ಶ್ರೀದೇವಿಯನ್ನು ಮರೆಯುವುದು ಎಂದಿಗೂ ಸಾಧ್ಯವಿಲ್ಲ :ಬೋನಿ ಕಪೂರ್‌

ಸಂದರ್ಶನವೊಂದರಲ್ಲಿ ಪತ್ನಿಯನ್ನು ನೆನೆದು ಭಾವುಕ

Team Udayavani, May 4, 2019, 12:35 PM IST

ಹೊಸದಿಲ್ಲಿ : ಬಾಲಿವುಡ್‌ ನಟಿ ಶ್ರೀದೇವಿ ಕಳೆದ ವರ್ಷ ದಿಢೀರ್‌ ಸಾವನ್ನಪ್ಪುವ ಮೂಲಕ ಕುಟುಂಬ ಮತ್ತು ಇಡೀ ದೇಶಕ್ಕೆ ಶಾಕ್‌ ತಂದಿಟ್ಟಿದ್ದರು. ಪತಿ ಬೋನಿ ಕಪೂರ್‌ ಸಂದರ್ಶನವೊಂದರಲ್ಲಿ ಪತ್ನಿಯನ್ನುಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿದ್ದಾರೆ.

ಚಿತ್ರ ವಿಮರ್ಶಕಮತ್ತು ವ್ಯಾಪಾರ ವಿಮರ್ಶಕ ಕೋಮಲ್‌ ನಹ್ತಾ ಅವರು ಹೊಸ ಶೋ ವೊಂದರ ಟೀಸರ್‌ ಬಿಡುಗಡೆಗೊಳಿಸಿದ್ದು, ಬೋನಿ ಅವರು ಪ್ರಶ್ನೆಯೊಂದಕ್ಕೆ ಶ್ರೀದೇವಿಯನ್ನು ಮರೆಯುವುದು ಅಸಾಧ್ಯ ಎಂದು ಕಣ್ಣೀರನ್ನು ತಡೆಯಲು ಮುಂದಾಗಿದ್ದಾರೆ.

ಮನೆಯಲ್ಲಿ ಪತ್ನಿಯ ಬೆಂಬಲ ಇದ್ದರೆ ನಾವು ಏನನ್ನೂ ಗೆಲ್ಲಬಹುದಾಗಿದೆ ಎಂದು ಬೋನಿ ಕಪೂರ್‌ ಹೇಳಿದ್ದಾರೆ.

ಶ್ರಿದೇವಿಯವರು 2018ರ ಫೆಬ್ರವರಿ 24 ರಂದು ದುಬೈನ ಹೊಟೇಲ್‌ವೊಂದರಲ್ಲಿ ಆಕಸ್ಮಿಕವಾಗಿ ಮುಳುಗಿ ಕೊನೆಯುಸಿರೆಳೆದಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ