ಮಿ.ಇಂಡಿಯಾದ ಮೊಗ್ಯಾಂಬೋ ಪಾತ್ರ ನಾನು ಮಾಡಬೆಕಿತ್ತು

ಪ್ರಸಿದ್ದ ಪಾತ್ರದ ಆಫರ್ ಮೊದಲು ತನಗೆ ಬಂದಿತ್ತು ಎಂದ ಅನುಪಮ್ ಖೇರ್

Team Udayavani, Jun 23, 2019, 4:24 PM IST

ಮುಂಬೈ: ಭಾರತೀಯ ಚಿತ್ರ ಪ್ರೇಮಿಗಳಿಗೆ ಸದಾ ನೆನಪಿಗೆ ಉಳಿಯುವಂತಹ ಪಾತ್ರಗಳಲ್ಲಿ ಒಂದು ಮಿಸ್ಟರ್ ಇಂಡಿಯಾ ಚಿತ್ರದ ಮೊಗ್ಯಾಂಬೋ ಪಾತ್ರ. ಈ ಚಿತ್ರದಲ್ಲಿ ಖ್ಯಾತ ನಟ ಅಮರೇಶ್ ಪುರಿ ಈ ಪಾತ್ರವನ್ನು ನಿರ್ವಹಿಸಿದ್ದರು. 1987 ರಲ್ಲಿ ತೆರೆಕಂಡ ಈ ಚಿತ್ರದ ಪಾತ್ರದ ಬಗ್ಗೆ ಈಗ ಯಾಕೆ ಮಾತು ಎಂದು ಕೊಳ್ತೀರಾ ? ಮುಂದೆ ಓದಿ.

ಬಾಲಿವುಡ್ ನಟ ಅನುಪಮ್ ಖೇರ್ ಅವರು ಅಮರೀಶ್ ಪುರಿಯವರ ಮೊಗ್ಯಾಂಬೋ ಪಾತ್ರದ ಬಗ್ಗೆ ಮಾತನಾಡಿದ್ದು, ಆ ಪಾತ್ರವನ್ನು ತಾನು ಮಾಡಬೇಕಿತ್ತು ಎಂದಿದ್ದಾರೆ.

ಶನಿವಾರ ಅಮರೀಶ್ ಪುರಿಯವರ ಪುಣ್ಯತಿಥಿಯ ಸಂದರ್ಭದಲ್ಲಿ ಅನುಪಮ್ ಖೇರ್ ಮಾತನಾಡಿದರು. ಅಮರೀಶ್ ಪುರಿಗಿಂತ ಮೊದಲು ಆ ಪಾತ್ರದ ಆಫರ್ ನನಗೆ ಬಂದಿತ್ತು. ಆದರೆ ಒಂದೆರಡು ತಿಂಗಳ ನಂತರ ನನ್ನ ಬದಲಿಗೆ ಅಮರೀಶ್ ಪುರಿ ಅವರಿಗೆ ನೀಡಲಾಗಿತ್ತು. ಯಾವುದೇ ನಟನಿಗಾದರೂ ತನ್ನ ಪಾತ್ರ ಕೈ ತಪ್ಪಿದಾಗ ಬೇಸರವಾಗುತ್ತದೆ. ಆದರೆ ಚಿತ್ರ ನೋಡಿದಾಗ ಅದರಲ್ಲಿ ಅಮರೀಶ್ ಪುರಿಯವರ ಪಾತ್ರ ನೋಡಿ ಚಿತ್ರ ತಂಡ ಮೊಗ್ಯಾಂಬೋ ಪಾತ್ರವನ್ನು ಅವರಿಗೆ ನೀಡಿ ಒಳ್ಳೆಯ ನಿರ್ಧಾರ ಮಾಡಿದೆ ಎಂದುಕೊಂಡಿದ್ದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ