ಮೊದಲ ದಿನದ ಗಳಿಕೆಯಲ್ಲಿ ಮಿಶನ್ ಮಂಗಲ್ ಮುಂದೆ

ಮತ್ತೊಮ್ಮೆ ಜಾನ್ ಅಬ್ರಹಾಂಗಿಂತ ಅಕ್ಷಯ್ ಕುಮಾರ್ ಮುಂದೆ

Team Udayavani, Aug 16, 2019, 11:00 PM IST

ಮಿಶನ್ ಮಂಗಲ್ ನಿರ್ಧಾರಿತ ಕಕ್ಷೆಗೆ ಸೇರುವ ಲಕ್ಷಣಗಳು ಗೋಚರಿಸಿವೆ. ಕೆಲವು ವರ್ಷಗಳಿಂದ ವಿಭಿನ್ನ ಪಾತ್ರಗಳ ಮೂಲಕವೇ ಒಂದಿಷ್ಟು ನೈಜ ಪ್ರೇಕ್ಷಕರನ್ನು ಗಳಿಸಿಕೊಂಡಿರುವ ಅಕ್ಷಯ್ ಕುಮಾರ್ ಮಿಶನ್ ಮಂಗಲ್ ನ ಮೊದಲ ದಿನದ ಬಾಕ್ಸಾಫೀಸ್ ಸಂಗ್ರಹ ಮೋಸ ಮಾಡಿಲ್ಲ.

ಹಾಗೆ ಹೇಳುವುದಾದರೆ, ಮಿಶನ್ ಮಂಗಲ್ ನ ಮೊದಲ ದಿನದ ಗಳಿಕೆಯೇ ಇದುವರೆಗಿನ ಅಕ್ಷಯ್ ಕುಮಾರ್ ಚಿತ್ರಗಳ ಪೈಕಿ ಹೆಚ್ಚು. ಚಿತ್ರ ಬಿಡುಗಡೆಗೊಂಡ ಮೊದಲ ದಿನ ದೇಶದ ಸುಮಾರು 3 ಸಾವಿರ ಚಿತ್ರಮಂದಿರಗಳಲ್ಲಿ  ಪ್ರದರ್ಶಿತವಾಗಿತ್ತು. ಒಟ್ಟೂ 29 ಕೋಟಿ ರೂ. ಗಳಿಕೆಯನ್ನು ಕಂಡಿದೆ. ಈ ಹಿಂದಿನ ಅವರ ಚಿತ್ರ ಗೋಲ್‌ಡ್‌ 25 ಕೋಟಿ ರೂ. ಮೊದಲ ದಿನ ಗಳಿಸಿತ್ತು.

ಆಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನ. ಜನರೆಲ್ಲಾ ದೇಶಭಕ್ತಿಯ ಆಚರಣೆಯಲ್ಲಿ ತೊಡಗಿರುತ್ತಾರೆ. ಈ ಹೊತ್ತಿಿನಲ್ಲಿ ದೇಶವೇ ಹೆಮ್ಮೆ ಪಡುವ ಮಂಗಲಯಾನದ ಕುರಿತಾದ ಚಿತ್ರ ಬಿಡುಗಡೆಗೊಂಡರೆ ಒಂದಿಷ್ಟು ವ್ಯಾಪಾರ ಕುದುರಬಹುದೆಂಬ ಚಿತ್ರ ತಂಡದ ಲೆಕ್ಕಾಚಾರ ಕೈ ಹಿಡಿದಿದೆ.

ಜಗನ್ ಶಕ್ತಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜತೆ ಹಿಂದಿಯ ಚಿತ್ರನಟಿಯರ ದಂಡೇ ಇದೆ. ವಿದ್ಯಾ ಬಾಲನ್, ತಾಪಸ್ಸಿ ಪನ್ನು, ಸೋನಾಕ್ಷಿ ಸಿನ್ಹಾ, ಕೀರ್ತಿ ಕುಲ್ಹರಿ, ನಿತ್ಯಾ ಮೆನನ್ ಇದ್ದಾರೆ.

ಬಾಟ್ಲಾ ಹೌಸ್ ಪ್ರಭಾವ ಕಡಿಮೆ
ಮಿಶನ್ ಮಂಗಲ್ ಗೆ ಬಾಕ್ಸಾಫೀಸಿನಲ್ಲಿ ಜಾನ್ ಅಬ್ರಹಾಂ ಅಭಿನಯದ ಬಾಟ್ಲಾ ಹೌಸ್ ಪೈಪೋಟಿ ಕೊಡಬಹುದೇ ಎಂದು ಲೆಕ್ಕ ಹಾಕಲಾಗಿತ್ತು. ಆದರೆ ಅಂಥ ಪ್ರಭಾವ ಬೀರಿದಂತೆ ತೋರುತ್ತಿಲ್ಲ. ಬಾಟ್ಲಾ ಹೌಸ್ ಮೊದಲ ದಿನ ಸುಮಾರು 14 ಕೋಟಿ ರೂ. ಗಳಿಸಿದೆ.

ಹಾಗೆಂದು ಇದೇನೂ ಅಕ್ಷಯ್ ಕುಮಾರ್ ಹಾಗೂ ಜಾನ್ ಅಬ್ರಹಾಂ ಸಿನಿಮಾ ಕೌಂಟರ್ ನಲ್ಲಿ ಮುಖಾಮುಖಿಯಾಗುತ್ತಿರುವುದೇನೂ ಹೊಸದಲ್ಲ. ಆದರೆ ಹಿಂದೆಯೂ ಅಕ್ಷಯ್ ಗೆದ್ದಿದ್ದರು, ಈ ಬಾರಿಯೂ ಅಕ್ಷಯ್ ಗೆದ್ದಿದ್ದಾರೆ.

ಜಾನ್ ಅಬ್ರಹಾಂ ರ ಸತ್ಯಮೇವ ಜಯತೇ ಸಿನಿಮಾ ಬಿಡುಗಡೆಯ ದಿನದಂದೇ ಅಕ್ಷಯ್ ಕುಮಾರ್ ಅವರ ಗೋಲ್ಡ್ ಚಿತ್ರ ಬಿಡುಗಡೆಯಾಗಿತ್ತು. ಗೋಲ್ಡ್ 25 ಕೋಟಿ ಗಳಿಸಿದ್ದರೆ, ಸತ್ಯಮೇವ ಜಯತೇ 20 ಕೋಟಿ ಗಳಿಸಿತ್ತು. ಮಂಗಲ್ ಮಿಶನ್ ವೀಕೆಂಡ್ ನಲ್ಲಿ ಎಷ್ಟು ಗಳಿಸೀತೆಂಬ ಕುತೂಹಲ ಕಾಡಿದೆ.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ