“ನಾನೂ ಡ್ರಗ್ ಅಡಿಕ್ಟ್” ಈಗ ವೈರಲ್ ಆಗುತ್ತಿದೆ ಕಂಗನಾ ರಣಾವುತ್ ಹಳೇಯ ವಿಡಿಯೋ
Team Udayavani, Sep 13, 2020, 11:25 AM IST
ಮುಂಬೈ: ಬಾಲಿವುಡ್ ನ ನೆಪೊಟಿಸಂ, ಡ್ರಗ್ ಮಾಫಿಯಾದ ವಿರುದ್ಧ ಜೋರಾಗಿಯೇ ಧ್ವನಿ ಎತ್ತುತ್ತಿರುವ ನಟಿ ಕಂಗನಾ ರಣಾವುತ್ ಸ್ವತಃ ಡ್ರಗ್ ಅಡಿಕ್ಟ್ ಆಗಿದ್ದರು! ಇದಕ್ಕೆ ಪುಷ್ಟಿ ನೀಡುವಂತೆ ಕಂಗನಾ ಸ್ವತಃ ತಾನೇ ಹೇಳಿಕೊಂಡಿರುವ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ.
2020ರ ಮಾರ್ಚ್ 29 ರಂದು ನಾಲ್ಕು ನಿಮಿಷಗಳ ವಿಡಿಯೋ ಗಳ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ತಾನು ಡ್ರಗ್ ಅಡಿಕ್ಟ್ ಆಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.
ನನಗೆ 15-16 ವರ್ಷವಿದ್ದಾಗ ನಾನು ಮನೆ ಬಿಟ್ಟು ಓಡಿ ಬಂದೆ. ಚಿತ್ರರಂಗಕ್ಕೂ ಕೂಡಲೇ ಬಂದೆ. ಈ ವೇಳೆ ಮಾದಕ ದ್ರವ್ಯ ವ್ಯಸನಿಯಾಗಿದ್ದೆ. ನನ್ನ ಜೀವನದಲ್ಲಿ ತುಂಬಾ ನಡೆಯುತ್ತಿದೆ. ಇನ್ನೂ ಹದಿಹರೆಯದಲ್ಲಿದ್ದ ನನ್ನ ಜೀವನದಲ್ಲಿ ಆಗ ತುಂಬಾ ನಡೆಯುತ್ತಿತ್ತು ಎಂದು ಕ್ವೀನ್ ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮುಂಬೈ ಜಟಾಪಟಿ: ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗಲಿರುವ ಕಂಗನಾ ರಣಾವುತ್
ಸದ್ಯ ಬಾಲಿವುಡ್ ನಲ್ಲಿ ಡ್ರಗ್ ಮಾಫಿಯಾದ ದೊಡ್ಡ ಚರ್ಚೆಯೆ ನಡೆಯುತ್ತಿದೆ. ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಡ್ರಗ್ ಕೂಡಾ ತಳುಕು ಹಾಕಿಕೊಂಡಿದೆ. ಇದೇ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಶೋವಿಕ್ , ಸ್ಯಾಮುಯೆಲ್ ಮಿರಾಂಡ ಮುಂತಾದವರನ್ನು ಬಂಧಿಸಲಾಗಿದೆ.
View this post on Instagram
#KanganaRanaut talks about the time when she couldn’t close her eyes because tears won’t stop. ??
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್