ನೀನು ಸೂಪರ್ಸ್ಟಾರ್ ಇರ್ಬಹುದು,ಆದ್ರೆ ಆಲಿಬಾಗ್ ನಿಂದಲ್ಲ…
Team Udayavani, Nov 11, 2017, 12:45 PM IST
ಮುಂಬಯಿ: ಸ್ಟಾರ್ನಟ ಶಾರುಖ್ ಖಾನ್ಗೆ ಅಭಿಮಾನಿಗಳ ಎದುರೆ ಆಲಿಬಾಗ್ನ ಎಂಎಲ್ಸಿ ಯೊಬ್ಬರು ತಾಳ್ಮೆ ಕಳೆದು ಕೊಂಡು ಬೈದಿರುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ನವೆಂಬರ್ 2 ರಂದು ಘಟನೆ ನಡೆದಿದ್ದು, ವಿಡಿಯೋ ತಡವಾಗಿ ವೈರಲ್ ಆಗಿದೆ. ಬರ್ತ್ ಡೇ ಆಚರಣೆಗೆಂದು ಅಲಿಬಾಗ್ ಜೆಟ್ಟಿಗೆ ತೆರಳಿ ವಿಹಾರ ನೌಕೆಯಲ್ಲಿ ಶಾರುಖ್ ಖಾನ್ ವಿಹರಿಸುತ್ತಿದ್ದರು. ಇದೇ ವೇಳೆ ಎಂಎಲ್ಸಿ ಜಯಂತ್ ಪಾಟೀಲ್ ಅವರು ರಾಯ್ಘಡ್ನ ಕೊಲಾಬಾದಲ್ಲಿರುವ ನಿವಾಸಕ್ಕೆ ತೆರಳು ಸ್ಥಳಕ್ಕಾಗಮಿಸಿದ್ದಾರೆ.
ಶಾರುಖ್ರಿಂದಾಗಿ ಪಾಟೀಲ್ ಪ್ರಯಾಣಿಸಬೇಕಾಗಿದ್ದ ಬೋಟ್ ಬರುವುದು ವಿಳಂಬವಾಯಿತು. ವಿಹರ ನೌಕೆ ಏರಲು ತಡವಾಗಿದ್ದು, ಅಭಿಮಾನಿಗಳ ಸಂದಣಿಯಲ್ಲಿ ಪಾಟೀಲ್ ಪರದಾಡಬೇಕಾಯಿತು. ನೌಕೆ ಏರುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಪಾಟೀಲ್ ಶಾರುಖ್ಗೆ ಬೈದೇ ಬಿಟ್ಟಿದ್ದಾರೆ. ‘ನೀನು ಸೂಪರ್ ಸ್ಟಾರ್ ಇರಬಹುದು ಆದ್ರೆ ಆಲಿಬಾಗ್ ನಿಂದಲ್ಲ’ ಎಂದಿದ್ದಾರೆ.
ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗದ ಶಾರುಖ್ ಹೊರಬರುತ್ತಿದ್ದಂತೆ ನೂರಾರು ಅಭಿಮಾನಿಗಳು ಸಂಭ್ರಮದಿಂದ ಜೈಕಾರ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?