ಸಾಹಿತ್ಯ ಶಿರೋಮಣಿ, ಹಿರಿಯ ಬಾಲಿವುಡ್‌ ನಟ ಕಾದರ್‌ ಖಾನ್‌ ವಿಧಿವಶ 


Team Udayavani, Jan 1, 2019, 5:29 AM IST

7.jpg

ಹೊಸದಿಲ್ಲಿ: ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ  ಬಳಲುತ್ತಿದ್ದ  ಹಿರಿಯ ಬಾಲಿವುಡ್‌ ನಟ ಕಾದರ್‌ ಖಾನ್‌ ಅವರು ಮಂಗಳವಾರ ಕೆನಡಾದ ಟೊರಾಂಟೋದಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಕಾದರ್‌ ಖಾದ್‌ ಅವರ ಪುತ್ರ ಸರ್‌ಫ‌ರಾಜ್‌ ಅವರು ತಂದೆಯ ಸಾವಿನ ಸುದ್ದಿಯನ್ನು ಖಚಿತ ಪಡಿಸಿದ್ದು, ಕೆನಡಾದಲ್ಲೇ ಅಂತ್ಯಕ್ರಿಯೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಡಿಸೆಂಬರ್‌ 28 ರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ವಿಶೇಷ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. 

ಕೆಲ ದಿನಗಳಿಂದ ಕಾದರ್‌ ಖಾನ್‌ ಅವರು ನಿಧನ ಹೊಂದಿದ್ದಾರೆ ಎನ್ನುವ ಸುದ್ದಿ  ಕೆಲ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿ , ಸಾಮಾಜಿಕ ತಾಣಗಳಲ್ಲೂ ಹರಿದಾಡಿ ಗೊಂದಲಕ್ಕೆ ಕಾರಣವಾಗಿತ್ತು. 

ತನ್ನ ಸಾಟಿಯಿಲ್ಲದ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ನೆಚ್ಚಿನ ನಟನಾಗಿ ಕಾದರ್‌ ಖಾನ್‌ ಅವರು ಪ್ರಖ್ಯಾತಿ ಪಡೆದಿದ್ದರು. ಹಾಸ್ಯ ನಟನಾಗಿ, ಚಿತ್ರಕಥೆ ಬರಹಗಾರರಾಗಿ ಬಾಲಿವುಡ್‌ನ‌ಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.

1937 ರ ಅಕ್ಟೋಬರ್‌ 22 ರಂದು ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ಜನಿಸಿದ್ದ ಕಾದರ್‌ ಅವರು 1970 ರಲ್ಲಿ  ಯಶ್‌  ಚೋಪ್ರಾ ಅವರ ದಾಗ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿರಿಸಿದ್ದರು. ಇದಕ್ಕೂ ಮುನ್ನ ಅವರು ಮುಂಬಯಿ ಎಂ.ಎಚ್‌.ಸಾಬೂ ಸಿದ್ಧಿಕ್‌ ಕಾಲೇಜ್‌ನಲ್ಲಿ ಸಿವಿಲ್‌ ಇಂಜಿನಿಯರಿಂಗ್‌ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು.

ಅನಾರಿ, ಜುದ್ವಾ, ಜುದಾಯಿ, ಮಿಸ್ಟರ್‌ ನಟವರ್‌ಲಾಲ್‌, ಸುಹಾಗ್‌, ಮುಜ್‌ಸೇ ಶಾದಿ ಕರೋಗಿ, ಲಕ್ಕಿ ನೋ ಟೈಮ್‌ ಫೋರ್‌ ಲವ್‌, ಹಸೀನಾ ಮಾನ್‌ ಜಾಯೇಗಿ, ದುಲ್‌ಹೇ ರಾಜಾ, ಸಾಜನ್‌, ಚಲೇ ಸಸುರಾಲ್‌, ಮೈ ಕಿಲಾಡೀ ತು ಅನಾರೀ , ಕೂಲಿ ನಂಬರ್‌ 1 ಅವರು ನಟಿಸಿದ ಕೆಲ ಪ್ರಮುಖ ಚಿತ್ರಗಳು.

ರಾಜೇಶ್‌ ಖನ್ನಾ ಅವರು ರೋಟಿ ಚಿತ್ರಕ್ಕಾಗಿ ಕಾದರ್‌ ಖಾನ್‌ ಅವರಿಂದ ಸಂಭಾಷಣೆ ಬರೆಸಿ ಇನ್ನೊಂದು ಪ್ರತಿಭೆಯನ್ನು ಹೊರ ಹಾಕಿದ್ದರು.ಆ ಬಳಿಕ ಹಲವು ಚಿತ್ರಗಳಿಗೆ ಕಾದರ್‌ ಖಾನ್‌ ಅವರು ಸಂಭಾಷಣೆ ಬರೆದಿದ್ದರು.

2013 ರಲ್ಲಿ ಅವರಿಗೆ ಸಾಹಿತ್ಯ ಶಿರೋಮಣಿ ಪದವಿ ನೀಡಿ ಗೌರವಿಸಲಾಗಿತ್ತು. ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿತ್ತು. 

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.