ಜತೆಗೆ ಬಾಳಲು ತುಂಬಾ ಕಷ್ಟ – ವಿವಾಹ ವಿಚ್ಛೇದನ ಬೇಕು; ನವಾಜುದ್ದೀನ್ ಪತ್ನಿ ಆಲಿಯಾ
ಹೌದು ನಾನು ಪತಿ ನವಾಜುದ್ದೀನ್ ಸಿದ್ದಿಕಿಯಿಂದ ಬೇರೆಯಾಗಲು ಲೀಗಲ್ ನೋಟಿಸ್ ಕಳುಹಿಸಿದ್ದೇನೆ.
Team Udayavani, May 18, 2020, 8:19 PM IST
ನವದೆಹಲಿ:ಬಾಲಿವುಡ್ ಜನಪ್ರಿಯ ನಟ ನವಾಜುದ್ದೀನ್ ಸಿದ್ದಿಕಿ ಕುಟುಂಬ ಕ್ವಾರಂಟೈನ್ ನಲ್ಲಿ ಇದ್ದಿರುವುದಾಗಿ ಸುದ್ದಿ ಹೊರಬಿದ್ದ ಬೆನ್ನಲ್ಲೇ ವಿವಾಹ ವಿಚ್ಛೇದನ ಕೋರಿ ಆಲಿಯಾ ಸಿದ್ದಿಕಿ ನವಾಜುದ್ದೀನ್ ಗೆ ನೋಟಿಸ್ ಜಾರಿ ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಜೀ ನ್ಯೂಸ್ ಡಾಟ್ ಕಾಮ್ ಜತೆ ಮಾತನಾಡಿರುವ ಸಿದ್ದಿಕಿ ಪತ್ನಿ ಆಲಿಯಾ, ಹೌದು ನಾನು ಪತಿ ನವಾಜುದ್ದೀನ್ ಸಿದ್ದಿಕಿಯಿಂದ ಬೇರೆಯಾಗಲು ಲೀಗಲ್ ನೋಟಿಸ್ ಕಳುಹಿಸಿದ್ದೇನೆ. ಆದರೆ ನನಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದೆ.
ನೀವು ಯಾವ ಕಾರಣಕ್ಕಾಗಿ ಈ ನಿರ್ಧಾರಕ್ಕೆ ಬಂದಿದ್ದೀರಿ ಎಂಬ ಪ್ರಶ್ನೆಗೆ, ಈ ಸಂದರ್ಭದಲ್ಲಿ ನಾನು ಏನೂ ಹೇಳಲ್ಲ. ಹೌದು ಕಳೆದ ಹತ್ತು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದೇನೆ. ಈ ಲಾಕ್ ಡೌನ್ ಸಂದರ್ಭದಲ್ಲಿ ನಮ್ಮ ವಿವಾಹವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದೇನೆ ಎಂದು ಆಲಿಯಾ ತಿಳಿಸಿದ್ದಾರೆ.
ಮೇ 7ರಂದು ಇ ಮೇಲ್ ಹಾಗೂ ವಾಟ್ಸಪ್ ಮೂಲಕ ನೋಟಿಸ್ ಕಳುಹಿಸಿದ್ದು, ನವಾಜುದ್ದೀನ್ ಸಿದ್ದಿಕಿ ವತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೌದು ನಾವು ನವಾಜುದ್ದೀನ್ ಗೆ ನೋಟಿಸ್ ಕಳುಹಿಸಿದ್ದೇವೆ ಎಂದು ಆಲಿಯಾ ವಕೀಲರು ಸ್ಪಷ್ಟಪಡಿಸಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಸದ್ಯ ಉತ್ತರಪ್ರದೇಶದ ಬುಧಾನಾದಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಲಾಕ್ ಡೌನ್ ನಿರ್ಬಂಧದ ನಡುವೆ ಮುಂಬೈಯಲ್ಲಿದ್ದ ನವಾಜುದ್ದಿನ್ ಸಿದ್ದಿಕಿಗೆ ಬುಧಾನಾಗೆ ತೆರಳಲು ಪಾಸ್ ನೀಡಲಾಗಿತ್ತು. ಅಲ್ಲದೇ 14 ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಜಿಲ್ಲಾಡಳಿತ ಸೂಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ
ಕರಣ್ ಜೋಹರ್ ಪಾರ್ಟಿಯಲ್ಲಿ ತನ್ನ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಹೃತಿಕ್ ರೋಶನ್
@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ