ಲಲಿತ್ ಮೋದಿ – ಸುಶ್ಮಿತಾ ಸೇನ್ ಬ್ರೇಕಪ್? ವೈರಲ್ ಆಯಿತು ಇನ್ಸ್ಟಾ ಬಯೋ, ಪ್ರೊಫೈಲ್
ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಸಂಬಂಧದ ಬಗ್ಗೆ ಜೋರಾದ ಚರ್ಚೆಗಳಾಗಿತ್ತು
Team Udayavani, Sep 6, 2022, 6:02 PM IST
ಮುಂಬಯಿ: ಸೆಲೆಬ್ರಿಟಿಗಳು ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ಕೆಲ ಸಮಯದ ಹಿಂದೆ ತಮ್ಮ ಸಂಬಂಧದ ಬಗ್ಗೆ ಚರ್ಚೆಯಲ್ಲಿದ್ದರು. ಈಗ ಇಬ್ಬರು ಮತ್ತೆ ಸುದ್ದಿಯಾಗಿದ್ದಾರೆ.
ಲಲಿತ್ ಮೋದಿ ಜುಲೈ 14 ರಂದು ಸುಶ್ಮಿತಾ ಸೇನ್ ಅವರೊಂದಿಗೆ ಒಟ್ಟಿಗೆ ಇದ್ದ ಫೋಟೋವೊಂದನ್ನು ಹಂಚಿಕೊಂಡು, ‘ಬೆಟರ್ ಹಾಫ್ʼ, ಇಬ್ಬರು ಡೇಟಿಂಗ್ ನಲ್ಲಿದ್ದೇವೆ ಎಂದು ಟ್ವೀಟ್ ಮಾಡಿದ್ದರು.
ಇಬ್ಬರು ಮಾಲ್ಡೀವ್ಸ್ ನಲ್ಲಿ ಜೊತೆಯಾಗಿದ್ದ ಫೋಟೋ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಸಂಬಂಧದ ಬಗ್ಗೆ ಜೋರಾದ ಚರ್ಚೆಗಳಾಗಿತ್ತು. ಇವೆಲ್ಲದಕ್ಕೂ ಲಲಿತ್ ಮೋದಿ ಖಡಕ್ ಆಗಿ ಉತ್ತರ ನೀಡಿದ್ದರು.
ತನ್ನ ಸಂಬಂಧದ ಬಗ್ಗೆ ಲಲಿತ್ ಮೋದಿ, ತಮ್ಮ ಇನ್ಸ್ಟಾಗ್ರಾಮ್ ಪ್ರೂಫೈಲ್ ಗೆ ಇಬ್ಬರು ಜೊತೆಗಿದ್ದ ಫೋಟೋವನ್ನು ಹಾಕಿ, ಬಯೋದಲ್ಲಿ “ಫೈನಲಿ ನ್ಯೂ ಲೈಫ್ ವಿಥ್ ಮೈ ಪಾರ್ಟ್‌ನರ್ ಇನ್ ಕ್ರೈಮ್” ಎಂದು ಬರೆದುಕೊಂಡು ಸುಶ್ಮಿತಾ ಸೇನ್ ಅವರನ್ನು ಟ್ಯಾಗ್ ಮಾಡಿದ್ದರು.
ಇತ್ತೀಚೆಗೆ ನಟಿ ಸುಶ್ಮಿತಾ ಸೇನ್ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಅವರೊಂದಿಗೆ ಶಾಪಿಂಗ್ ಮಾಡುವ, ಬರ್ತ್ ಡೇ ಸೆಲೆಬ್ರೆಟ್ ಮಾಡಿದ ಫೋಟೋಗಳು ಇಂಟರ್ ನೆಟ್ ನಲ್ಲಿ ಸದ್ದು ಮಾಡಿತ್ತು.
ಈಗ ಲಲಿತ್ ಮೋದಿ ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ಪಿಕ್ಚರ್ ಬದಲಾಯಿಸಿ, ಬೇರೆ ಫೋಟೋ ಹಾಕಿದ್ದಾರೆ. ಆ ಫೋಟೋದಲ್ಲಿ ಹಾಗೂ ಬಯೋದಲ್ಲಿ ಸುಶ್ಮಿತಾ ಅವರ ಹೆಸರು ಮತ್ತು ಫೋಟೋವನ್ನು ತೆಗೆದಿದ್ದಾರೆ.
ಇದು ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ವದಂತಿಯನ್ನು ಹಬ್ಬಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಲಲಿತ್ ಮೋದಿ ಮತ್ತೆ ಟ್ರೋಲ್ ಆಗಿದ್ದಾರೆ.
ಆದರೆ ಇಬ್ಬರು ತಮ್ಮ ಬ್ರೇಕಪ್ ಬಗ್ಗೆ ಇದುವರೆಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಲಲಿತ್ ಮೋದಿ ಸುಶ್ಮಿತಾ ಸೇನ್ ಮಾಜಿ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡದ್ದಕ್ಕೆ ಬೇಸರ ಮಾಡಿಕೊಂಡಿದ್ದಾರ? ಎನ್ನುವುದು ಕೂಡ ಟಾಕ್ ಆಫ್ ದಿ ಟೌನ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೂಜಾ ಹೆಗ್ದೆ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್: ಮತ್ತೆ ‘ಪ್ರೀತಿ ವದಂತಿ’ ಶುರು
ಟಾಲಿವುಡ್ ರಂಗದ ʼಕಲಾ ತಪಸ್ವಿʼ, ದಿಗ್ಗಜ ನಿರ್ದೇಶಕ ಕೆ.ವಿಶ್ವನಾಥ್ ನಿಧನ
ಬಾಲಿವುಡ್ ಸ್ಟಾರ್ಸ್ ಅಕ್ಷಯ್ ಕುಮಾರ್,ಟೈಗರ್ ಶ್ರಾಫ್ ಡಾನ್ಸ್ ವೈರಲ್
ಹಸೆಮಣೆ ಏರಲು ಸಜ್ಜಾದ ʼಶೇರ್ ಷಾʼ ಜೋಡಿ ಸಿದ್ಧಾರ್ಥ್ – ಕಿಯಾರಾ: ಫೆ.6 ಕ್ಕೆ ಅದ್ಧೂರಿ ವಿವಾಹ
‘ಪ್ರಮುಖ ಪಾತ್ರಕ್ಕಾಗಿ…. ‘: ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ನಯನತಾರಾ