಸ್ಟ್ ಲುಕ್ ಹಂಚಿಕೊಂಡ ರಣದೀಪ್ ಹೂಡಾ
ಕಂಗನಾ ರಣಾವತ್ ‘ಧಾಕಡ್’ 8 ದಿನದಲ್ಲಿ ಗಳಿಸಿದ್ದು ಕೇವಲ 4,420 ರೂ..!?
10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ
ಕರಣ್ ಜೋಹರ್ ಪಾರ್ಟಿಯಲ್ಲಿ ತನ್ನ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಹೃತಿಕ್ ರೋಶನ್