ಶಿವಮೊಗ್ಗದಲ್ಲಿ ವೀಕೆಂಡ್ ಕಳೆದ ಜಾಕ್ವೇಲಿನ್ ಫರ್ನಾಂಡೀಸ್
Team Udayavani, Jan 18, 2021, 4:30 PM IST
ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡೀಸ್ ಶಿವಮೊಗ್ಗದಲ್ಲಿ ವೀಕೆಂಡ್ ಕಳೆದಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಾಕಿಕೊಂಡು, “ಬೆಸ್ಟ್ ವೀಕೆಂಡ್’ ಎಂದು ಬರೆದುಕೊಂಡಿದ್ದಾರೆ.
ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಜಾಕ್ವೇಲಿನ್, ಅಲ್ಲಿ ಗಾಲ್ಪ್ ಆಡುತ್ತಿರುವ ಫೋಟೋವನ್ನು ಹಾಕಿಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿರುವ ಜಾಕ್ವೇಲಿನ್, ಸುದೀಪ್ ನಟನೆಯ “ಫ್ಯಾಂಟಮ್’ ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.