Kalki 2898 AD; ಫ್ಯಾನ್ಸ್‌ಗೆ ಕಲ್ಕಿ ಸ್ಪೆಶಲ್ ಶೋ!
Team Udayavani, Aug 3, 2024, 12:11 PM IST
ಇತ್ತೀಚೆಗೆ ತೆರೆಕಂಡಿದ್ದ, “ಕಲ್ಕಿ 2898 ಎಡಿ’ (Kalki 2898 AD;) ಚಿತ್ರ ಭರ್ಜರಿ ಯಶ ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಡಿ ದಾಟಿ ದಾಖಲೆ ನಿರ್ಮಿಸಿದೆ. ಈ ಹಿನ್ನೆಲೆ ಚಿತ್ರದ ಯಶಸ್ಸನ್ನು ವಿಶೇಷವಾಗಿ ಸಂಭ್ರಮಿಸಲು ಚಿತ್ರತಂಡ ಸಜ್ಜಾಗಿದೆ. ಸಂಭ್ರಮದ ಭಾಗವಾಗಿ ಅಭಿಮಾನಿಗಳಿಗೆ ವಿಶೇಷ ಪ್ರದರ್ಶನ ಆಯೋಜಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಕುರಿತು ಸ್ವತಃ ಅಮಿತಾಬ್ ಬಚ್ಚನ್ ಸುಳಿವು ನೀಡಿದ್ದಾರೆ.
“ಕೆಲವೇ ಅಭಿಮಾನಿಗಳಿಗಾಗಿ ಕಲ್ಕಿ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸುವ ಯೋಜನೆ ಇದೆ. ಇದಕ್ಕಾಗಿ ನಾನು ಸಿದ್ಧತೆ ನಡೆಸಿರುವೆ. ಇದು ಅಧಿಕೃತ ಆಮಂತ್ರಣವಲ್ಲ. ಕೇವಲ ಯೋಜನೆಯಷ್ಟೇ, ಇನ್ನೂ ಯಾವುದೂ ಅಂತಿಮವಾಗಿಲ್ಲ. ಎಲ್ಲರಿಗೂ ಪ್ರೀತಿಯ ಶುಭಾಶಯ’ ಎಂದು ಅಮಿತಾಬ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಬಿಗ್ ಬಿ ನೀಡಿದ ಸುಳಿವಿನಿಂದ ಅಭಿಮಾನಿಗಳು ವಿಶೇಷ ಪ್ರದರ್ಶನ ವೀಕ್ಷಿಸಲು ಸಾಕಷ್ಟು ಕಾತುರರಾಗಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟಿಸಿದ್ದು, ಸದ್ಯ ಚಿತ್ರತಂಡ ಸಕ್ಸಸ್ ಸೆಲೆಬ್ರೆಷನ್ ನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Film ಆಸಕ್ತಿ ಕಡಿಮೆ..; ಕರಣ್ ಜೋಹರ್ ಕಾಲೆಳೆದ ಶಾರುಖ್ ಖಾನ್!
Kangana Ranaut: 32 ಕೋಟಿ ರೂ.ಗೆ ಬಂಗಲೆ ಮಾರಿದ ಸಂಸದೆ ಕಂಗನಾ
Bollywood: ʼಸನಮ್ ತೇರಿ ಕಸಮ್ʼ ಸೀಕ್ವೆಲ್ ಅನೌನ್ಸ್; ನಾಯಕನಾಗಿ ಮರಳಿದ ಹರ್ಷವರ್ಧನ್ ರಾಣೆ
Bollywood: ʼಭೂತ್ ಬಂಗ್ಲʼಕ್ಕಾಗಿ 14 ವರ್ಷದ ಬಳಿಕ ಸೂಪರ್ ನಿರ್ದೇಶಕನ ಜತೆ ಅಕ್ಷಯ್ ಸಿನಿಮಾ
Kangana Ranaut ಎಮರ್ಜೆನ್ಸಿಗೆ ಸೆನ್ಸಾರ್ ಸಮ್ಮತಿ, ಪ್ರಮಾಣ ಪತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.