ಭ್ರಷ್ಟರ ವಿರುದ್ಧ 90ವರ್ಷದ ಮುದುಕನ ಹೋರಾಟ! ಮತ್ತೆ ಬರಲಿದೆ ಶಂಕರ್ ನಿರ್ದೇಶನದ ಇಂಡಿಯನ್-2

Team Udayavani, Oct 19, 2019, 3:13 PM IST

ಚೆನ್ನೈ: 1996ರಲ್ಲಿ ಎಸ್.ಶಂಕರ್ ನಿರ್ದೇಶಿಸಿದ್ದ ಇಂಡಿಯನ್ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದ್ದು ಇತಿಹಾಸ. ಈ ಸಿನಿಮಾದಲ್ಲಿ ಕಮಲ್ ಹಾಸನ್ ದ್ವಿಪಾತ್ರದಲ್ಲಿ, ಮನೀಶಾ ಕೊಯಿರಾಲಾ, ಉರ್ಮಿಳಾ ಮಾತೋಂಡ್ಕರ್, ಸುಕನ್ಯಾ, ಗೌಂಡಮಣಿ ಸೆಂಥಿಲ್ ನಟಿಸಿದ್ದರು.

ಇದೀಗ ಶಂಕರ್ ನಿರ್ದೇಶನದ ಮುಂಬರುವ ಇಂಡಿಯನ್ -2 ಸಿನಿಮಾದ ಚಿತ್ರೀಕರಣದಲ್ಲಿ ಕಮಲ್ ಹಾಸನ್ ಬ್ಯುಸಿಯಾಗಿದ್ದಾರೆ. ಏತನ್ಮಧ್ಯೆ ಕೋರಿಯೋಗ್ರಾಫರ್ ಪೀಟರ್ ಹೈನ್ ಸಂದರ್ಶನದಲ್ಲಿ ಸಿಮಿಮಾದ ಕೆಲವೊಂದು ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಇಂಡಿಯನ್ 2 ಸಿನಿಮಾದಲ್ಲಿಯೂ ಕಮಲ್ ಹಾಸನ್ ವಯಸ್ಸಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 2ನೇ ಭಾಗದಲ್ಲಿ ಆ್ಯಕ್ಷನ್ ಎಪಿಸೋಡ್ ಭರ್ಜರಿಯಾಗಿ ಮೂಡಿ ಬರಬೇಕಾಗಿದ್ದು, ಇದರಲ್ಲಿ 90 ವರ್ಷ ವಯಸ್ಸಿನ ಮುದುಕನ ದೈಹಿಕ ಅಭಿನಯ ನೈಜವಾಗಿ ಅಭಿವ್ಯಕ್ತವಾಗಬೇಕು ಎಂಬುದಾಗಿ ಕಮಲ್ ಹಾಸನ್ ಬಯಸಿರುವುದಾಗಿ ಪೀಟರ್ ಹೈಲ್ ತಿಳಿಸಿದ್ದಾರೆ.

ಇಂಡಿಯನ್ ಸಿನಿಮಾ ಸಾಹಸ ದೃಶ್ಯಗಳ ಚಿತ್ರೀಕರಣ ಭೋಪಾಲ್ ನಲ್ಲಿ ನಡೆಸಲು ಚಿತ್ರ ನಿರ್ಮಾಪಕರು ಸಿದ್ದತೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೇ ವಿದೇಶಗಳಲ್ಲಿನ ಸ್ಟಂಟ್ ಗಾಗಿ ಪೀಟರ್ ಹೈನ್ ಅವರನ್ನು ಆಯ್ಕೆ ಮಾಡಿದ್ದು, ಅದಕ್ಕಾಗಿ 40 ಕೋಟಿ ರೂಪಾಯಿ ವ್ಯಯಿಸಲು ಲೈಕಾ ಪ್ರೊಡಕ್ಷನ್ ನಿರ್ಧರಿಸಿದೆಯಂತೆ. ಈ ಮುಖ್ಯವಾದ ಸ್ಟಂಟ್ ಚಿತ್ರೀಕರಣದಲ್ಲಿ ಸುಮಾರು 2 ಸಾವಿರ ಕಿರಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ವರದಿ ವಿವರಿಸಿದೆ.

ಶಂಕರ್ ಅವರ ಇಂಡಿಯನ್ 2 ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಲಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಶಂಕರ್ ಮತ್ತು ಅನಿಲ್ ಕಪೂರ್ ಚರ್ಚೆ ನಡೆಸುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಂಡಿಯನ್ 2 ಸಿನಿಮಾದಲ್ಲಿ ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್, ಸಿದ್ದಾರ್ಥ್, ಪ್ರಿಯಾ ಭವಾನಿ, ಶಂಕರ್, ಬಾಬ್ಬಿ ಸಿಂಹ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ