ದಕ್ಷಿಣ ಭಾರತದ ಖ್ಯಾತ ವಿಲನ್, ನಟ ಕಬೀರ್ ಸಿಂಗ್, ಗಾಯಕಿ ಡಾಲಿ ನಿಶ್ಚಿತಾರ್ಥ
Team Udayavani, Jun 25, 2019, 3:45 PM IST
ಚೆನ್ನೈ: ತಮಿಳಿನ ಸೂಪರ್ ಹಿಟ್ ಸಿನಿಮಾ ವೇದಾಳಂ ವಿಲನ್ ಕಬೀರ್ ದುಹಾನ್ ಸಿಂಗ್ ಸೋಮವಾರ ಖ್ಯಾತ ಹಿನ್ನೆಲೆ ಗಾಯಕಿ ಡಾಲಿ ಸಿಂಧು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಕಬೀರ್ ತಮ್ಮ ಎಂಗೇಜ್ ಮೆಂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಜಿತ್ ಅಭಿನಯದ ವೇದಾಳಂ ಸಿನಿಮಾದಲ್ಲಿ ಕಬೀರ್ ದುಹಾನ್ ಸಿಂಗ್ ವಿಲನ್ ಪಾತ್ರದ ಮೂಲಕ ಹೆಚ್ಚು ಪ್ರಸಿದ್ಧರಾಗಿದ್ದರು. ಅಲ್ಲದೇ ವಿಜಯ್ ಸೇತುಪತಿ ಜೊತೆ ರೆಕ್ಕಾ, ರಾಘವ್ ಲಾರೆನ್ಸ್ ಜೊತೆ ಕಾಂಚನಾ 3 ತಮಿಳು ಸಿನಿಮಾದಲ್ಲಿ ನಟಿಸಿದ್ದರು.
ಕಬೀರ್ ದುಹಾನ್ ದಕ್ಷಿಣ ಭಾರತದ ಬಿಡುವಿಲ್ಲದ ವಿಲನ್ ನಟರಲ್ಲಿ ಒಬ್ಬರಾಗಿದ್ದಾರೆ. ತಮಿಳು, ಕನ್ನಡ (ಹೆಬ್ಬುಲಿ) ಹಾಗೂ ತೆಲುಗು ಸಿನಿಮಾರಂಗದಲ್ಲಿ ಕಬೀರ್ ಬಹುಬೇಡಿಕೆಯ ನಟರಾಗಿದ್ದಾರೆ. ಮುಂದಿನ ವರ್ಷ ಡೋಲೈ ಜೊತೆ ಕಬೀರ್ ಸಪ್ತಪದಿ ತುಳಿಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ : ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ!
ಹುಬ್ಬಳ್ಳಿ ಹೋಟೆಲ್ ನಲ್ಲಿ ‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ!
ಅಸ್ವಸ್ಥಗೊಂಡಿದ್ದ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪೋಷಕರ ಆಕ್ರೋಶ
ಒಣ ಮೀನಿಗೆ ಮೊರೆ ಹೋಗುವ ಮೀನು ಪ್ರಿಯರು
ಪ್ರತಿಕೂಲ ಹವಾಮಾನ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ, 3,000 ಯಾತ್ರಾರ್ಥಿಗಳು ಅತಂತ್ರ