ಆಗಿನ ನಿರ್ಮಾಪಕರು ನನ್ನಿಂದ ಬಯಸುತ್ತಿದ್ದದ್ದು ಅದನ್ನು ಮಾತ್ರ: ಕರಾಳ ಅನುಭವ ಬಿಚ್ಚಿಟ್ಟ ನಟಿ
ಶಮಾ ಸಿಕಂದರ್ ತಮ್ಮ ಬೋಲ್ಡ್ ಲುಕ್ಸ್ ಗಳಿಂದಲೇ ಖ್ಯಾತಿ.
Team Udayavani, Sep 17, 2022, 12:36 PM IST
ಮುಂಬಯಿ: ಬಣ್ಣದ ಲೋಕದಲ್ಲಿ ಗಟ್ಟಿಯಾಗಿ ನಿಲ್ಲಲು ಹಲವಾರು ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಬಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಪಿಡುಗಿನ ಬಗ್ಗೆ ನಟಿ ಶಮಾ ಸಿಕಂದರ್ ಮಾತಾನಾಡಿದ್ದಾರೆ.
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಶಮಾ ಸಿಕಂದರ್ ತಮ್ಮ ಬೋಲ್ಡ್ ಲುಕ್ಸ್ ಗಳಿಂದಲೇ ಖ್ಯಾತಿ. ತಮ್ಮ ವೃತ್ತಿ ಬದುಕಿನಲ್ಲಿ ತಾವು ಎದುರಿಸಿದ ಕರಾಳ ದಿನದ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಮಾತಾನಾಡಿದ್ದಾರೆ.
ʼಯೇ ಮೇರಿ ಲೈಫ್ ಹೈʼ ಖ್ಯಾತಿಯ ನಟಿ ಶಮಾ ಸಿಕಂದರ್ “ ಮೊದಲು ಕೆಲ ದೊಡ್ಡ ನಿರ್ಮಾಪಕರು, ನನ್ನ ಬಳಿ ನಾನು ಅವರ ಸ್ನೇಹಿತೆ ಆಗಿರಲು ಹೇಳುತ್ತಿದ್ದರು. ಯಾವ ಚಿತ್ರವನ್ನು ಅವರೊಂದಿಗೆ ಮಾಡದೇ ನಾನು ಹೇಗೆ ಸ್ನೇಹಿತೆ ಆಗಲು ಸಾಧ್ಯ? ಅವರು ನನ್ನ ಬಳಿ ಲೈಂಗಿಕ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದರು. ಇದು ಸರಿಯಲ್ಲ. ನೀವು ಮಹಿಳೆಯನ್ನು ಆತ್ಮವಿಶ್ವಾಸದಿಂದ ಗೆಲ್ಲಲು ಆಗುವುದಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಇಂಥ ಬಯಕೆ ಅವರ ತೀರ ಕೆಳಸ್ತರದ ವ್ಯಕ್ತಿತ್ವವನ್ನು ತೋರಿಸುತ್ತದೆ. ಇಂದು ಕಾಸ್ಟಿಂಗ್ ಕೌಚ್ ಬಾಲಿವುಡ್ ಗೆ ಮಾತ್ರ ಸೀಮಿತವಾಗಿಲ್ಲ ಎಲ್ಲಾ ಇಂಡಸ್ಟ್ರಿಯಲ್ಲೂ ಇದೆ ಎಂದು ಅವರು ಹೇಳಿದ್ದಾರೆ.
ಬಾಲಿವುಡ್ ಈಗ ತುಂಬಾ ಬದಲಾಗಿದೆ. ಈಗಿನ ಯುವ ನಿರ್ಮಾಪಕರಿಗೆ ಮೊದಲಿನಂತೆ ಯಾವುದೇ ಕಲ್ಪನೆ ಇರುವುದಿಲ್ಲ. ನಟಿಯರನ್ನು ಈಗಿನ ನಿರ್ಮಾಪಕರು ಗೌರವಯುತವಾಗಿ ನೋಡುತ್ತಾರೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀವು ಈಗ ನೋಡಿರುವುದು ʼಕಾಂತಾರ-2” ಮುಂದೆ ಬರುವುದು ʼಕಾಂತಾರ -1” : ರಿಷಬ್ ಶೆಟ್ಟಿ
ಕಾರು ಅಪಘಾತ: ಜನಪ್ರಿಯ ನಟಿ ಊರ್ವಶಿ ಧೋಲಾಕಿಯಾ ಪಾರು
ಪಠಾಣ್ ನಿಜವಾದ ಕಲೆಕ್ಷನ್ ಎಷ್ಟು?; ನೆಟಿಜನ್ ಗಳಿಗೆ ತಿರುಗೇಟು ಕೊಟ್ಟ ಶಾರುಖ್
ಪ್ರಭುದೇವ ಅಭಿನಯದ “wolf” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವರಾಜಕುಮಾರ್
ಪೂಜಾ ಹೆಗ್ದೆ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್: ಮತ್ತೆ ‘ಪ್ರೀತಿ ವದಂತಿ’ ಶುರು