ಖಾನ್ ಗಳೊಂದಿಗೆ ಕೆಲಸ ಮಾಡಲು ಎಂದಿಗೂ ಬಯಸಿಲ್ಲ.. “ಗುಡ್ ಬೈ” ನಿರ್ಮಾಪಕಿ
Team Udayavani, Sep 6, 2022, 5:09 PM IST
ಮುಂಬಯಿ: ಅಮಿತಾಭ್ – ರಶ್ಮಿಕಾ ಮಂದಣ್ಣ ಅವರ ʼಗುಡ್ ಬೈʼ ಚಿತ್ರದ ಟ್ರೇಲರ್ ( ಸೆ.6,ಸೋಮವಾರ) ರಿಲೀಸ್ ಆಗಿದೆ. ಬಾಲಾಜಿ ಟೆಲಿಫಿಲ್ಮ್ಸ್ ಮೂಲಕ ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಮುಂಬಯಿಯಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕಿ ಏಕ್ತಾ ಕಪೂರ್, “ಬಾಲ್ಯದಿಂದಲೂ ನನಗೆ ಅಮಿತಾಭ್ ಅವರೊಂದಿಗೆ ಕೆಲಸ ಮಾಡುವ ಕನಸಿತ್ತು. ಬಾಲ್ಯದಲ್ಲಿ ಅಮಿತಾಭ್ ಬಚ್ಚನ್ ಮನೆಗೆ ಬರ್ತ್ ಡೇ ಪಾರ್ಟಿಗೆ ಹೋಗುತ್ತಿದ್ದೆ. ಶ್ವೇತಾ ಬಚ್ಚನ್ ( ನಂದ ಬಚ್ಚನ್), ಅಭಿಷೇಕ್ ಬಚ್ಚನ್ ನನಗೆ ಒಳ್ಳೆ ಸ್ನೇಹಿತರು. ಖಾನ್ ಗಳೊಂದಿಗೆ ಕೆಲಸ ಮಾಡಲು ನಾನು ಎಂದಿಗೂ ಬಯಸಿಲ್ಲ. ನನಗೆ ಅಮಿತಾಭ್ ಬಚ್ಚನ್ ಅವರೊಂದಿಗೆ ಮಾತ್ರ ಕೆಲಸ ಮಾಡುವುದು ಕನಸಾಗಿತ್ತು. ಕೊನೆಗೂ ಆ ಆಸೆ ನೆರವೇರಿದೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವವೇ ಬೇರೆ” ಎಂದು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಚೊಚ್ಚಲ ಬಾಲಿವುಡ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನಲ್ಲಿ ಅಪ್ಪ – ಮಗಳ ಸಂಬಂಧವನ್ನು ಆಧುನಿಕತೆ ಹಾಗೂ ಮಾರ್ಡನ್ ಕಾಲದ ಶೈಲಿಯಲ್ಲಿ ಹೇಳಲಾಗಿದೆ.
ವಿಕಾಸ್ ಬಹ್ಲ್ ನಿರ್ದೇಶನದ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ರಶ್ಮಿಕಾ ಮಂದಣ್ಣ, ನೀನಾ ಗುಪ್ತಾ ಮುಂತಾದ ಕಲಾವಿದರು ನಟಿಸಿದ್ದಾರೆ. ಅಕ್ಟೋಬರ್ 7 ರಂದು ʼಗುಡ್ ಬೈ ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್